
ಇಟಾಲಿ: ಜಿ-7 ಶೃಂಗಸಭೆಯಲ್ಲಿ ಭಾಗಿಯಾಗಲು ಇಟಾಲಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್, ಬ್ರಿಟನ್ ಸೇರಿದಂತೆ ಮಿತ್ರ ದೇಶಗಳ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ.
ಈ ನಡುವೆ ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಶೃಂಗಸಭೆಯ ವೇಳೆ ಕ್ಲಿಕ್ಕಿಸಿದ ಸೆಲ್ಫಿ ವಿಡೀಯೋ ಎಲ್ಲೆಡೆ ವೈರಲ್ ಆಗತೊಡಗಿದೆ.
ಸೆಲ್ಫಿ ವಿಡಿಯೋ ಕ್ಲಿಕ್ಕಿಸಿರುವ ಮೆಲೋನಿ, ಮೆಲೋಡಿ (ಮೆಲೋನಿ-ಮೋದಿ) ತಂಡದಿಂದ ನಮಸ್ಕಾರ ("Hello from the Melodi team) ಎಂದು ಹೇಳಿ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಪ್ರಧಾನಿ ಮೋದಿ-ಜಾರ್ಜಿಯಾ ಮೆಲೋನಿ ನಡುವೆ ದ್ವಿಪಕ್ಷೀಯ ಸಭೆ ನಡೆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮೆಲೋಡಿ (ಮೆಲೋನಿ-ಮೋದಿ) ಎಂಬ ಶಬ್ದ ಟ್ರೆಂಡ್ ಆಗಿತ್ತು.
ಮೆಲೋನಿ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ-ಇಟಲಿ ಸ್ನೇಹ ಚಿರಾಯುವಾಗಲಿ ಎಂದು ಹೇಳಿದ್ದಾರೆ.
ಕಳೆದ ವರ್ಷ ಕೂಡ ದುಬೈನಲ್ಲಿ ನಡೆದ COP28 ಹವಾಮಾನ ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರು ನಾಯಕರ ಸೆಲ್ಫಿಯನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. "COP28 ನಲ್ಲಿ ಉತ್ತಮ ಸ್ನೇಹಿತರು. #ಮೆಲೋಡಿ ಎಂದು ಮೆಲೋನಿ ಛಾಯಾಚಿತ್ರಕ್ಕೆ ಶೀರ್ಷಿಕೆ ನೀಡಿದ್ದರು.
Advertisement