ರಾಮ ಮಂದಿರ ಉದ್ಘಾಟನೆ ದಿನ ಹಿಂದೂ ನೌಕರರಿಗೆ 2 ಗಂಟೆ ವಿಶೇಷ ಬ್ರೇಕ್ ನೀಡಿದ ಮಾರಿಷಸ್

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನಾ ಸಮಾರಂಭ ವೀಕ್ಷಿಸಲು ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಹಿಂದೂ ನೌಕರರಿಗೆ ಎರಡು ಗಂಟೆಗಳ ಕಾಲ ವಿಶೇಷ ರಜೆ ನೀಡಲು ಮಾರಿಷಸ್ ಸರ್ಕಾರ...
ಅಯೋಧ್ಯೆ ರಾಮಮಂದಿರ
ಅಯೋಧ್ಯೆ ರಾಮಮಂದಿರ

ಪೋರ್ಟ್ ಲೂಯಿಸ್: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನಾ ಸಮಾರಂಭ ವೀಕ್ಷಿಸಲು ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಹಿಂದೂ ನೌಕರರಿಗೆ ಎರಡು ಗಂಟೆಗಳ ಕಾಲ ವಿಶೇಷ ರಜೆ ನೀಡಲು ಮಾರಿಷಸ್ ಸರ್ಕಾರ ನಿರ್ಧರಿಸಿದೆ.
  
ರಾಮ ಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ನಾಯಕರು ಭಾಗವಹಿಸಲಿದ್ದು, ಸಮಾರಂಭ ನೇರ ಪ್ರಸಾರವಾಗಲಿದೆ.

"ಅಯೋಧ್ಯೆ ರಾಮಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ, ಸೇವೆಯ ಅಗತ್ಯತೆಗಳಿಗೆ ಒಳಪಟ್ಟು, ಹಿಂದೂ ಅಧಿಕಾರಿಗಳಿಗೆ ಎರಡು ಗಂಟೆಗಳ ವಿಶೇಷ ರಜೆ ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಭಾರತದಲ್ಲಿ ಅಯೋಧ್ಯೆ ರಾಮಮಂದಿರ, ಇದು ಅಯೋಧ್ಯೆಯಲ್ಲಿ ಭಗವಾನ್ ರಾಮನ ಪುನರಾಗಮನವನ್ನು ಸಂಕೇತಿಸುವ ಒಂದು ಹೆಗ್ಗುರುತಿನ ಸಮಾರಂಭವಾಗಿದೆ ಅಂತ ಮಾರಿಷಸ್ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಭಾರತದಲ್ಲಿ ರಾಮ ಮಂದಿ ಉದ್ಘಾಟನೆ ದಿನ ಎರಡು ಗಂಟೆಗಳ ಕಾಲ ವಿರಾಮ ನೀಡುವಂತೆ ಹಿಂದೂ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಮಾಡಿದ್ದ ಮನವಿಯನ್ನು ಮಾರಿಷಸ್ ಸರ್ಕಾರ ಅನುಮೋದಿಸಿದೆ.

ಮಾರಿಷಸ್‌ನಲ್ಲಿ ಹಿಂದೂ ಧರ್ಮವು ಅತಿದೊಡ್ಡ ಧರ್ಮವಾಗಿದೆ. 2011 ರಲ್ಲಿ ಮಾರಿಷಸ್ ಹಿಂದೂಗಳು ಜನಸಂಖ್ಯೆಯ ಸರಿಸುಮಾರು ಶೇ. 48.5 ರಷ್ಟು ಇತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com