ಅಮೆರಿಕದಲ್ಲಿ ದರೋಡೆ ವೇಳೆ ದುಷ್ಕರ್ಮಿಗಳ ಗುಂಡೇಟಿಗೆ ಆಂಧ್ರ ಮೂಲದ ವ್ಯಕ್ತಿ ಬಲಿ

ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯವರಾದ ದಾಸರಿ ಗೋಪಿಕೃಷ್ಣ ಎಂದು ಗುರುತಿಸಲಾಗಿದ್ದು, ಅವರು ಎಂಟು ತಿಂಗಳ ಹಿಂದಷ್ಟೇ ಅಮೆರಿಕಕ್ಕೆ ಬಂದಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹ್ಯೂಸ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದ ಕನ್ವೀನಿಯನ್ಸ್ ಸ್ಟೋರ್‌ನಲ್ಲಿ ದರೋಡೆ ವೇಳೆ ದುಷ್ಕರ್ಮಿಗಳ ಗುಂಡೇಟಿನಿಂದ 32 ವರ್ಷದ ಭಾರತೀಯ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯವರಾದ ದಾಸರಿ ಗೋಪಿಕೃಷ್ಣ ಎಂದು ಗುರುತಿಸಲಾಗಿದ್ದು, ಅವರು ಎಂಟು ತಿಂಗಳ ಹಿಂದಷ್ಟೇ ಅಮೆರಿಕಕ್ಕೆ ಬಂದಿದ್ದರು.

ಜೂನ್ 21 ರಂದು ಡಲ್ಲಾಸ್‌ನ ಪ್ಲೆಸೆಂಟ್ ಗ್ರೋವ್‌ನಲ್ಲಿರುವ ಗ್ಯಾಸ್ ಸ್ಟೇಷನ್ ಕನ್ವೀನಿಯನ್ಸ್ ಸ್ಟೋರ್‌ನಲ್ಲಿ ಈ ಘಟನೆ ಸಂಭವಿಸಿದೆ.

ಭಾನುವಾರ ಯೋಗ ದಿನದ ಕಾರ್ಯಕ್ರಮಕ್ಕಾಗಿ ಡಲ್ಲಾಸ್‌ನಲ್ಲಿದ್ದ ಕಾನ್ಸುಲ್ ಜನರಲ್ ಡಿ ಸಿ ಮಂಜುನಾಥ್, ಈ ಹಿಂದೆ ವಿವಿಧ ಮೂಲಗಳು ವರದಿ ಮಾಡಿದಂತೆ ಅರ್ಕಾನ್ಸಾಸ್‌ನಲ್ಲಿ ನಡೆದ ಗುಂಡಿನ ದಾಳಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಪಿಟಿಐಗೆ ಖಚಿತಪಡಿಸಿದ್ದಾರೆ.

ಗೋಪಿಕೃಷ್ಣ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ ಮಂಜುನಾಥ್, “ದಲ್ಲಾಸ್, ಪ್ಲೆಸೆಂಟ್ ಗ್ರೋವ್‌ನಲ್ಲಿ ನಡೆದ ದರೋಡೆ ಘಟನೆಯಲ್ಲಿ ಭಾರತೀಯ ಪ್ರಜೆ ಗೋಪಿ ಕೃಷ್ಣ ದಾಸರಿ ಅವರ ದುರಂತ ನಿಧನದ ಬಗ್ಗೆ ತಿಳಿದು ನಮಗೆ ತುಂಬಾ ದುಃಖವಾಗಿದೆ ಮತ್ತು ಸ್ಥಳೀಯ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಕೆನಡಾದಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ಯುವಕ ಯುವರಾಜ್ ಗೋಯಲ್ ಹತ್ಯೆ

"ಭಾರತೀಯ ಸಂಘಗಳ ಬೆಂಬಲದೊಂದಿಗೆ ಕಾನ್ಸುಲೇಟ್, ಶವಪರೀಕ್ಷೆ ಮತ್ತು ಮರಣ ಪ್ರಮಾಣಪತ್ರಗಳು ಸೇರಿದಂತೆ ಸ್ಥಳೀಯ ಔಪಚಾರಿಕತೆಗಳ ನಂತರ ಗೋಪಿಕೃಷ್ಣ ಅವರ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದ್ದಾರೆ.

ದರೋಡೆ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಗೋಪಿಕೃಷ್ಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಗೋಪಿಕೃಷ್ಣ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಈ ಘಟನೆಯು ಡಲ್ಲಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಭಾರತೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com