ಇಸ್ರೇಲ್-ಹಮಾಸ್ ಯುದ್ಧ: ಗಾಜಾದಲ್ಲಿ 'ಫೌಡಾ' ನಟ ಇಡಾನ್ ಅಮೆಡಿಗೆ ಗಂಭೀರ ಗಾಯ

ಇಸ್ರೇಲ್- ಹಮಾಸ್ ಯುದ್ಧ ಮುಂದುವರೆದಿದ್ದು, ಗಾಜಾಪಟ್ಟಿಯಲ್ಲಿ ನಡೆದ ಯುದ್ಧದಲ್ಲಿ ನೆಟ್‌ಫ್ಲಿಕ್ಸ್ ಸರಣಿ "ಫೌಡಾ" ಖ್ಯಾತಿಯ ಇಸ್ರೇಲಿ ನಟ-ಗಾಯಕ ಇಡಾನ್ ಅಮೆಡಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಫೌಡಾ ನಟ ಇಡಾನ್ ಅಮೆಡಿ
ಫೌಡಾ ನಟ ಇಡಾನ್ ಅಮೆಡಿ

ಜೆರುಸಲೇಂ: ಇಸ್ರೇಲ್- ಹಮಾಸ್ ಯುದ್ಧ ಮುಂದುವರೆದಿದ್ದು, ಗಾಜಾಪಟ್ಟಿಯಲ್ಲಿ ನಡೆದ ಯುದ್ಧದಲ್ಲಿ ನೆಟ್‌ಫ್ಲಿಕ್ಸ್ ಸರಣಿ "ಫೌಡಾ" ಖ್ಯಾತಿಯ ಇಸ್ರೇಲಿ ನಟ-ಗಾಯಕ ಇಡಾನ್ ಅಮೆಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಸ್ರೇಲಿ ರಾಜತಾಂತ್ರಿಕ ಅವಿಯಾ ಲೆವಿ  ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಮೆಡಿ ಗಾಯಗೊಂಡಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇಡಾನ್ ಅಮೆಡಿ ಶೀಘ್ರದಲ್ಲಿಯೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವುದಾಗಿ ಲೇವಿ ಫೋಸ್ಟ್ ಮಾಡಿದ್ದಾರೆ. 35 ವರ್ಷದ ಅಮೆಡಿ, ಇಸ್ರೇಲ್ ರಕ್ಷಣಾ ಪಡೆಯ ಪರವಾಗಿ ಹೋರಾಡುತ್ತಿದ್ದರು ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಸೋಮವಾರ ಅವರನ್ನು ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು,  ಚಿಕಿತ್ಸೆ ನೀಡಲಾಗಿದೆ. ತಮ್ಮ ಮಗನಿಗೆ ಯಾವುದೇ ಅಪಾಯವಿಲ್ಲ ಎಂದು ಇಸ್ರೇಲಿ ಸುದ್ದಿವಾಹಿನಿಯೊಂದಕ್ಕೆ ಅವರ ತಂದೆ  ಹೇಳಿದ್ದಾರೆ. ಅಮೆಡಿ ಗಾಯಗೊಂಡಾಗ ಯುದ್ಧ ಎಂಜಿನಿಯರಿಂಗ್ ಕಾರ್ಪ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. 

ಸೋಮವಾರ ಸಂಜೆ 4 ಗಂಟೆಗೆ ಅವರನ್ನು ರಾಮತ್ ಗನ್‌ನಲ್ಲಿರುವ ಶೆಬಾ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಿ, ತುರ್ತು ಮತ್ತು ಸುದೀರ್ಘ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅರೇಬಿಕ್‌ನಲ್ಲಿ "ಅವ್ಯವಸ್ಥೆ" ಎಂಬರ್ಥದ "ಫೌಡಾ" ದಲ್ಲಿ  ಐಡಿಫ್ ನ ಸೈನಿಕ ಸಾಗಿ ತ್ಜುರ್ ಪಾತ್ರದಲ್ಲಿ ನಟ ಇಡಾನ್ ಅಮೆಡಿ ಹೆಸರುವಾಸಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com