ರಷ್ಯಾ: ಅಮೇರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಗೆ ಜಾಗತಿಕ ಮಟ್ಟದಲ್ಲಿ ನಾಯಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಆದರೆ ಅಮೇರಿಕಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ವರೆಗೂ ಡೊನಾಲ್ಡ್ ಟ್ರಂಪ್ ಗೆ ಅಭಿನಂದನೆ, ಶುಭಾಶಯವನ್ನು ತಿಳಿಸಿಲ್ಲ.
ಕ್ರೆಮ್ಲಿನ್ ವಕ್ತಾರರು ಸಿಎನ್ಎನ್ ಗೆ ನೀಡಿರುವ ಹೇಳಿಕೆಯ ಪ್ರಕಾರ, ವ್ಲಾದಿಮಿರ್ ಪುಟಿನ್ ಡೊನಾಲ್ಡ್ ಟ್ರಂಪ್ ಗೆ ಅಭಿನಂದನೆ ಸಲ್ಲಿಸುವ ಸಾಧ್ಯತೆಯೂ ಇಲ್ಲ.
"ನಾವು ನಮ್ಮ ದೇಶದ ವಿರುದ್ಧದ ಯುದ್ಧದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿರುವ ಸ್ನೇಹರಹಿತ ದೇಶದ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದನ್ನು ಮರೆಯಬಾರದು" ಎಂದು ಕ್ರೆಮ್ಲಿನ್ ವಕ್ತಾರರು ಹೇಳಿದ್ದಾರೆ.
ಯುಎಸ್ ಚುನಾವಣೆಯ ಮಾಹಿತಿಯನ್ನು ರಷ್ಯಾ ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ವಕ್ತಾರರು ಹೇಳಿದರು.
Advertisement