ನಾಲ್ವರು ಇಸ್ರೇಲ್ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆ ವೇಳೆ ವೈಮಾನಿಕ ದಾಳಿ: 274 ಪ್ಯಾಲೆಸ್ತೀನಿಯರು ಸಾವು!

ಇಸ್ರೇಲ್ ಒತ್ತೆಯಾಳು ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮ ನಾಲ್ಕು ಜನರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಇಸ್ರೇಲಿ ದಾಳಿಯಲ್ಲಿ ಮಕ್ಕಳು ಸೇರಿದಂತೆ 274 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ.
ಪ್ಯಾಲೇಸ್ತೀನ್ ನಿರಾಶ್ರಿತರ ಕೇಂದ್ರ
ಪ್ಯಾಲೇಸ್ತೀನ್ ನಿರಾಶ್ರಿತರ ಕೇಂದ್ರ

ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಹಮಾಸ್ ಇಸ್ರೇಲಿಗರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಇಸ್ರೇಲ್ ತನ್ನ ಒತ್ತೆಯಾಳುಗಳನ್ನು ರಕ್ಷಿಸಲು ಕಾರ್ಯಾಚರಣೆಯನ್ನು ನಡೆಸುತ್ತಿದ್ದು ಈ ಕಾರಣದಿಂದಾಗಿ ಇಸ್ರೇಲ್ ಕೇಂದ್ರ ಗಾಜಾದಲ್ಲಿ ನೆಲ ಮತ್ತು ವಾಯುದಾಳಿಗಳನ್ನು ನಡೆಸುತ್ತಿದೆ.

ಈ ಇಸ್ರೇಲ್ ಒತ್ತೆಯಾಳು ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮ ನಾಲ್ಕು ಜನರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಇಸ್ರೇಲಿ ದಾಳಿಯಲ್ಲಿ ಮಕ್ಕಳು ಸೇರಿದಂತೆ 274 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ.

26 ವರ್ಷದ ನೋಹ್ ಅರ್ಗಾಮಣಿ, 22 ವರ್ಷದ ಅಲ್ಮೊಗ್ ಮೀರ್ ಜಾನ್, 27 ವರ್ಷದ ಆಂಡ್ರೆ ಕೊಜ್ಲೋವ್ ಮತ್ತು 41 ವರ್ಷದ ಶ್ಲೋಮಿ ಝಿವ್ ಅವರನ್ನು ರಕ್ಷಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇವರೆಲ್ಲಾ ಕಳೆದ 246 ದಿನಗಳಿಂದ ಹಮಾಸ್ ವಶದಲ್ಲಿದ್ದು ಇದೀಗ ರಕ್ಷಿಸಲಾಗಿದೆ. ಅವರನ್ನು ಮೊದಲು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಇನ್ನು ತಮ್ಮ ಮಕ್ಕಳ ಮನೆ ಸೇರಿರುವುದು ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ.

ಪ್ಯಾಲೇಸ್ತೀನ್ ನಿರಾಶ್ರಿತರ ಕೇಂದ್ರ
ಭಾರತದ ಆಹ್ವಾನ ಸ್ವೀಕರಿಸಿದ ಮಾಲ್ಡೀವ್ಸ್ ಅಧ್ಯಕ್ಷ Mohamed Muizzu; ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿ

ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಅವರು, ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಹೋರಾಟವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಈ ಕಾರ್ಯಾಚರಣೆಯ ನಂತರ ಸದ್ಯ 23 ಮಕ್ಕಳು ಮತ್ತು 11 ಮಹಿಳೆಯರು ಸೇರಿದಂತೆ 109 ಪ್ಯಾಲೆಸ್ಟೀನಿಯನ್ನರ ಶವಗಳನ್ನು ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಗಾಯಗೊಂಡಿರುವ 100ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ಯಾಲೇಸ್ತಿನ್ ನ ಅಲ್ಲಿನ ವಕ್ತಾರ ಖಲೀಲ್ ದೆಘ್ರನ್ ಹೇಳಿದರು. ಇಸ್ರೇಲ್ ದಾಳಿಯಲ್ಲಿ ಒಟ್ಟಾರೆಯಾಗಿ 274 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com