ದುರಾದೃಷ್ಟವಂತ: 33 ಕೋಟಿ ರೂ. ಲಾಟರಿ ಹೊಡೆದ ಖುಷಿಯಲ್ಲಿ ಹೃದಯಾಘಾತವಾಗಿ ವ್ಯಕ್ತಿ ಮೃತ, ವಿಡಿಯೋ ವೈರಲ್!

ಜೀವನವನ್ನು ಬದಲಾಯಿಸುವ ಖುಷಿಯ ಸಮಯ ಹೆಚ್ಚು ಕಾಲ ಉಳಿಯಲಿಲ್ಲ. ಈ ಖುಷಿಯನ್ನು ಸಂಭ್ರಮಿಸುವ ವೇಳೆಯೇ ಹೃದಯಾಘಾತವಾಗಿ ವ್ಯಕ್ತಿ ಕುಸಿದು ಬಿದ್ದಿದ್ದಾರೆ.
ಘಟನೆಯ ದೃಶ್ಯ
ಘಟನೆಯ ದೃಶ್ಯ
Updated on

ಅದೃಷ್ಟ ಎಂಬುವುದು ಕೆಲವೊಮ್ಮೆ ಕೈಯಿಡಿದರೆ, ಅನುಭವಿಸುವ ಯೋಗ ಹಣೆಯಲ್ಲಿ ಇಲ್ಲದಿದ್ದಾಗ ಈ ರೀತಿ ಆಗುತ್ತದೆ. ಹೌದು, ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೊದಲ್ಲಿ 4 ಮಿಲಿಯನ್ (ಭಾರತೀಯ ರೂಪಾಯಿಯಲ್ಲಿ 33 ಕೋಟಿ) ಜಾಕ್‌ಪಾಟ್ ಗೆದ್ದ ವ್ಯಕ್ತಿಯೊಬ್ಬ ಗೆದ್ದ ಖುಷಿಯಲ್ಲಿ ಹೃದಯಾಘಾತವಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಜೀವನವನ್ನು ಬದಲಾಯಿಸುವ ಖುಷಿಯ ಸಮಯ ಹೆಚ್ಚು ಕಾಲ ಉಳಿಯಲಿಲ್ಲ. ಈ ಖುಷಿಯನ್ನು ಸಂಭ್ರಮಿಸುವ ವೇಳೆಯೇ ಹೃದಯಾಘಾತವಾಗಿ ವ್ಯಕ್ತಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಕ್ಯಾಸಿನೊ ಸಿಬ್ಬಂದಿ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನಗಳು ವ್ಯರ್ಥವಾಯಿತು.

ಲಾಸ್ ವೇಗಾಸ್ ಸ್ಯಾಂಡ್ಸ್ ನಿರ್ವಹಿಸುತ್ತಿರುವ ಐಕಾನಿಕ್ ಕ್ಯಾಸಿನೊದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕ್ಯಾಸಿನೊ ಉದ್ಯಮಕ್ಕೆ ಸಂಬಂಧಿಸಿದ ಸಂಭಾವ್ಯ ಅಪಾಯಗಳ ಸುತ್ತ ವ್ಯಾಪಕವಾದ ಕಾಳಜಿ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ಈ ಘಟನೆಯು ಜೂಜಿನ ಸಂಭವನೀಯ ಅಪಾಯಗಳನ್ನು ಎತ್ತಿ ತೋರಿಸಿದೆ.

ಘಟನೆಯ ದೃಶ್ಯ
ಮೂರು ಲಕ್ಷ ರೂಪಾಯಿ ಸಾಲ ಮಾಡಿದ ಮರುದಿನವೇ 25 ಕೋಟಿ ರೂ. ಮೊತ್ತದ ಓಣಂ ಬಂಪರ್ ಲಾಟರಿ ಗೆದ್ದ ಆಟೋ ಚಾಲಕ!

ಕ್ಯಾಸಿನೊಗಳಲ್ಲಿನ ದೊಡ್ಡ ನಗದು ವಹಿವಾಟುಗಳಿಗೆ ಸಂಬಂಧಿಸಿದ ಅಪಾಯಗಳನ್ನು ಅಧಿಕಾರಿಗಳು ಒಪ್ಪಿಕೊಂಡರೂ, ಗೃಹ ವ್ಯವಹಾರಗಳ ಸಚಿವಾಲಯ, ಕಾನೂನು ಸಚಿವಾಲಯ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ ಇತ್ತೀಚಿನ ವರದಿಯು ಅಪರಾಧ ಚಟುವಟಿಕೆಗಳಲ್ಲಿ ನೇರ ಪಾಲ್ಗೊಳ್ಳುವಿಕೆ ಅಪರೂಪ ಎಂದು ಪ್ರತಿಪಾದಿಸಿದೆ. ಆದಾಗ್ಯೂ, ಹಣ ವರ್ಗಾವಣೆ ಮತ್ತು ಜೂಜಿನ ವ್ಯಸನವನ್ನು ಎದುರಿಸಲು ಕಠಿಣವಾದ ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಕ್ರಮಗಳು ಆಗುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com