ಭಾರತಕ್ಕೆ ಯುಎನ್ಎಸ್ ಸಿ ಶಾಶ್ವತ ಸದಸ್ಯತ್ವ ಇಲ್ಲದೇ ಇರುವುದು ಅಸಮಂಜಸ: ಸುಧಾರಣೆಗೆ ಎಲಾನ್ ಮಸ್ಕ್ ಆಗ್ರಹ

ಬಿಲಿಯನೇರ್ ಟೆಕ್ ದೈತ್ಯ ಎಲಾನ್ ಮಸ್ಕ್ ವಿಶ್ವಸಂಸ್ಥೆ ಭದ್ರತಾ ಮಂಡಳಿ ಬಗ್ಗೆ ಮಾತನಾಡಿದ್ದು, ಜಗತ್ತಿನಲ್ಲಿಯೇ ಹೆಚ್ಚು ಜನಸಾಂದ್ರತೆಯುಳ್ಳ ದೇಶವಾಗಿರುವ ಭಾರತಕ್ಕೆ ಯುಎನ್ಎಸ್ ಸಿ ಶಾಶ್ವತ ಸದಸ್ಯತ್ವ ಇಲ್ಲದೇ ಇರುವುದು ಅಸಮಂಜಸ ಹೇಳಿದ್ದಾರೆ.
ಎಲಾನ್ ಮಸ್ಕ್.
ಎಲಾನ್ ಮಸ್ಕ್.
Updated on

ವಿಶ್ವಸಂಸ್ಥೆ: ಬಿಲಿಯನೇರ್ ಟೆಕ್ ದೈತ್ಯ ಎಲಾನ್ ಮಸ್ಕ್ ವಿಶ್ವಸಂಸ್ಥೆ ಭದ್ರತಾ ಮಂಡಳಿ ಬಗ್ಗೆ ಮಾತನಾಡಿದ್ದು, ಜಗತ್ತಿನಲ್ಲಿಯೇ ಹೆಚ್ಚು ಜನಸಾಂದ್ರತೆಯುಳ್ಳ ದೇಶವಾಗಿರುವ ಭಾರತಕ್ಕೆ ಯುಎನ್ಎಸ್ ಸಿ ಶಾಶ್ವತ ಸದಸ್ಯತ್ವ ಇಲ್ಲದೇ ಇರುವುದು ಅಸಮಂಜಸ ಹೇಳಿದ್ದಾರೆ.

ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಎಲಾನ್ ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ. ಯುಎನ್‌ಎಸ್‌ಸಿಯ ಖಾಯಂ ಸದಸ್ಯರ ಪಟ್ಟಿಯಿಂದ ಯಾವುದೇ ಆಫ್ರಿಕನ್ ರಾಷ್ಟ್ರದ ಅನುಪಸ್ಥಿತಿಯ ಬಗ್ಗೆ ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಕಳವಳ ವ್ಯಕ್ತಪಡಿಸಿದ ನಂತರ ಟೆಸ್ಲಾ ಸಿಇಒ ಭಾರತದ ಪರ ಧ್ವನಿಗೂಡಿಸಿದ್ದಾರೆ. 

"ಆಫ್ರಿಕಾ ಇನ್ನೂ ಭದ್ರತಾ ಮಂಡಳಿಯಲ್ಲಿ ಒಬ್ಬ ಖಾಯಂ ಸದಸ್ಯರನ್ನು ಹೊಂದಿಲ್ಲ ಎಂಬುದನ್ನು ನಾವು ಹೇಗೆ ಒಪ್ಪಿಕೊಳ್ಳಬಹುದು?" “ಸಂಸ್ಥೆಗಳು ಇಂದಿನ ಜಗತ್ತನ್ನು ಪ್ರತಿಬಿಂಬಿಸಬೇಕು, 80 ವರ್ಷಗಳ ಹಿಂದೆನದ್ದನ್ನಲ್ಲ. ಸೆಪ್ಟೆಂಬರ್‌ನ ಭವಿಷ್ಯದ ಶೃಂಗಸಭೆಯಲ್ಲಿ ಜಾಗತಿಕ ಆಡಳಿತ ಸುಧಾರಣೆಗಳನ್ನು ಪರಿಗಣಿಸಲು ಮತ್ತು ವಿಶ್ವಾಸವನ್ನು ಮರು-ನಿರ್ಮಾಣ ಮಾಡಲು ಒಂದು ಅವಕಾಶವಾಗಿದೆ" ಎಂದು ಗುಟೆರೆಸ್ ಮಸ್ಕ್ ಒಡೆತನದ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ, ಅಮೇರಿಕಾ ಸಂಜಾತ ಇಸ್ರೇಲಿ ವೆಂಚರ್ ಕ್ಯಾಪಿಟಲಿಸ್ಟ್, ಭಾರತದ ಪ್ರಾತಿನಿಧ್ಯದ ವಿಷಯವನ್ನು ಪ್ರಸ್ತಾಪಿಸಿದರು.

ಈ ವೇಳೆ ಮಸ್ಕ್ ಕೂಡ ಚರ್ಚೆಯಲ್ಲಿ ಭಾಗಿಯಾದರು ಮತ್ತು ಯುಎನ್‌ನ ಪ್ರಸ್ತುತ ರಚನೆಯು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳನ್ನು ಸಮರ್ಪಕವಾಗಿ ಪ್ರತಿನಿಧಿಸುವುದಿಲ್ಲ ಎಂದು ಹೇಳಿದರು.

ಕೆಲವು ಹಂತದಲ್ಲಿ, ಯುಎನ್ ಸಂಸ್ಥೆಗಳ ಪರಿಷ್ಕರಣೆ ಅಗತ್ಯವಿದೆ" ಎಂದು ಅವರು ಹೇಳಿದರು. "ಸಮಸ್ಯೆ ಏನೆಂದರೆ, ಹೆಚ್ಚಿನ ಶಕ್ತಿಯನ್ನು ಹೊಂದಿರುವವರು ಅದನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಭಾರತ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನವನ್ನು ಹೊಂದಿಲ್ಲ, ಭೂಮಿಯ ಮೇಲಿನ ಅತ್ಯಂತ ಹೆಚ್ಚಿನ ಜನಸಂಖ್ಯೆಯ ದೇಶವಾಗಿದ್ದರೂ, ಶಾಶ್ವತ ಸದಸ್ಯತ್ವ ಸಿಗದೇ ಇರುವುದು ಅಸಂಬದ್ಧವಾಗಿದೆ" ಎಂದು ಮಸ್ಕ್ ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.  ಭಾರತ ಭದ್ರತಾ ಮಂಡಳಿಯನ್ನು ಸುಧಾರಿಸುವ ಹಲವು ವರ್ಷಗಳ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದೆ. ಯುಎನ್ ಹೈ ಟೇಬಲ್‌ನಲ್ಲಿ ಖಾಯಂ ಸದಸ್ಯರಾಗಿ ಸ್ಥಾನ ಪಡೆಯಲು ಅರ್ಹವಾಗಿದೆ ಎಂದು ಮಸ್ಕ್ ಹೇಳಿದ್ದಾರೆ. ಇದು ಪ್ರಸ್ತುತ ರೂಪದಲ್ಲಿ 21 ನೇ ಶತಮಾನದ ಭೌಗೋಳಿಕ-ರಾಜಕೀಯ ವಾಸ್ತವಗಳನ್ನು ಪ್ರತಿನಿಧಿಸುವುದಿಲ್ಲ. . ಪ್ರಸ್ತುತ, UNSC ಯಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ ಗಳಿಗೆ ಖಾಯಂ ಸದಸ್ಯತ್ವ ಹೊಂದಿವೆ. ಖಾಯಂ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಯಾವುದೇ ವಸ್ತುನಿಷ್ಠ ನಿರ್ಣಯವನ್ನು ವೀಟೋ ಮಾಡುವ ಅಧಿಕಾರವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com