ಭಾರತದೊಂದಿಗೆ ಬಾಂಧವ್ಯ ಮತ್ತಷ್ಟು ಬಲಪಡಿಸುತ್ತೇವೆ; ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಖಂಡನೀಯ: ಡೊನಾಲ್ಡ್ ಟ್ರಂಪ್

ಭಾರತೀಯರಿಗೆ ದೀಪಾವಳಿ ಶುಭಾಶಯ ತಿಳಿಸಿದ ಅವರು, ತಮ್ಮ ಉತ್ತಮ ಸ್ನೇಹಿತ ಎಂದು ಕರೆಯುವ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮುಂದಿನ ದಿನಗಳಲ್ಲಿ ಪಾಲುದಾರಿಕೆಯನ್ನು ಹೆಚ್ಚಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೇವಲ 4 ದಿನಗಳು ಬಾಕಿ ಇರುವುದು. ಈ ಸಂದರ್ಭದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ಬಾಂಧವ್ಯವನ್ನು ಬಲಪಡಿಸಲು ಪ್ರತಿಜ್ಞೆ ಮಾಡಿದ್ದು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರವನ್ನು ಖಂಡಿಸಿದ್ದಾರೆ.

ಭಾರತೀಯರಿಗೆ ದೀಪಾವಳಿ ಶುಭಾಶಯ ತಿಳಿಸಿದ ಅವರು, ತಮ್ಮ ಉತ್ತಮ ಸ್ನೇಹಿತ ಎಂದು ಕರೆಯುವ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮುಂದಿನ ದಿನಗಳಲ್ಲಿ ಪಾಲುದಾರಿಕೆಯನ್ನು ಹೆಚ್ಚಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷ ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಟೀಕಿಸಿದ ಅವರು ಜಾಗತಿಕವಾಗಿ ಮತ್ತು ಅಮೆರಿಕದಲ್ಲಿ ಹಿಂದೂಗಳನ್ನು ನಿರ್ಲಕ್ಷಿಸಲಾಗುತ್ತದೆ ಎಂದು ಹೇಳಿದ್ದಾರೆ.

"ಆಮೂಲಾಗ್ರ ಎಡಪಂಥೀಯರ ಧರ್ಮ-ವಿರೋಧಿ ಅಜೆಂಡಾದ ವಿರುದ್ಧ ನಾವು ಹಿಂದೂ ಅಮೆರಿಕನ್ನರನ್ನು ರಕ್ಷಿಸುತ್ತೇವೆ. ನಿಮ್ಮ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡುತ್ತೇವೆ. ನನ್ನ ಆಡಳಿತದಲ್ಲಿ ಭಾರತ ಮತ್ತು ನನ್ನ ಉತ್ತಮ ಸ್ನೇಹಿತ ಪ್ರಧಾನಿ ಮೋದಿಯವರೊಂದಿಗಿನ ನಮ್ಮ ಪಾಲುದಾರಿಕೆಯನ್ನು ಬಲಪಡಿಸುತ್ತೇವೆ ಎಂದು ಹೇಳಿದ್ದಾರೆ.

ಬಾಂಗ್ಲಾದೇಶವು ಸಂಪೂರ್ಣ ಅವ್ಯವಸ್ಥೆಯ ಸ್ಥಿತಿಯಲ್ಲಿದೆ. ಡೆಮಾಕ್ರಟ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ಜೊ ಬೈಡನ್ ಪ್ರಪಂಚದಾದ್ಯಂತ ಮತ್ತು ಅಮೆರಿಕದಲ್ಲಿ ಹಿಂದೂಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದರು.

ಬಾಂಗ್ಲಾದೇಶದಲ್ಲಿ ಜನಸಮೂಹದಿಂದ ದಾಳಿ ಮತ್ತು ಲೂಟಿ ಎದುರಿಸುತ್ತಿರುವ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ಅನಾಗರಿಕ ಹಿಂಸಾಚಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ, ಕಮಲಾ ಹ್ಯಾರಿಸ್ ಮತ್ತು ಜೊ ಬೈಡನ್ ಹಿಂದೂಗಳನ್ನು ನಿರ್ಲಕ್ಷಿಸಿದ್ದಾರೆ. ಪ್ರಪಂಚದಾದ್ಯಂತ ಮತ್ತು ಅಮೆರಿಕಾದಲ್ಲಿ ಅವರು ಇಸ್ರೇಲ್‌ನಿಂದ ಉಕ್ರೇನ್‌ಗೆ ನಮ್ಮದೇ ಆದ ದಕ್ಷಿಣ ಗಡಿಯವರೆಗೆ ವಿಪತ್ತನ್ನು ಹೊಂದಿದ್ದಾರೆ, ಅಮೆರಿಕವನ್ನು ನಾವು ಬಲಗೊಳಿಸಿ ಶಾಂತಿಯನ್ನು ತರುತ್ತೇವೆ ಎಂದರು.

ಬಾಂಗ್ಲಾದೇಶದ ವಿಚಾರದಲ್ಲಿ ಟ್ರಂಪ್ ಅವರು ಮಾತನಾಡಿರುವುದು ಇದೇ ಮೊದಲು. ಬಾಂಗ್ಲಾದೇಶದಲ್ಲಿ ಜುಲೈ-ಆಗಸ್ಟ್‌ನಲ್ಲಿ ನೂರಾರು ಹಿಂದೂಗಳು ಕೊಲ್ಲಲ್ಪಟ್ಟರು, ವಿದ್ಯಾರ್ಥಿಗಳ ಆಂದೋಲನವು ಬೃಹತ್ ಪ್ರತಿಭಟನೆಯಾಗಿ ಮಾರ್ಪಟ್ಟಿತು, ಇದು ಆಗಸ್ಟ್ 5 ರಂದು ಅಂದಿನ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಲು ಕಾರಣವಾಯಿತು.

ನವೆಂಬರ್ 5 ರಂದು ಯುಎಸ್ ಅಧ್ಯಕ್ಷೀಯ ಚುನಾವಣೆ ದಿನ. ಅಮೆರಿಕ ಅಧ್ಯಕ್ಷರನ್ನು ಜನಪ್ರಿಯ ಮತದಿಂದ ಆಯ್ಕೆ ಮಾಡುವುದಕ್ಕಿಂತ ಹೆಚ್ಚಾಗಿ ಎಲೆಕ್ಟೋರಲ್ ಕಾಲೇಜ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಶ್ವೇತಭವನವನ್ನು ಗೆಲ್ಲಲು, ಅಭ್ಯರ್ಥಿಯು ಲಭ್ಯವಿರುವ 538 ಚುನಾವಣಾ ಮತಗಳಲ್ಲಿ 270 ಮತಗಳನ್ನು ಪಡೆದುಕೊಳ್ಳಬೇಕು.

ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ಜಾರ್ಜಿಯಾ, ಮಿಚಿಗನ್, ಅರಿಜೋನಾ, ಪೆನ್ಸಿಲ್ವೇನಿಯಾ, ಉತ್ತರ ಕೆರೊಲಿನಾ, ವಿಸ್ಕಾನ್ಸಿನ್ ಮತ್ತು ನೆವಾಡಾ ರಾಜ್ಯಗಳು ನಿರ್ಣಾಯಕವಾಗಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com