
ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಬಿಸಿಲಿನ ತಾಪಕ್ಕೆ ಭಾರತೀಯ ನಾಗರಿಕರು ಸೇರಿದಂತೆ ಸಾವಿರಕ್ಕೂ ಹೆಚ್ಚು ಹಜ್ ಯಾತ್ರಿಕರು ಸಾವನ್ನಪ್ಪಿದ್ದಾರೆ. ವಿವಿಧ ದೇಶಗಳಿಂದ ಹಜ್‌ಗೆ ತೆರಳಿದ್ದರು. ಈ ವರ್ಷ ಹಜ್ ಯಾತ್ರೆಯ ಸಂದರ್ಭದಲ್ಲಿ ನೈಸರ್ಗಿಕ ಕಾರಣಗಳು, ವೃದ್ಧಾಪ್ಯ ಮತ್ತು ಅನಾರೋಗ್ಯದ ಕಾರಣದಿಂದ ಕನಿಷ್ಠ 98 ಭಾರತೀಯ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಈ ವರ್ಷ ಸುಮಾರು 1,75,000 ಭಾರತೀಯರು ಹಜ್ ಯಾತ್ರೆ ಕೈಗೊಂಡಿದ್ದರು. ಮೃತರಲ್ಲಿ ಅಪಘಾತದಲ್ಲಿ ಮೃತಪಟ್ಟ ನಾಲ್ವರು ಕೂಡ ಸೇರಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ವರ್ಷ, ನಮ್ಮ 175,000 ಭಾರತೀಯರು ಹಜ್ ಯಾತ್ರೆಗೆ ತೆರಳಿದ್ದರು. ಇಲ್ಲಿಯವರೆಗೆ ನಾವು ನಮ್ಮ 98 ನಾಗರಿಕರನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.
AFP ಪ್ರಕಾರ, ಸುಮಾರು 10 ದೇಶಗಳಲ್ಲಿ ಹಜ್ ಸಮಯದಲ್ಲಿ 1,081 ಸಾವುಗಳು ಸಂಭವಿಸಿವೆ. ಹಜ್ ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಇದನ್ನು ಎಲ್ಲಾ ಮುಸ್ಲಿಮರು ಒಮ್ಮೆಯಾದರೂ ನೋಡಬೇಕು ಎಂಬ ನಂಬಿಕೆ ಇದೆ. ಹಜ್ ಯಾತ್ರೆಯ ಸಮಯವನ್ನು ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ನಿರ್ಧರಿಸಲಾಗುತ್ತದೆ.
ಅದೇ ಸಮಯದಲ್ಲಿ, ಬಿಬಿಸಿ ವರದಿಯ ಪ್ರಕಾರ, ಹಜ್ ಮಾಡಲು ಅನೇಕ ದೇಶಗಳ ನಾಗರಿಕರು ಸೌದಿ ಅರೇಬಿಯಾವನ್ನು ತಲುಪಿದ್ದಾರೆ. ಆದರೆ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಾಗರಿಕರು ಅತ್ಯಂತ ಕೆಟ್ಟ ಸ್ಥಿತಿಯನ್ನು ಎದುರಿಸಿದ್ದಾರೆ. ನಾಗರಿಕರೊಬ್ಬರು ನಮ್ಮನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಯಿತು. ಒಂದು ಟೆಂಟ್‌ನಲ್ಲಿ 800ಕ್ಕೂ ಹೆಚ್ಚು ಜನರನ್ನು ಇರಿಸಲಾಗಿತ್ತು. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಾಗರಿಕರಿಗೆ ನೀಡಿದ ಸ್ಥಳವು ಪರ್ವತಗಳ ಕೆಳಗಿದೆ. ಈ ಪ್ರದೇಶದಲ್ಲಿ ಊಸಿರಾಡುವುದಕ್ಕೂ ಕಷ್ಟವಾಗುತ್ತಿತ್ತು. ಇನ್ನು ಯಾತ್ರಿಕರಿಗೆ ಬೆರಳಣಿಕೆಯಷ್ಟು ಶೌಚಾಲಯಗಳನ್ನು ಕೊಟ್ಟಿದ್ದರು. ಕೆಲವರು ವಾಶ್ ರೂಂನ ಹೊರಗೆ ಮಲಗಬೇಕಾದ ಸಂದರ್ಭಗಳು ಇದ್ದವು ಎಂದು ಹೇಳಿದರು.
Advertisement