ನಮ್ಮದೇ ತಪ್ಪು, ವಾಜಪೇಯಿ ಅವರೊಂದಿಗಿನ ಒಪ್ಪಂದ ಉಲ್ಲಂಘಿಸಿದ್ದೆವು: ಕಾರ್ಗಿಲ್ ಬಗ್ಗೆ ನವಾಜ್ ಷರೀಫ್

ಕಾರ್ಗಿಲ್ ವಿಷಯವಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
Nawaz Sharif-Vajpayee
ನವಾಜ್ ಷರೀಫ್- ವಾಜಪೇಯಿ
Updated on

ಇಸ್ಲಾಮಾಬಾದ್: ಕಾರ್ಗಿಲ್ ವಿಷಯವಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 1999 ರಲ್ಲಿ ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ನಡೆದಿದ್ದ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿತ್ತು ತಪ್ಪು ನಮ್ಮದೇ ಎಂದು ಹೇಳಿದ್ದಾರೆ.

1998 ರ ಮೇ 28 ರಂದು ಪಾಕಿಸ್ತಾನ 5 ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿತ್ತು. ಆ ನಂತರ ವಾಜಪೇಯಿ ಸಾಹೇಬರು ಇಲ್ಲಿಗೆ ಬಂದು ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡರು. ಆದರೆ ನಾವು ಆ ಒಪ್ಪಂದವನ್ನು ಉಲ್ಲಂಘಿಸಿದೆವು. ಅದು ನಮ್ಮ ತಪ್ಪು ಎಂದು ಷರೀಫ್ ಪಿಎಂಎಲ್-ಎನ್ ಜನರಲ್ ಕೌನ್ಸಿಲ್ ಸಭೆಯಲ್ಲಿ ಹೇಳಿದರು, ಸುಪ್ರೀಂ ಕೋರ್ಟ್ ಅವರನ್ನು ಅನರ್ಹಗೊಳಿಸಿದ ಆರು ವರ್ಷಗಳ ನಂತರ ಅವರನ್ನು ಆಡಳಿತ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಫೆಬ್ರವರಿ 21, 1999 ರಂದು ಐತಿಹಾಸಿಕ ಶೃಂಗಸಭೆಯ ನಂತರ ಷರೀಫ್ ಮತ್ತು ವಾಜಪೇಯಿ ಲಾಹೋರ್ ಘೋಷಣೆಗೆ ಸಹಿ ಹಾಕಿದರು. ಉಭಯ ದೇಶಗಳ ನಡುವಿನ ಶಾಂತಿ ಮತ್ತು ಸ್ಥಿರತೆಯ ದೃಷ್ಟಿಕೋನದ ಬಗ್ಗೆ ಮಾತನಾಡಿದ ಒಪ್ಪಂದವು ಪ್ರಮುಖ ಪ್ರಗತಿಯನ್ನು ಸೂಚಿಸಿತು, ಆದರೆ ಕೆಲವು ತಿಂಗಳ ನಂತರ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಪಾಕಿಸ್ತಾನದ ಒಳನುಗ್ಗುವಿಕೆ ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು.

Nawaz Sharif-Vajpayee
PoK: ಪಾಕಿಸ್ತಾನ ವಿರುದ್ಧ ಮೊಳಗಿದ ಆಜಾದಿ ಘೋಷಣೆ; ಸೇನೆ ಗುಂಡೇಟಿಗೆ 3 ಬಲಿ

"ಅಧ್ಯಕ್ಷ ಬಿಲ್ ಕ್ಲಿಂಟನ್ ಪಾಕಿಸ್ತಾನಕ್ಕೆ ಪರಮಾಣು ಪರೀಕ್ಷೆಗಳನ್ನು ನಡೆಸದಂತೆ ತಡೆಯಲು 5 ಬಿಲಿಯನ್ ಯುಎಸ್‌ಡಿ ನೀಡಿದ್ದರು ಆದರೆ ನಾನು ನಿರಾಕರಿಸಿದೆ. (ಮಾಜಿ ಪ್ರಧಾನಿ) ಇಮ್ರಾನ್ ಖಾನ್ ರಂತಹ ವ್ಯಕ್ತಿ ಅಂದು ನನ್ನ ಸ್ಥಾನದಲ್ಲಿದ್ದಿದ್ದರೆ ಅವರು ಕ್ಲಿಂಟನ್ ಅವರ ಪ್ರಸ್ತಾಪವನ್ನು ಸ್ವೀಕರಿಸುತ್ತಿದ್ದರು" ಎಂದು ಪಾಕಿಸ್ತಾನ ತನ್ನ ಮೊದಲ ಪರಮಾಣು ಪರೀಕ್ಷೆಯ 26 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಷರೀಫ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com