ಲೆಬನಾನ್‌ ಮೇಲೆ ಇಸ್ರೇಲ್‌ ಬಾಂಬ್‌ಗಳ ಸುರಿಮಳೆ: 52 ನಾಗರಿಕರ ಸಾವು!

ಇಸ್ರೇಲ್ ಈಶಾನ್ಯ ಲೆಬನಾನ್‌ನ ಕೃಷಿ ಗ್ರಾಮಗಳ ಮೇಲೆ ಡಜನ್‌ಗಟ್ಟಲೆ ತೀವ್ರವಾದ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 52 ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೈರುತ್: ಇಸ್ರೇಲ್ ಈಶಾನ್ಯ ಲೆಬನಾನ್‌ನ ಕೃಷಿ ಗ್ರಾಮಗಳ ಮೇಲೆ ಡಜನ್‌ಗಟ್ಟಲೆ ತೀವ್ರವಾದ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 52 ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಲೆಬನಾನ್‌ನ ಈಶಾನ್ಯ ಭಾಗದ ಒಂಬತ್ತು ಹಳ್ಳಿಗಳ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಸತ್ತವರ ಸಂಖ್ಯೆ 52ಕ್ಕೆ ಏರಿದೆ ಎಂದು ಬಾಲ್ಬೆಕ್ ಗವರ್ನರ್ ಬಶೀರ್ ಖೋಡ್ರ್ ಹೇಳಿದ್ದಾರೆ. ಇಸ್ರೇಲ್ ಲೆಬನಾನ್ ಮತ್ತು ಗಾಜಾ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಈ ಗ್ರಾಮದಲ್ಲಿ ಉಗ್ರ ಸಂಘಟನೆ ಹೆಜ್ಬುಲ್ಲಾಗೆ ಹೆಚ್ಚಿನ ಬೆಂಬಲವಿದೆ. ಇಸ್ರೇಲ್ ಇತ್ತೀಚೆಗೆ ಲೆಬನಾನ್‌ನ ದಕ್ಷಿಣ ಉಪನಗರ ದಹಿಯಾದಲ್ಲಿ ಹಿಜ್ಬುಲ್ಲಾ ಅಡಗುತಾಣಗಳನ್ನು ಗುರಿಯಾಗಿಟ್ಟುಕೊಂಡು ವೈಮಾನಿಕ ದಾಳಿ ನಡೆಸಿತು. ಆದರೆ ಈ ದಾಳಿಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ಲೆಬನಾನ್‌ನಲ್ಲಿ ಇಸ್ರೇಲ್ ಇತ್ತೀಚಿನ ವಾರಗಳಲ್ಲಿ ಬಾಲ್‌ಬೆಕ್ ನಗರದಂತಹ ದೊಡ್ಡ ನಗರ ಕೇಂದ್ರಗಳಿಗೆ ತನ್ನ ದಾಳಿಯನ್ನು ವಿಸ್ತರಿಸಿದೆ. ಅಲ್ಲಿ 80,000 ಜನರು ವಾಸಿಸುತ್ತಿದ್ದು ಅಲ್ಲಿ ಹೆಜ್ಬೊಲ್ಲಾ ಕಾರ್ಯಾಚರಣೆಯನ್ನು ನಡೆಸುತ್ತದೆ. ಇಸ್ರೇಲ್‌ನ ಈಶಾನ್ಯ ನಗರವಾದ ಬಾಲ್‌ಬೆಕ್‌ನಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಿಂದಾಗಿ 60,000 ಜನರು ಪಲಾಯನಗೈದಿದ್ದಾರೆ ಎಂದು ಪ್ರದೇಶವನ್ನು ಪ್ರತಿನಿಧಿಸುವ ಲೆಬನಾನಿನ ಸಂಸದ ಹುಸೇನ್ ಹಜ್ ಹಸನ್ ಹೇಳಿದ್ದಾರೆ.

ಸಂಗ್ರಹ ಚಿತ್ರ
ಹಿಜ್ಬುಲ್ಲಾ ಕಮಾಂಡರ್ ವಶಕ್ಕೆ ಪಡೆದ ಇಸ್ರೇಲ್ ಸೇನೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com