
ಅಫ್ಘಾನಿಸ್ತಾನದ ನಾಗರಿಕರು ಜರ್ಮನಿಯಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಅನೇಕ ಆಫ್ಘನ್ನರು ರಾಯಭಾರ ಕಚೇರಿಗೆ ಪ್ರವೇಶಿಸಿ ಧ್ವಂಸಗೊಳಿಸಿದ್ದು ಪಾಕಿಸ್ತಾನದ ಧ್ವಜವನ್ನು ಕಿತ್ತೆಸೆದಿದ್ದಾರೆ. ಇದರ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಪಾಕಿಸ್ತಾನಿ ದೂತಾವಾಸದಲ್ಲಿ ಮೊದಲಿಗೆ ಭದ್ರತಾ ಸಿಬ್ಬಂದಿಯೊಂದಿಗೆ ಅಫ್ಘಾನಿಗರು ಘರ್ಷಣೆ ನಡೆಸಿರುವುದು ವೀಡಿಯೊದಲ್ಲಿ ನೋಡಬಹುದು. ಈ ಸಮಯದಲ್ಲಿ ಅವರು ಧ್ವಜಸ್ಥಂಭದ ಮೇಲಕ್ಕೆ ಹತ್ತಿ ಪಾಕಿಸ್ತಾನಿ ಧ್ವಜವನ್ನು ಕಿತ್ತು ಬಿಸಾಡಿದ್ದಾರೆ. ಈ ವೇಳೆ ಹಲವರನ್ನು ಜರ್ಮನ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ನಂತರ ಆಫ್ಘನ್ನರ ನಡೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಲವಾಗಿ ವಿರೋಧಿಸಲಾಗುತ್ತಿದೆ.
ಕೋಲಾಹಲದ ದೃಷ್ಟಿಯಿಂದ, ಪಾಕಿಸ್ತಾನವು ಕರಾಚಿಯಲ್ಲಿ ಜರ್ಮನಿಯ ದೂತಾವಾಸದ ಸುರಕ್ಷತೆಯನ್ನು ಹೆಚ್ಚಿಸಿದೆ. ಅದೇ ಸಮಯದಲ್ಲಿ, ಭದ್ರತಾ ಕಾರಣಗಳಿಂದಾಗಿ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೆಲವು ಮಾಧ್ಯಮ ವರದಿಗಳು ಅಫ್ಘಾನ್ ನಿರಾಶ್ರಿತರನ್ನು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಕಳುಹಿಸಿದ್ದರಿಂದ ಅವರು ಕೋಪಗೊಂಡಿದ್ದಾರೆ ಎಂದು ನಂಬಲಾಗಿದೆ. ಈ ಕಾರಣ ಜನರು ಕೋಲಾಹಲವನ್ನು ಸೃಷ್ಟಿಸುತ್ತಿದ್ದಾರೆ.
ಅದೇ ಸಮಯದಲ್ಲಿ ದಾಳಿಯ ವೀಡಿಯೊದ ನಂತರ, ಪಾಕಿಸ್ತಾನದ ಟಿವಿ ಆ್ಯಂಕರ್ ನಜೀಬಾ ಫೈಜ್ ಕೂಡ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಿಜವಾಗಿಯೂ ಧೈರ್ಯಶಾಲಿಗಳಾಗಿದ್ದರೆ ಇಂತಹ ಕೃತ್ಯ ಎಸಗುವ ಬದಲು ಪ್ಯಾಲೆಸ್ಟೀನಿಗರು ಹೋರಾಡುತ್ತಿರುವಂತೆ ಅವರು ತಮ್ಮ ತಾಯಿನಾಡುಗಾಗಿ ಹೋರಾಡುತ್ತಿದ್ದರು ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ. ಈ ಘಟನೆಯು ಆಫ್ಘನ್ನರನ್ನು ಅಪಾಯಕಾರಿ, ಹಿಂಸಾತ್ಮಕ, ಬೇಜವಾಬ್ದಾರಿಯುತ ಎಂದು ತೋರಿಸುತ್ತದೆ. ಈ ಹೇಡಿಗಳಲ್ಲಿ ಯಾವುದೇ ಹೆಮ್ಮೆ ಇದ್ದರೆ, ಅವರು ಅವಮಾನದಿಂದ ಓಡಿಹೋಗುವ ಬದಲು ಪ್ಯಾಲೆಸ್ಟೈನ್ ಜನರಂತೆ ತಾಯಿನಾಡಿಗೆ ಹೋರಾಡುತ್ತಿದ್ದರು ಎಂದು ಹೇಳಿದ್ದಾರೆ.
Advertisement