ಪತ್ರಕರ್ತೆ ಜೊತೆ ಸೌದಿ ಅರೇಬಿಯಾದ ರೋಬೋ ಅನುಚಿತ ವರ್ತನೆ! ವೀಡಿಯೋ ವೈರಲ್!

ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ಜೊತೆ ಅನುಚಿತ ವರ್ತನೆ ತೋರಿದ ಆರೋಪ ಸೌದಿ ಅರೇಬಿಯಾದ ಮೊದಲ ರೋಬೋ ವಿರುದ್ಧ ಕೇಳಿಬಂದಿದೆ.
ಸೌದಿ ಅರೇಬಿಯಾದ ರೋಬೋ
ಸೌದಿ ಅರೇಬಿಯಾದ ರೋಬೋonline desk

ಸೌದಿ ಅರೇಬಿಯಾ: ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ಜೊತೆ ಅನುಚಿತ ವರ್ತನೆ ತೋರಿದ ಆರೋಪ ಸೌದಿ ಅರೇಬಿಯಾದ ಮೊದಲ ರೋಬೋ ವಿರುದ್ಧ ಕೇಳಿಬಂದಿದೆ. ಪತ್ರಕರ್ತೆಗೆ ಆಂಡ್ರಾಯ್ಡ್ ರೋಬೋ ಮುಹಮ್ಮದ್ ಕಿರುಕುಳ ನೀಡಿದೆ ಎನ್ನಲಾದ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.

ರೋಬೋವನ್ನು ಪರಿಚಯಿಸಿದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಈ ಘಟನೆ ವರದಿಯಾಗಿದೆ. 8 ಸೆಕೆಂಡ್ ಗಳ ಅವಧಿಯ ಈ ವೀಡಿಯೋದಲ್ಲಿ ಪತ್ರಕರ್ತೆ ರವಿಯಾ ಅಲ್ ಕಾಸಿಮಿ ಹಿಂದೆ ನಿಲ್ಲಿಸಲಾಗಿದ್ದ ರೋಬೋ ಕೈಗಳು ಆಕೆಯನ್ನು ಮುಟ್ಟಲು ಯತ್ನಿಸುತ್ತಿರುವುದು ಸೆರೆಯಾಗಿದೆ.

ಸೌದಿ ಅರೇಬಿಯಾದ ರೋಬೋ
ಐಟಿ ರಾಜಧಾನಿಗೆ ಲಗ್ಗೆ ಇಟ್ಟ ರೋಬೋ ಸಪ್ಲೇಯರ್ಸ್! ಮಾನವನ ಬದಲಿಗೆ ರೋಬೋಟ್‌ಗಳಿಂದ ಸೇವೆ

ರೋಬೋ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್-ಖಾಸಿಮಿ ಕ್ಷಣಕಾಲ ತನ್ನ ಕೈಯನ್ನು ಎತ್ತಬೇಕಾಯಿತು. ಈ ಘಟನೆಯು ಆಕಸ್ಮಿಕ ಸ್ಪರ್ಶಕ್ಕೆ ಕಾರಣವಾಗುವ ಪ್ರೋಗ್ರಾಮ್ ಮಾಡಿದ ಕೈ ಚಲನೆಯ ಪರಿಣಾಮವಾಗಿದೆ ಎಂದು ಕೆಲವರು ವಾದಿಸಿದರೆ, ಇತರರು ರೋಬೋಟ್‌ನ ಕ್ರಮಗಳು ಕಿರುಕುಳವನ್ನು ತೋರುತ್ತದೆ ಎಂದು ವಾದಿಸಿದ್ದಾರೆ. ಈ ಘಟನೆ ನಡೆದಾಗ ಪತ್ರಕರ್ತೆ ಮುಖದಲ್ಲಿ ವ್ಯಕ್ತವಾದ ಅಹಿತಕರ ಭಾವನೆ ರೋಬೋ ಕಿರುಕುಳ ನೀಡಲು ಯತ್ನಿಸಿತ್ತು ಎಂಬುದಕ್ಕೆ ಸಾಕ್ಷಿ ಎಂದು ಅನೇಕರು ಹೇಳಿದ್ದಾರೆ.

ಇಂತಹ ರೋಬೋವನ್ನು ಯಾರು ಪ್ರೋಗ್ರಾಮ್ ಮಾಡಿದ್ದು ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಕ್ಯೂಎಸ್ಎಸ್ ಸಿಸ್ಟಮ್ಸ್ ಸೌದಿ ಅರೇಬಿಯಾದಲ್ಲಿ ಮುಹಮ್ಮದ್ ಎಂಬ ಮೊದಲ ಪುರುಷ ರೋಬೋಟ್ ನ್ನು ತಯಾರಿಸಿದ್ದು ಇದನ್ನು ಸಾರಾಗೆ ಪ್ರತಿರೂಪವಾಗಿ ವಿನ್ಯಾಸಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com