ಅಕ್ರಮವಾಗಿ ಗಡಿ ನುಸುಳುತ್ತಿದ್ದ ತಮಿಳುನಾಡು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ನನ್ನು ಬಂಧಿಸಿದ ಬಾಂಗ್ಲಾದೇಶ ಸೇನೆ, ಗಡಿಯಲ್ಲಿ ನಡೆದಿದ್ದೇನು?

ಬಾಂಗ್ಲಾದೇಶದೊಳಗೆ ಅಕ್ರಮವಾಗಿ ನುಸುಳುತ್ತಿದ್ದ ತಮಿಳುನಾಡು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಒಬ್ಬರನ್ನು ಬಾಂಗ್ಲಾದೇಶ ಸೇನೆ ಬಂಧಿಸಿದ್ದು ತೀವ್ರ ವಿಚಾರಣೆ ನಡೆಸುತ್ತಿದೆ.
ಬಂಧಿತ ಸಬ್‌ಇನ್ಸ್‌ಪೆಕ್ಟರ್‌ ಜಾನ್ ಸೆಲ್ವರಾಜ್
ಬಂಧಿತ ಸಬ್‌ಇನ್ಸ್‌ಪೆಕ್ಟರ್‌ ಜಾನ್ ಸೆಲ್ವರಾಜ್
Updated on

ನವದೆಹಲಿ: ಬಾಂಗ್ಲಾದೇಶದೊಳಗೆ ಅಕ್ರಮವಾಗಿ ನುಸುಳುತ್ತಿದ್ದ ತಮಿಳುನಾಡು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಒಬ್ಬರನ್ನು ಬಾಂಗ್ಲಾದೇಶ ಸೇನೆ ಬಂಧಿಸಿದ್ದು ತೀವ್ರ ವಿಚಾರಣೆ ನಡೆಸುತ್ತಿದೆ.

ಬಂಧಿತ ಸಬ್‌ಇನ್ಸ್‌ಪೆಕ್ಟರ್‌ ನನ್ನು ಜಾನ್ ಸೆಲ್ವರಾಜ್ ಎಂದು ಗುರುತಿಸಲಾಗಿದೆ. ಚೆನ್ನೈನ ತಾಂಬರಂ ಪೊಲೀಸ್ ಕಮಿಷನರೇಟ್ ಅಡಿಯ ಪೊಲೀಸ್ ಠಾಣೆಯಾಗಿ ಜಾನ್ ಸೆಲ್ವರಾಜ್ ಸಬ್‌ಇನ್ಸ್‌ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಪೊಲೀಸ್ ಠಾಣೆಯು ತಾಂಬರಂನಲ್ಲಿ ಅತಿ ಹೆಚ್ಚು ಅಪರಾಧ ಪೀಡಿತ ಪೊಲೀಸ್ ಠಾಣೆಗಳಲ್ಲಿ ಒಂದಾಗಿದೆ. ಅಲ್ಲದೆ ಜಾನ್ ಸೆಲ್ವರಾಜ್ ಸೆಲೈಯೂರ್ ಪೊಲೀಸ್ ಠಾಣೆಯಲ್ಲೂ ವಿಶೇಷ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ ಅವರು ಬಹಳ ದಿನಗಳಿಂದ ನ್ಯಾಯಾಲಯದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇದರಿಂದಾಗಿ ಹಲವು ಕ್ರಿಮಿನಲ್ ಗಳ ನಿಕಟ ಪರಿಚಯವೂ ಇದೆ.

ಬಂಧಿತ ಸಬ್‌ಇನ್ಸ್‌ಪೆಕ್ಟರ್‌ ಜಾನ್ ಸೆಲ್ವರಾಜ್
ಪುರಿ ಜಗನ್ನಾಥ ದೇವಾಲಯಕ್ಕೆ ಅನಧಿಕೃತ ಪ್ರವೇಶ: 9 ಮಂದಿ ಬಾಂಗ್ಲಾ ಪ್ರಜೆಗಳು ವಶಕ್ಕೆ, ತೀವ್ರ ವಿಚಾರಣೆ

ಜಾನ್ ಸೆಲ್ವರಾಜ್

ತಿರುಚ್ಚಿ ಮೂಲದ ಜಾನ್ ಸೆಲ್ವರಾಜ್ ಅವರು ಮಡಿಪಾಕ್ಕಂನ ಸೆಲೈಯೂರ್ ಪೊಲೀಸ್ ಠಾಣೆಯಲ್ಲಿ ವಿಶೇಷ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವೈದ್ಯಕೀಯ ರಜೆ ಮೇಲೆ ತೆರಳಿದ್ದ ಸೆಲ್ವರಾಜ್ ಇದೀಗ ಬಾಂಗ್ಲಾ ಸೇನೆಯ ಕೈಗೆ ಸಿಕ್ಕಿಬಿದ್ದಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ಪೊಲೀಸ್ ಠಾಣೆಯಲ್ಲಿ ಅಪರಾಧಿಗಳನ್ನು ನ್ಯಾಯಾಲಯಕ್ಕೆ ಸಾಗಿಸುವ ವ್ಯಕ್ತಿ ಅಕ್ರಮ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆಯೇ? ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೇನೆಯ ಬಂಧನದ ನಂತರ ದೇಶದ ಸೈನಿಕರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ತನಿಖೆಯಿಂದ ಆತ ಪೊಲೀಸ್ ಅಧಿಕಾರಿ ಎಂದು ತಿಳಿದು ಬಂದ ಕೂಡಲೇ ಸಂಬಂಧಪಟ್ಟ ರಾಜ್ಯ ಪೊಲೀಸ್ ಕಚೇರಿಗೆ ಮಾಹಿತಿ ನೀಡಲಾಗಿತ್ತು.

ಪೊಲೀಸ್ ತನಿಖೆ

ಅಕ್ರಮ ಗ್ಯಾಂಗ್ ಜತೆಗಿನ ಒಡನಾಟದಿಂದಾಗಿ ಗಡಿ ದಾಟಿದನೇ? ಅವರು ಗಡಿ ದಾಟಲು ಕಾರಣವೇನು? ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈತ ವಾಸವಿದ್ದ ಮನೆಯನ್ನು ಪೊಲೀಸರು ಶೋಧಿಸಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಸೆಲ್ವರಾಜ್ ವೈದ್ಯಕೀಯ ರಜೆ ಪಡೆದಿದ್ದು ಬಾಂಗ್ಲಾದೇಶದ ಗಡಿಗೆ ಏಕೆ ಹೋದರು? ಆತನ ನಿಕಟ ಸಂಪರ್ಕದಿಂದಲೂ ತನಿಖೆ ಚುರುಕುಗೊಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com