ಅಮೇರಿಕಾ ಅಧ್ಯಕ್ಷೀಯ ಚುನಾವಣೆ 2024: ಟ್ರಂಪ್- ಬೈಡನ್ ಮತ್ತೆ ಎದುರಾಳಿ!

ಅಮೇರಿಕಾ ಅಧ್ಯಕ್ಷೀಯ ಚುನಾವಣೆ ವರ್ಷಾಂತ್ಯಕ್ಕೆ ನಡೆಯಲಿದ್ದು, ಕಳೆದ ಅಧ್ಯಕ್ಷೀಯ ಚುನಾವಣೆ ಮಾದರಿಯಲ್ಲೇ ಟ್ರಂಪ್- ಬೈಡನ್ ಎದುರಾಳಿಗಳಾಗುವುದು ಬಹುತೇಕ ನಿಶ್ಚಿತವಾಗಿದೆ.
ಟ್ರಂಪ್-ಬೈಡನ್
ಟ್ರಂಪ್-ಬೈಡನ್TNIE

ವಾಷಿಂಗ್ ಟನ್: ಅಮೇರಿಕಾ ಅಧ್ಯಕ್ಷೀಯ ಚುನಾವಣೆ ವರ್ಷಾಂತ್ಯಕ್ಕೆ ನಡೆಯಲಿದ್ದು, ಕಳೆದ ಅಧ್ಯಕ್ಷೀಯ ಚುನಾವಣೆ ಮಾದರಿಯಲ್ಲೇ ಟ್ರಂಪ್- ಬೈಡನ್ ಎದುರಾಳಿಗಳಾಗುವುದು ಬಹುತೇಕ ನಿಶ್ಚಿತವಾಗಿದೆ. ಪ್ರಾಥಮಿಕ ಹಂತದಲ್ಲಿ ತಮ್ಮ ಪಕ್ಷಗಳಿಂದ ಬೈಡನ್ ಹಾಗೂ ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಇದ್ದ ಸವಾಲುಗಳನ್ನು ಗೆದ್ದಿದ್ದಾರೆ. ಅಮೇರಿಕಾದ ಹಲವು ಮಂದಿಗೆ ಈ ಇಬ್ಬರ ನಡುವೆಯೇ ಮತ್ತೆ ಸ್ಪರ್ಧೆ ಏರ್ಪಡುವುದು ಬೇಕಿರಲಿಲ್ಲ.

ಟ್ರಂಪ್-ಬೈಡನ್
ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹಿಂದಕ್ಕೆ ಸರಿದ ವಿವೇಕ್ ರಾಮಸ್ವಾಮಿ! ಟ್ರಂಪ್ ಗೆ ಬೆಂಬಲ ಘೋಷಣೆ

ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಜಾರ್ಜಿಯಾ, ಮಿಸ್ಸಿಸ್ಸಿಪ್ಪಿ ಮತ್ತು ವಾಷಿಂಗ್ಟನ್ ರಾಜ್ಯಗಳಲ್ಲಿ ಹೆಚ್ಚಿನ ಗೊಂದಲಗಳು ಇರಲಿಲ್ಲ. ತಮ್ಮ ತಮ್ಮ ಪಕ್ಷಗಳಿಂದ ಬೈಡನ್ (ಡೆಮಾಕ್ರಾಟ್) ಹಾಗೂ ಟ್ರಂಪ್ (ರಿಪಬ್ಲಿಕನ್) ಆಯ್ಕೆ ಸ್ಪಷ್ಟಾವಾಗಿತ್ತು. ಆದರೆ ಅವರ ಗೆಲುವಿನ ಅಂತರದ ಪ್ರಮಾಣ ರಾಷ್ಟ್ರೀಯ ಸಮಾವೇಶಗಳಲ್ಲಿ ತಮ್ಮ ಪಕ್ಷದ ನಾಮನಿರ್ದೇಶನವನ್ನು ಪಡೆಯಲು ಅಗತ್ಯವಿರುವ ಬಹುಮತವನ್ನು ನೀಡಿತು.

ಟ್ರಂಪ್-ಬೈಡನ್
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಗಾಲ್ಫ್ ಆಡಿದ ಎಂಎಸ್ ಧೋನಿ!

ಈ ಚುನಾವಣೆಯನ್ನು ಇಬ್ಬರು ಜನಪ್ರಿಯವಲ್ಲದ ಅಧ್ಯಕ್ಷರ ನಡುವಿನ ಮರು ಸ್ಪರ್ಧೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. 81 ವರ್ಷಗಳ ಬೈಡನ್ ಈಗಾಗಲೇ ಅಮೇರಿಕಾದ ವಯಸ್ಸಿನಲ್ಲಿ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದರೆ, 77 ವರ್ಷದ ಟ್ರಂಪ್ ವಿರುದ್ಧ 4 ಕ್ರಿಮಿನಲ್ ಪ್ರಕರಣಗಳಿದ್ದು, ಜೈಲಿನ ಭೀತಿಯನ್ನೂ ಎದುರಿಸುತ್ತಿದ್ದಾರೆ.

ಬೈಡನ್ 2 ನೇ ಅವಧಿಗೆ ತಮ್ಮ ಸ್ಪರ್ಧೆಯನ್ನು ಖಚಿತಪಡಿಸುತ್ತಿದ್ದಂತೆಯೇ ಟ್ರಂಪ್ ನ್ನು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com