G20 ಶೃಂಗಸಭೆ: ಗ್ಲೋಬಲ್ ಸೌತ್ ದೇಶಗಳಿಗೆ ಪ್ರಬಲ ಧ್ವನಿಯಾದ ಪ್ರಧಾನಿ ಮೋದಿ

G20 ಶೃಂಗಸಭೆಯ ಅಧಿವೇಶನದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಭಾರತದ G20 ಥೀಮ್ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ನಡೆಯುತ್ತಿರುವ ಶೃಂಗಸಭೆಯಲ್ಲಿ ಕಳೆದ ವರ್ಷದಂತೆಯೇ ಪ್ರಸ್ತುತವಾಗಿದೆ ಎಂದು ಹೇಳಿದರು.
PM Modi at G-20
ಜಿ-20 ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ online desk
Updated on

ಬ್ರೆಜಿಲ್: ಜಾಗತಿಕ ಸಂಘರ್ಷಗಳಿಂದ ಉಂಟಾದ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟಿನಿಂದ ಜಾಗತಿಕ ದಕ್ಷಿಣದ ದೇಶಗಳು ಹೆಚ್ಚು ಪ್ರತಿಕೂಲ ಪರಿಣಾಮ ಎದುರಿಸಿವೆ ಮತ್ತು ಜಿ 20 ಇದನ್ನು ಪರಿಹರಿಸುವತ್ತ ಗಮನಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

G20 ಶೃಂಗಸಭೆಯ ಅಧಿವೇಶನದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಭಾರತದ G20 ಥೀಮ್ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ನಡೆಯುತ್ತಿರುವ ಶೃಂಗಸಭೆಯಲ್ಲಿ ಕಳೆದ ವರ್ಷದಂತೆಯೇ ಪ್ರಸ್ತುತವಾಗಿದೆ ಎಂದು ಹೇಳಿದರು.

ಜಾಗತಿಕ ಸಂಘರ್ಷಗಳಿಂದ ಉಂಟಾದ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟಿನಿಂದ ಜಾಗತಿಕ ದಕ್ಷಿಣವು ಹೆಚ್ಚು ಪ್ರತಿಕೂಲ ಪರಿಣಾಮ ಎದುರಿಸುತ್ತಿವೆ ಎಂದು ನಾನು ಹೇಳಲು ಬಯಸುತ್ತೇನೆ. ಆದ್ದರಿಂದ ನಾವು ಜಾಗತಿಕ ದಕ್ಷಿಣದ ಸವಾಲುಗಳು ಮತ್ತು ಆದ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಮಾತ್ರ ನಮ್ಮ ಚರ್ಚೆಗಳು ಯಶಸ್ವಿಯಾಗಬಹುದು" ಎಂದು ಮೋದಿ ಹೇಳಿದ್ದಾರೆ.

‘ಸಾಮಾಜಿಕ ಸೇರ್ಪಡೆ ಮತ್ತು ಹಸಿವು ಮತ್ತು ಬಡತನದ ವಿರುದ್ಧ ಹೋರಾಟ’ ಕುರಿತು ಜಿ20 ಅಧಿವೇಶನದಲ್ಲಿ ಪ್ರಧಾನಮಂತ್ರಿಗಳು ಈ ಹೇಳಿಕೆ ನೀಡಿದ್ದು ಜಾಗತಿಕ ಆಡಳಿತದ ಸಂಸ್ಥೆಗಳ ಸುಧಾರಣೆಗೆ ಮೋದಿ ಕರೆ ನೀಡಿದರು.

"ನಾವು ನವದೆಹಲಿ ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್‌ಗೆ G20 ನ ಶಾಶ್ವತ ಸದಸ್ಯತ್ವವನ್ನು ನೀಡುವ ಮೂಲಕ ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸಿದಂತೆ, ನಾವು ಜಾಗತಿಕ ಆಡಳಿತದ ಸಂಸ್ಥೆಗಳನ್ನು ಸುಧಾರಿಸುತ್ತೇವೆ" ಎಂದು ಅವರು ಹೇಳಿದರು.

‘ಹಸಿವು ಮತ್ತು ಬಡತನದ ವಿರುದ್ಧ ಜಾಗತಿಕ ಮೈತ್ರಿ’ಗಾಗಿ ಬ್ರೆಜಿಲ್‌ನ ಉಪಕ್ರಮವನ್ನು ಭಾರತ ಬೆಂಬಲಿಸುತ್ತದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಹೇಳಿದ್ದಾರೆ.

PM Modi at G-20
G20 Summit: ಬ್ರೆಜಿಲ್ ತಲುಪಿದ ಪ್ರಧಾನಿ ಮೋದಿ; ದಕ್ಷಿಣ ರಾಷ್ಟ್ರಗಳು ಎದುರಿಸುತ್ತಿರುವ ಗಂಭೀರ ವಿಷಯಗಳ ಕುರಿತು ವಿಶ್ವನಾಯಕರೊಂದಿಗೆ ಚರ್ಚೆ

"ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಕೈಗೊಂಡ ಜನ-ಕೇಂದ್ರಿತ ನಿರ್ಧಾರಗಳನ್ನು ಬ್ರೆಜಿಲ್‌ನ ಅಧ್ಯಕ್ಷೀಯ ಅವಧಿಯಲ್ಲಿ ತೆಗೆದುಕೊಳ್ಳಲಾಗಿದೆ" ಎಂದು ಅವರು ಹೇಳಿದರು.

“ನಾವು ಎಸ್‌ಡಿಜಿಗೆ (ಸುಸ್ಥಿರ ಅಭಿವೃದ್ಧಿ ಗುರಿಗಳು) ಆದ್ಯತೆ ನೀಡಿರುವುದು ಬಹಳ ತೃಪ್ತಿಯ ವಿಷಯವಾಗಿದೆ. ನಾವು ಅಂತರ್ಗತ ಅಭಿವೃದ್ಧಿ, ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಯುವ ಶಕ್ತಿಯ ಮೇಲೆ ಕೇಂದ್ರೀಕರಿಸಿದ್ದೇವೆ, ”ಎಂದು ಅವರು ಹೇಳಿದರು.

ಭಾರತದ G20 ಪ್ರೆಸಿಡೆನ್ಸಿಯ ವಿಷಯವನ್ನು ಮಹಾ ಉಪನಿಷತ್ತಿನ ಪ್ರಾಚೀನ ಸಂಸ್ಕೃತ ಪಠ್ಯದಿಂದ ಪಡೆಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com