ಬ್ರೆಜಿಲಿಯಾ: ಆಫ್ರಿಕಾ ಖಂಡದ ನೈಜೀರಿಯಾ ಭೇಟಿ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಭಾರತೀಯ ಕಾಲಮಾನ ಪ್ರಕಾರ ಇಂದು ಮಂಗಳವಾರ ಬೆಳಗ್ಗೆ ಆಗಮಿಸಿದ್ದಾರೆ.
ಬ್ರೆಜಿಲ್‌ನಲ್ಲಿರುವ ಭಾರತೀಯ ಸಮುದಾಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತವನ್ನು ನೀಡಿದೆ.
ಅವರು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿನ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ. ಅನಿವಾಸಿ ಭಾರತೀಯರು 'ಮೋದಿ ಮೋದಿ' ಘೋಷಣೆಗಳನ್ನು ಕೂಗುತ್ತಾ ಭಾರತೀಯ ಸಂಸ್ಕೃತಿಯಂತೆ ನೃತ್ಯ ಮೂಲಕ ಸ್ವಾಗತಿಸಿದರು.
ವೇದ ಮಂತ್ರಗಳನ್ನು ಪಠಿಸಿದ ಬ್ರೆಜಿಲ್ ವಿದ್ವಾಂಸರು: ಬ್ರೆಜಿಲ್ ನ ವೇದ ವಿದ್ವಾಂಸರು ಪ್ರಧಾನಮಂತ್ರಿ ಮೋದಿಯವರ ಮುಂದೆ ವೇದ ಮಂತ್ರಗಳನ್ನು ಪಠಿಸಿದ್ದು ವಿಶೇಷವಾಗಿತ್ತು.
Advertisement