
ಲಂಡನ್: ಮುಂದಿನ ಐದು ವರ್ಷಗಳ ಕಾಲ ಸಂಸತ್ತಿನಲ್ಲಿ ಕುಳಿತುಕೊಳ್ಳುವ 650 ಶಾಸಕರನ್ನು ಆಯ್ಕೆ ಮಾಡಲು ಇಂಗ್ಲೆಂಡ್ (United Kingdom) ಮತದಾರರು ನಿನ್ನೆ ಗುರುವಾರ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.
ಭಾರತೀಯ ಕಾಲಮಾನ ಪ್ರಕಾರ ನಿನ್ನೆ ರಾತ್ರಿ 9 ಗಂಟೆಗೆ ಮತದಾನ ಮುಕ್ತಾಯವಾಯಿತು. ಎಕ್ಸಿಟ್ ಪೋಲ್ ಪ್ರಕಾರ ಕೀರ್ ಸ್ಟಾರ್ಮರ್ ನೇತೃತ್ವದ ಎಡ-ಕೇಂದ್ರ ಲೇಬರ್ ಪಾರ್ಟಿಯು ಭಾರಿ ಬಹುಮತದತ್ತ ಸಾಗುತ್ತಿದೆ ಎಂದು ಹೇಳಿದೆ.
ಐದು ಬೇರೆ ಬೇರೆ ಪ್ರಧಾನ ಮಂತ್ರಿಗಳ ಅಡಿಯಲ್ಲಿ 14 ವರ್ಷಗಳ ಅಧಿಕಾರದ ನಂತರ, ಪ್ರಧಾನಿ ರಿಷಿ ಸುನಕ್ ಅವರ ನೇತೃತ್ವದ ಕನ್ಸರ್ವೇಟಿವ್ ಪಕ್ಷ 650 ಸ್ಥಾನಗಳ ಹೌಸ್ ಆಫ್ ಕಾಮನ್ಸ್‌ನಲ್ಲಿ ಈ ಬಾರಿ 131 ಕ್ಕೆ ಸೀಟುಗಳು ಬರಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಪಕ್ಷದ ಎರಡು ಶತಮಾನಗಳ ಇತಿಹಾಸದಲ್ಲಿ ಇದು ಟೋರಿ ನೇತೃತ್ವದ ಪಕ್ಷಕ್ಕೆ ಅತ್ಯಂತ ಕೆಟ್ಟ ಫಲಿತಾಂಶವಾಗಬಹುದು ಎಂದು ಹೇಳಲಾಗುತ್ತಿದೆ.
ಲೇಬರ್ ಪಕ್ಷವು 410 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಬಹುಮತಕ್ಕೆ ಅಗತ್ಯವಿರುವ 326 ನ್ನು ಸ್ಥಾನವನ್ನು ಸುಲಭವಾಗಿ ದಾಟಿ ಸರಳ ಬಹುಮತ ಗೆಲ್ಲುವ ನಿರೀಕ್ಷೆಯಿದೆ. ಬಹುತೇಕ ಕ್ಷೇತ್ರಗಳ ಫಲಿತಾಂಶವು ಇಂದು ಬೆಳಗ್ಗೆ ಪ್ರಕಟಗೊಳ್ಳುವ ನಿರೀಕ್ಷೆಯಿದೆ.
Advertisement