ಕೀನ್ಯಾದ ಡೂಮ್ಸ್‌ಡೇ ಕಲ್ಟ್ ನಾಯಕ ಪಾಲ್ ಮೆಕೆಂಜಿ ವಿರುದ್ಧ 191 ಮಕ್ಕಳು ಸೇರಿ 429 ಜನರನ್ನು ಕೊಂದ ಆರೋಪ!

191 ಮಕ್ಕಳು ಸೇರಿ 429 ಮಂದಿ ಹತ್ಯೆ ಆರೋಪವನ್ನು ಎದುರಿಸುತ್ತಿರುವ ಡೂಮ್ಸ್‌ಡೇ ಕಲ್ಟ್ ನಾಯಕ ಪಾಲ್ ಮೆಕೆಂಜಿ ಮತ್ತು ಆತನ 30 ಅನುಯಾಯಿಗಳನ್ನು ಕರಾವಳಿ ಪಟ್ಟಣವಾದ ಮಲಿಂಡಿಯಲ್ಲಿರುವ ಕೀನ್ಯಾದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಪಾಲ್ ಮೆಕೆಂಜಿ
ಪಾಲ್ ಮೆಕೆಂಜಿ
Updated on

ನೈರೋಬಿ: 191 ಮಕ್ಕಳು ಸೇರಿ 429 ಮಂದಿ ಹತ್ಯೆ ಆರೋಪವನ್ನು ಎದುರಿಸುತ್ತಿರುವ ಡೂಮ್ಸ್‌ಡೇ ಕಲ್ಟ್ ನಾಯಕ ಪಾಲ್ ಮೆಕೆಂಜಿ ಮತ್ತು ಆತನ 30 ಅನುಯಾಯಿಗಳನ್ನು ಕರಾವಳಿ ಪಟ್ಟಣವಾದ ಮಲಿಂಡಿಯಲ್ಲಿರುವ ಕೀನ್ಯಾದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಹೈಕೋರ್ಟ್ ನ್ಯಾಯಾಧೀಶ ಮುಗುರೆ ಥಾಂಡೆ ಅವರು ಪ್ರಾಸಿಕ್ಯೂಟರ್‌ಗಳ ವಾದದಂತೆ ಪಾಲ್ ಮೆಕೆಂಜಿ ಮಾನಸಿಕ ಮೌಲ್ಯಮಾಪನಕ್ಕೆ ಒಳಗಾಗಬೇಕು. ಫೆ. 6ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಮನವಿಯನ್ನು ಪುರಸ್ಕರಿಸಿದ್ದು ಈ ಹಿನ್ನೆಲೆಯಲ್ಲಿ ಮೆಕೆಂಜಿ ಮತ್ತು ಇತರ ಶಂಕಿತರು ಅರ್ಜಿಗಳಿಗೆ ಕೋರ್ಟ್ ಮನ್ನಣೆ ನೀಡಲಿಲ್ಲ. ಪ್ರಾಸಿಕ್ಯೂಷನ್ ಚಾರ್ಜ್ ಶೀಟ್ ಪ್ರಕಾರ 191 ಮೃತ ಮಕ್ಕಳ ಪೈಕಿ 180 ಮಕ್ಕಳ ಅವಶೇಷಗಳನ್ನು ಗುರುತಿಸಲಾಗಿಲ್ಲ ಎಂದು ತಿಳಿದುಬಂದಿದೆ.

ಮೆಕೆಂಜಿ ಮತ್ತು ಅವರ ಕೆಲವು ಅನುಯಾಯಿಗಳು ಅವರ ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್‌ನ 429 ಸದಸ್ಯರ ಸಾವಿಗೆ ಕಾರಣವೆಂದು ಆರೋಪಿಸಲಾಗಿದೆ. ಕಿಲಿಫಿಯ ಕರಾವಳಿ ಕೌಂಟಿಯ ಶಾಕಾಹೋಲಾ ಅರಣ್ಯ ಎಂದು ಕರೆಯಲ್ಪಡುವ ದೂರದ ಪ್ರದೇಶದಲ್ಲಿ 800 ಎಕರೆ ರ್ಯಾಂಚ್‌ನಲ್ಲಿ ಡಜನ್‌ಗಟ್ಟಲೆ ಸಮಾಧಿಗಳಲ್ಲಿ ಮೃತದೇಹಗಳು ಪತ್ತೆಯಾಗಿತ್ತು.

15 ಚರ್ಚ್ ಸದಸ್ಯರನ್ನು ಪೊಲೀಸರು ರಕ್ಷಿಸಿದ ನಂತರ ಪ್ರಕರಣ ಬಹಿರಂಗಗೊಂಡಿತ್ತು. ರಕ್ಷಿತ ಸದಸ್ಯರು ತನಿಖಾಧಿಕಾರಿಗಳಿಗೆ ಮೆಕೆಂಜಿ ಅವರು ಜಗತ್ತು ಅಂತ್ಯಗೊಳ್ಳುವ ಮೊದಲು ಅನಿರ್ದಿಷ್ಟಾವಧಿ ಉಪವಾಸ ಮಾಡಲು ಸೂಚಿಸಿದ್ದಾರೆ ಎಂದು ಹೇಳಿದರು. 15 ಮಂದಿಯಲ್ಲಿ ನಾಲ್ವರು ಆಸ್ಪತ್ರೆಗೆ ಕರೆದೊಯ್ದ ನಂತರ ಸಾವನ್ನಪ್ಪಿದ್ದಾರೆ.

ಕೆಲವು ದೇಹಗಳ ಶವಪರೀಕ್ಷೆಯಲ್ಲಿ ಹಸಿವು, ಕತ್ತು ಹಿಸುಕುವಿಕೆ ಅಥವಾ ಉಸಿರುಗಟ್ಟಿಸುವಿಕೆಯಿಂದ ಮೃತಪಟ್ಟಿದ್ದಾರೆ ಎಂದು ತೋರಿಸಿದೆ. 95 ಜನರ ವಿರುದ್ಧ ಕೊಲೆ, ಕ್ರೌರ್ಯ, ಮಕ್ಕಳ ಚಿತ್ರಹಿಂಸೆ ಮತ್ತು ಇತರ ಅಪರಾಧಗಳ ಆರೋಪ ಹೊರಿಸಲಾಗುವುದು ಎಂದು ಕೀನ್ಯಾದ ಉನ್ನತ ಪ್ರಾಸಿಕ್ಯೂಟರ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com