US Elections 2024: ಟ್ರಂಪ್ ಗೆಲುವಿನ ಹಾದಿ ಸುಗಮ; ಗೆಲುವಿಗೆ ಇನ್ನು ಕೇವಲ 4 ಎಲೆಕ್ಟೊರಲ್ ಮತ ಬೇಕು!

ಟ್ರಂಪ್ ಮತ್ತು ಅವರ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರು ಭದ್ರಕೋಟೆಯ ರಾಜ್ಯಗಳಿಗೆ ಲಗ್ಗೆಯಿಟ್ಟಿದ್ದಾರೆ. ಟ್ರಂಪ್ ಈಗ 266 ಚುನಾವಣಾ ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸ್ಪಷ್ಟ ಚಿತ್ರಣ ಹೊರಬೀಳುತ್ತಿದ್ದು, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಉತ್ತರ ಕೆರೊಲಿನಾ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ಗೆಲುವು ಕಂಡಿದ್ದು, ಶ್ವೇತಭವನದ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಸಮೀಪವಾಗಿದೆ.

ಟ್ರಂಪ್ ಮತ್ತು ಅವರ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರು ಭದ್ರಕೋಟೆಯ ರಾಜ್ಯಗಳಿಗೆ ಲಗ್ಗೆಯಿಟ್ಟಿದ್ದಾರೆ. ಟ್ರಂಪ್ ಈಗ 266 ಚುನಾವಣಾ ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

ಈ ಮೂಲಕ ಮೊಟ್ಟಮೊದಲ ಬಾರಿಗೆ ಅಮೆರಿಕ ಇತಿಹಾಸದಲ್ಲಿ ಮಹಿಳಾ ಅಧ್ಯಕ್ಷೆಯಾಗುವ ಕಮಲಾ ಹ್ಯಾರಿಸ್ ಕನಸು ಭಗ್ನಗೊಳ್ಳುವ ಲಕ್ಷಣ ಕಾಣುತ್ತಿದೆ. ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್, ಮಿಚಿಗನ್, ಅರಿಝೋನಾ ಮತ್ತು ನೆವಾಡಾ ಎಂಬ ಐದು ನಿರ್ಣಾಯಕ ರಾಜ್ಯಗಳ ಚುನಾವಣೆ ಬಾಕಿ ಉಳಿದಿದ್ದು ಮುಂದಿನ ಅಧ್ಯಕ್ಷರನ್ನು ನಿರ್ಧರಿಸುತ್ತದೆ.

ನ್ಯೂ ಹ್ಯಾಂಪ್‌ಶೈರ್ ಕಳೆದ ಎಂಟು ಅಧ್ಯಕ್ಷೀಯ ಚುನಾವಣೆಗಳಲ್ಲಿ ಏಳರಲ್ಲಿ ಡೆಮೋಕ್ರಾಟ್‌ಗಳನ್ನು ಬೆಂಬಲಿಸಿದೆ. ಇದು ಮೂರನೇ ಬಾರಿಗೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನ್ಯೂ ಹ್ಯಾಂಪ್‌ಶೈರ್‌ನ್ನು ಪ್ರಾಥಮಿಕವನ್ನು ಗೆದ್ದಿದ್ದಾರೆ ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯವನ್ನು ಕಳೆದುಕೊಂಡಿದ್ದಾರೆ.

Donald Trump
US Elections 2024: ರೋಚಕ ಘಟ್ಟ ತಲುಪಿದ ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕಮಲಾ ಹ್ಯಾರಿಸ್ ಹಿಂದಿಕ್ಕಿದ ಡೊನಾಲ್ಡ್ ಟ್ರಂಪ್; ತೀವ್ರ ಜಿದ್ದಾಜಿದ್ದಿ

ಜಾರ್ಜಿಯಾ ಗೆದ್ದ ಡೊನಾಲ್ಡ್ ಟ್ರಂಪ್

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರ್ಜಿಯಾವನ್ನು ಗೆದ್ದರು, 2020ರಲ್ಲಿ ಜೊ ಬೈಡನ್ ಇಲ್ಲಿ ಗೆಲುವು ಕಂಡಿದ್ದರು. ಆದರೆ ರಿಪಬ್ಲಿಕನ್ನರು 1996 ರಿಂದ ಎಲ್ಲಾ ಜಾರ್ಜಿಯಾ ಅಧ್ಯಕ್ಷೀಯ ಮತಗಳನ್ನು ಗೆದ್ದಿದ್ದಾರೆ. ಟ್ರಂಪ್ ಅವರು ಜಾರ್ಜಿಯಾದಲ್ಲಿ 2020 ರ ಸೋಲನ್ನು ಅಕ್ರಮ ಎಂದು ಆರೋಪಿಸಿದ್ದರು. ರಾಜಕೀಯ ಮತ್ತು ಕಾನೂನು ಹೋರಾಟಕ್ಕೆ 4 ವರ್ಷಗಳ ಹಿಂದೆ ಕಾರಣವಾಗಿತ್ತು.

ರಾಜ್ಯವು ಇಬ್ಬರು ಡೆಮಾಕ್ರಟಿಕ್ ಯುಎಸ್ ಸೆನೆಟರ್‌ಗಳನ್ನು ಹೊಂದಿದ್ದರೆ, ಟ್ರಂಪ್‌ರ ಗೆಲುವು ಜಾರ್ಜಿಯಾ ಇನ್ನೂ ರಿಪಬ್ಲಿಕನ್ ಬೆಂಟ್ ನ್ನು ಹೊಂದಿದೆ ಎಂದು ಸಾಬೀತುಪಡಿಸುತ್ತದೆ.

ಸದ್ಯಕ್ಕೆ: ಟ್ರಂಪ್: 266, ಹ್ಯಾರಿಸ್: 188. ಬಹುಮತ ಪಡೆಯಲು: 270 ಮತಗಳು ಬೇಕಿವೆ.

ಇದರರ್ಥ ಟ್ರಂಪ್ ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಕೇವಲ ನಾಲ್ಕು ಚುನಾವಣಾ ಮತಗಳನ್ನು ಗೆಲ್ಲಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com