ಭಾರತ ವಿರೋಧಿ ನಡೆ: ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಪದಚ್ಯುತಿ ಪ್ರಕ್ರಿಯೆಗೆ ಚಾಲನೆ!

ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರೆಟಿಕ್ ಪಾರ್ಟಿ(MDP), ಅಧ್ಯಕ್ಷ ಮೊಹಮ್ಮದ್ ಮುಯಿಝು ವಿರುದ್ಧ ಮಹಾಭಿಯೋಗ ಅಂದರೆ ಇಂಪೀಚ್‌ಮೆಂಟ್‌ ನಿರ್ಣಯವನ್ನು ಸಲ್ಲಿಸಲು ಸಜ್ಜಾಗಿದೆ.
ಮೊಹಮ್ಮದ್ ಮುಯಿಝು
ಮೊಹಮ್ಮದ್ ಮುಯಿಝು

ಮಾಲಿ(ಮಾಲ್ಡೀವ್ಸ್): ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರೆಟಿಕ್ ಪಾರ್ಟಿ(MDP), ಅಧ್ಯಕ್ಷ ಮೊಹಮ್ಮದ್ ಮುಯಿಝು ವಿರುದ್ಧ ಮಹಾಭಿಯೋಗ ಅಂದರೆ ಇಂಪೀಚ್‌ಮೆಂಟ್‌ ನಿರ್ಣಯವನ್ನು ಸಲ್ಲಿಸಲು ಸಜ್ಜಾಗಿದೆ.

ನಿನ್ನೆ ಭಾನುವಾರ ಚೀನಾ ಪರ ಒಲವಿರುವ ಮೊಹಮ್ಮದ್ ಮುಯಿಝು ಸಂಪುಟಕ್ಕೆ ಅಟಾರ್ನಿ ಜನರಲ್ ಅಹ್ಮದ್ ಉಶಮ್, ಆರ್ಥಿಕ ಸಚಿವ ಮೊಹಮ್ಮದ್ ಸಯೀದ್, ವಸತಿ ಸಚಿವ ಅಲಿ ಹೈದರ್ ಮತ್ತು ಇಸ್ಲಾಮಿಕ್‌ ಸಚಿವ ಡಾ. ಮೊಹಮ್ಮದ್ ಶಹೀಮ್ ಅಲಿ ಸಯೀದ್ ಅವರನ್ನು ಸೇರಿಸಿಕೊಳ್ಳುವ ವಿಚಾರವಾಗಿ ಸಂಸತ್ತಿನಲ್ಲಿ ವಾಗ್ವಾದ ನಡೆದಿದ್ದು ಅಲ್ಲದೆ ಹೊಡೆದಾಟ ಮತ್ತು ಬಡಿದಾಟಗಳು ನಡೆದಿದ್ದವು.

ಎಂಡಿಪಿ ಮತ್ತು ಡೆಮೋಕ್ರಾಟ್‌ಗಳ ಪ್ರತಿನಿಧಿಗಳನ್ನು ಒಳಗೊಂಡ ಒಟ್ಟು 34 ಸದಸ್ಯರು ಅಧ್ಯಕ್ಷರನ್ನು ಮಹಾಭೀಯೋಗ ಮಾಡುವ ನಿರ್ಣಯಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇತ್ತೀಚೆಗೆ ಮಾಲ್ಡೀವ್ಸ್ ಸಂಸತ್ತು ತನ್ನ ಸ್ಥಾಯಿ ಆದೇಶಗಳನ್ನು ತಿದ್ದುಪಡಿ ಮಾಡಿದ್ದು, ಸಂಸದರಿಗೆ ಮಹಾಭಿಯೋಗ ನಿರ್ಣಯವನ್ನು ಮಂಡಿಸಲು ಇದು ಸುಲಭವಾಗಿದೆ. ಎಂಡಿಪಿ ಮತ್ತು ಡೆಮೋಕ್ರಾಟ್‌ಗಳು ಒಟ್ಟು 56 ಸಂಸದರನ್ನು ಹೊಂದಿದ್ದರೆ ಈ ಪೈಕಿ ಎಂಡಿಪಿ 43 ಸಂಸದರ ಬಲ ಹೊಂದಿದ್ದರೆ ಇನ್ನು 12 ಮಂದಿ ಡೆಮೋಕ್ರಾಟ್‌ಗಳಾಗಿದ್ದಾರೆ.

ಮೊಹಮ್ಮದ್ ಮುಯಿಝುರನ್ನು ಪದಚ್ಯುತಿಗೊಳಿಸಲು ಅಗತ್ಯ ಪ್ರಮಾಣದ ಸಂಸದರ ಸಹಿಯನ್ನು ಎಂಡಿಪಿ ಪಕ್ಷ ಹೀಗಾಗಲೇ ಸಂಗ್ರಹಿಸಿದೆ. ಹೀಗಾಗಿ, ಮಾಲ್ಡೀವ್ಸ್‌ ಸಂಸತ್‌ನಲ್ಲಿ ಶೀಘ್ರದಲ್ಲೇ ನಿರ್ಣಯ ಮಂಡಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಮಾಲ್ಡೀವ್ಸ್ ಸಂಸತ್ತಿನಲ್ಲಿ ಸಂಸದರ ನಡುವೆ ಹೊಡೆದಾಟ!
ಸಂಸತ್ತಿನಲ್ಲಿ ಆಗಾಗ ವಾದ-ವಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ ಮಾಲ್ಡೀವ್ಸ್‌ನ ಸಂಸತ್ತಿನಲ್ಲಿ ನಡೆದಿರುವ ಘಟನೆಯೇ ಅಚ್ಚರಿ ಮೂಡಿಸಿದೆ. ಇಲ್ಲಿ ಸಂಸತ್ತಿನಲ್ಲಿ ಹೊಡೆದಾಟ, ಬಡೆದಾಟ ನಡೆದಿದ್ದು ಮಾತ್ರವಲ್ಲದೆ ಸಂಸದರು ಒಬ್ಬರನ್ನೊಬ್ಬರು ಎತ್ತಿಕೊಂಡು ನೆಲದ ಮೇಲೆ ಕುಕ್ಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ವಿಡಿಯೋದಲ್ಲಿ ಒಬ್ಬ ಸಂಸದ ಮತ್ತೊಬ್ಬನ ಕಾಲು ಎಳೆಯುತ್ತಿರುವುದು ಕಂಡು ಬರುತ್ತಿದೆ. ಮುಯಿಝು ಕ್ಯಾಬಿನೆಟ್ ಮೇಲಿನ ಮತದಾನಕ್ಕಾಗಿ ಇದೆಲ್ಲ ನಡೆದಿದೆ. ವಾಸ್ತವವಾಗಿ ನಿನ್ನೆ ಇಲ್ಲಿ ಸಚಿವ ಸಂಪುಟಕ್ಕೆ ಮತದಾನ ನಡೆಯಬೇಕಿತ್ತು. ಆದರೆ ವಿರೋಧ ಪಕ್ಷವು ನಾಲ್ವರು ಸಚಿವರ ಅನುಮೋದನೆಯನ್ನು ತಡೆಹಿಡಿಯುವುದಾಗಿ ಹೇಳಿದ್ದು ಈ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿಪಕ್ಷದ ಸಂಸದರು ಕೈ ಕೈ ಮಿಲಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com