ಹಮಾಸ್ ದಾಳಿ ಬೆನ್ನಲ್ಲೇ ಗಾಜಾ ಕ್ರಾಸಿಂಗ್ ಬಂದ್ ಮಾಡಿದ ಇಸ್ರೇಲ್: ಶೀಘ್ರವೇ ಸೇನಾ ಕಾರ್ಯಾಚರಣೆ ಸಾಧ್ಯತೆ

ಗಾಜಾಪಟ್ಟಿಗೆ ಮಾನವೀಯತೆ ಸಹಾಯ ಒದಗಿಸುವುದಕ್ಕೆ ಅವಕಾಶ ನೀಡಲು ತೆರೆಯಲಾಗಿದ್ದ ಮಾರ್ಗವನ್ನು ಇಸ್ರೇಲ್ ಬಂದ್ ಮಾಡಿದೆ.
Hamas-israel war
ಹಮಾಸ್- ಇಸ್ರೇಲ್ ಯುದ್ಧonline desk
Updated on

ಗಾಜಾ: ಗಾಜಾಪಟ್ಟಿಗೆ ಮಾನವೀಯತೆ ಸಹಾಯ ಒದಗಿಸುವುದಕ್ಕೆ ಅವಕಾಶ ನೀಡಲು ತೆರೆಯಲಾಗಿದ್ದ ಮಾರ್ಗವನ್ನು ಇಸ್ರೇಲ್ ಬಂದ್ ಮಾಡಿದೆ.

ಹಮಾಸ್ ತನ್ನ ಮೇಲೆ ಮತ್ತೆ ದಾಳಿ ನಡೆಸಿದ ಬಳಿಕ ಇಸ್ರೇಲ್ ಈ ಕ್ರಮ ಕೈಗೊಂಡಿದೆ. ಇತ್ತೀಚಿನ ಹಮಾಸ್ ದಾಳಿಯಲ್ಲಿ ಹಲವು ಇಸ್ರೇಲಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ರಕ್ಷಣಾ ಸಚಿವರು, ಗಾಜಾದ ರಫಾ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಶೀಘ್ರವೇ ಪ್ರಬಲ ಕಾರ್ಯಾಚರಣೆಯ ಸುಳಿವು ನೀಡಿದ್ದಾರೆ.

ಈಜಿಪ್ಟ್ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಕೈರೋದಲ್ಲಿ ನಡೆಯುತ್ತಿರುವ ಕದನ ವಿರಾಮ ಪ್ರಯತ್ನಗಳಿಗೆ ಈ ದಾಳಿಯಿಂದ ತೀವ್ರ ಹಿನ್ನಡೆಯುಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ತಮ್ಮ ಸರ್ಕಾರದಲ್ಲಿರುವ ಕಟ್ಟರ್ ಗಳ ಒತ್ತಡದಲ್ಲಿ, ಕದನ ವಿರಾಮ ಒಪ್ಪಂದದ ನಿರೀಕ್ಷೆಗಳನ್ನು ಕಡಿಮೆ ಮಾಡುವುದನ್ನು ಮುಂದುವರೆಸಿದ್ದು, ಗಾಜಾದಿಂದ ಇಸ್ರೇಲ್ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಯುದ್ಧವನ್ನು ಅಂತ್ಯಗೊಳಿಸುವ ಹಮಾಸ್ ಉಗ್ರಗಾಮಿ ಗುಂಪಿನ ಬೇಡಿಕೆಗಳನ್ನು "ತೀವ್ರವಾದ ಬೇಡಿಕೆ ಎಂದು ಹೇಳಿದ್ದಾರೆ.

Hamas-israel war
ದಕ್ಷಿಣ ಗಾಜಾದ ರಾಫಾ ಮೇಲೆ ಇಸ್ರೇಲ್ ದಾಳಿ: 13 ಮಂದಿ ಸಾವು

ಅವರ ಸರ್ಕಾರ ಈಜಿಪ್ಟ್‌ನ ಗಡಿಯಲ್ಲಿರುವ ದಕ್ಷಿಣದ ಗಾಜಾ ನಗರವಾದ ರಾಫಾದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸುವ ಸೂಚನೆ ನೀಡಿದೆ. ಗಾಜಾದ 2.3 ಮಿಲಿಯನ್ ನಿವಾಸಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಈ ಪ್ರದೇಶದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com