ಭಾರತೀಯ ನೌಕಾಪಡೆಯ ಶೌರ್ಯ ಅಮೋಘ: ಪ್ರಧಾನಿ ಮೋದಿಗೆ ಬಲ್ಗೇರಿಯಾ ಅಧ್ಯಕ್ಷ ಧನ್ಯವಾದ

ಬಲ್ಗೇರಿಯನ್ ಹಡಗು 'ರುಯೆನ್' ಮತ್ತು ಅದರ ಸಿಬ್ಬಂದಿಯನ್ನು ಸೊಮಾಲಿಯಾದ 35 ಕಡಲ್ಗಳ್ಳರ ಅಪಹರಿಸಿದ್ದರು. ಸುದೀರ್ಘ 40 ಗಂಟೆಗಳ ಕಾರ್ಯಾಚರಣೆ ನಡೆಸಿದ್ದ ಭಾರತೀಯ ನೌಕಾಪಡೆ ಕಡಲ್ಗಳ್ಳರನ್ನು ವಶಕ್ಕೆ 17 ಒತ್ತೆಯಾಳುಗಳನ್ನು ರಕ್ಷಿಸಿದ್ದರು.
ರುಮೆನ್ ರಾದೇವ್-ಪ್ರಧಾನಿ ಮೋದಿ
ರುಮೆನ್ ರಾದೇವ್-ಪ್ರಧಾನಿ ಮೋದಿ

ಬಲ್ಗೇರಿಯನ್ ಹಡಗು 'ರುಯೆನ್' ಮತ್ತು ಅದರ ಸಿಬ್ಬಂದಿಯನ್ನು ಸೊಮಾಲಿಯಾದ 35 ಕಡಲ್ಗಳ್ಳರ ಅಪಹರಿಸಿದ್ದರು. ಸುದೀರ್ಘ 40 ಗಂಟೆಗಳ ಕಾರ್ಯಾಚರಣೆ ನಡೆಸಿದ್ದ ಭಾರತೀಯ ನೌಕಾಪಡೆ ಕಡಲ್ಗಳ್ಳರನ್ನು ವಶಕ್ಕೆ 17 ಒತ್ತೆಯಾಳುಗಳನ್ನು ರಕ್ಷಿಸಿದ್ದರು. ಭಾರತೀಯ ಸೇನೆಯ ಕಾರ್ಯಾಚರಣೆ ವೇಳೆ ಬಂಧಿತರಾಗಿದ್ದ ಸೊಮಾಲಿಯಾದ 35 ಕಡಲ್ಗಳ್ಳರನ್ನು ಭಾರತೀಯ ಸೇನೆ ಸೋಮವಾರ ಭಾರತಕ್ಕೆ ಕರೆತಂದಿದೆ.

ಬಲ್ಗೇರಿಯಾದ ಅಧ್ಯಕ್ಷ ರುಮೆನ್ ರಾದೇವ್ ಭಾರತೀಯ ನೌಕಾಪಡೆಯ ಶೌರ್ಯವನ್ನು ಮನಗಂಡಿದ್ದು ಅಪಹರಣಕ್ಕೊಳಗಾದ ಹಡಗಿನಿಂದ ತನ್ನ ಏಳು ನಾಗರಿಕರ ಪ್ರಾಣ ಉಳಿಸಿದ್ದಕ್ಕಾಗಿ ಬಲ್ಗೇರಿಯಾದ ಅಧ್ಯಕ್ಷರು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ಮೋದಿ ಮತ್ತು ಭಾರತೀಯ ನೌಕಾಪಡೆಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದ ಡಿಸೆಂಬರ್ 14ರಂದು ಎಂವಿ ರೂಯೆನ್ ಅನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದರು. ಭಾರತೀಯ ನೌಕಾಪಡೆಯು ಸತತ 40-ಗಂಟೆಗಳ ಕಾಲ ಕಾರ್ಯಾಚರಣೆಯಲ್ಲಿ ಹಡಗು ರುಯೆನ್ ಅನ್ನು ರಕ್ಷಿಸುವ ಮೂಲಕ ವಾಣಿಜ್ಯ ಹಡಗುಗಳನ್ನು ಹೈಜಾಕ್ ಮಾಡುವ ಸೊಮಾಲಿ ಕಡಲ್ಗಳ್ಳರ ಯೋಜನೆಗಳನ್ನು ವಿಫಲಗೊಳಿಸಿತು. ಐಎನ್​ಎಸ್ ಕೊಲ್ಕತ್ತ, ಕಳೆದ 40 ಗಂಟೆಗಳಲ್ಲಿ, ಸಂಘಟಿತ ಕ್ರಮಗಳ ಮೂಲಕ ಯಶಸ್ವಿಯಾಗಿ ಎಲ್ಲಾ 17 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ರುಮೆನ್ ರಾದೇವ್-ಪ್ರಧಾನಿ ಮೋದಿ
Somali pirates: ಬಂಧಿತ 35 ಸೊಮಾಲಿಯಾ ಕಡಲ್ಗಳ್ಳರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆತಂದ ನೌಕಾಪಡೆ

ಭಾರತೀಯ ನೌಕಾಪಡೆಯ ಶೌರ್ಯವನ್ನು ಮೆಚ್ಚಿದ ಬಲ್ಗೇರಿಯಾದ ವಿದೇಶಾಂಗ ಸಚಿವೆ

ಬಲ್ಗೇರಿಯಾದ ವಿದೇಶಾಂಗ ಸಚಿವೆ ಮರಿಯಾ ಗೇಬ್ರಿಯಲ್, ತನ್ನ ದೇಶದ ಏಳು ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಹಡಗು ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಯಶಸ್ವಿ ಕಾರ್ಯಾಚರಣೆಗಾಗಿ ಭಾರತೀಯ ನೌಕಾಪಡೆಗೆ ಕೃತಜ್ಞತೆ ಸಲ್ಲಿಸಿದರು. ಗೇಬ್ರಿಯಲ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, 'ಎಕ್ಸ್' ನಲ್ಲಿ, ಅದಕ್ಕಾಗಿ ನಾವು ಸ್ನೇಹಿತರು ಎಂದು ಬರೆದಿದ್ದಾರೆ.

ಇದೀಗ ಬಲ್ಗೇರಿಯಾ ಅಧ್ಯಕ್ಷ ರುಮೆನ್ ರಾದೇವ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು "ರೂಯೆನ್" ಮತ್ತು 7 ಬಲ್ಗೇರಿಯನ್ ಪ್ರಜೆಗಳು ಸೇರಿದಂತೆ ಅದರ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ನೌಕಾಪಡೆಯ ಕೆಚ್ಚೆದೆಯ ಕ್ರಮಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ" ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com