ಮತ್ತೊಂದು ಹಿಂದೂ ವಿರೋಧಿ ನಡೆ ಮೂಲಕ ಸುದ್ದಿಯಾಗುತ್ತಿದೆ ಬಾಂಗ್ಲಾ!

ಬಾಂಗ್ಲಾದೇಶ ಸಮ್ಮಿಲಿತಾ ಸನಾತನಿ ಜಾಗರಣ ಜೋಟೆಯ ವಕ್ತಾರ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಸೋಮವಾರ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ್ರೋಹ ಪ್ರಕರಣದಲ್ಲಿ ಬಂಧಿಸಲಾಗಿದೆ.
Hindu community protest against atrocities in Bangladesh
ಬಾಂಗ್ಲಾದಲ್ಲಿ ಹಿಂದೂಗಳ ಪ್ರತಿಭಟನೆ online desk
Updated on

ಢಾಕಾ: ಬಾಂಗ್ಲಾದೇಶದಲ್ಲಿ ಅಸ್ಥಿರತೆ ತಲೆದೋರುತ್ತಿದ್ದು, ಸರ್ಕಾದ ಹಿಂದೂ ವಿರೋಧಿ ಕೃತ್ಯಗಳ ಬಗ್ಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿದೆ.

ಇಸ್ಕಾನ್ ನ ಸಂತನೋರ್ವವನ್ನು ದೇಶದ್ರೋಹದಡಿ ಬಂಧನಕ್ಕೊಳಪಡಿಸಿದ ಬೆನ್ನಲ್ಲೇ ಈಗ ಬಾಂಗ್ಲಾದೇಶ ಮತ್ತೊಂದು ಹಿಂದೂ ವಿರೋಧಿ ನಡೆ ಮೂಲಕ ಸುದ್ದಿಯಾಗುತ್ತಿದೆ.

ಹಿಂದೂಗಳನ್ನು ಟಾರ್ಗೆಟ್ ಮಾಡುವ ಮುಂದುವರೆದ ಭಾಗದಂತಿರುವ ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಹಣಕಾಸು ಇಲಾಖೆ ಅಧಿಕಾರಿಗಳು, ಚಿನ್ಮೋಯ್ ಕೃಷ್ಣ ದಾಸ್ ಸೇರಿ ಇಸ್ಕಾನ್ ಜೊತೆಗೆ ಗುರುತಿಸಿಕೊಂಡಿರುವ 17 ಹಿಂದೂ ನಾಯಕರ ಬ್ಯಾಂಕ್ ಖಾತೆಗಳನ್ನು 30 ದಿನಗಳ ವರೆಗೆ ಸ್ತಬ್ಧಗೊಳಿಸುವುದಕ್ಕೆ ಆದೇಶ ನೀಡಿದ್ದಾರೆ.

ಬಾಂಗ್ಲಾದೇಶ ಬ್ಯಾಂಕ್‌ನ ಹಣಕಾಸು ಗುಪ್ತಚರ ಘಟಕ (ಬಿಎಫ್‌ಐಯು) ಗುರುವಾರ ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಈ ನಿರ್ದೇಶನಗಳನ್ನು ಕಳುಹಿಸಿದ್ದು, ಈ ಖಾತೆಗಳಲ್ಲಿನ ಎಲ್ಲಾ ರೀತಿಯ ವಹಿವಾಟುಗಳನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಿದೆ ಎಂದು ಪ್ರೋಥೋಮ್ ಅಲೋ ಪತ್ರಿಕೆ ವರದಿ ಮಾಡಿದೆ.

Hindu community protest against atrocities in Bangladesh
ಬಾಂಗ್ಲಾ: ಇಸ್ಕಾನ್ ಸನ್ಯಾಸಿ ಬಂಧನದ ವಿರುದ್ಧ ಧ್ವನಿ ಎತ್ತಿದ ಶೇಖ್ ಹಸೀನಾ ಹೇಳಿದ್ದೇನೆಂದರೆ...

ಬಾಂಗ್ಲಾದೇಶ ಸಮ್ಮಿಲಿತಾ ಸನಾತನಿ ಜಾಗರಣ ಜೋಟೆಯ ವಕ್ತಾರ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಸೋಮವಾರ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ್ರೋಹ ಪ್ರಕರಣದಲ್ಲಿ ಬಂಧಿಸಲಾಗಿದೆ. ಮಂಗಳವಾರ ಚಟ್ಟೋಗ್ರಾಮ್ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿ ಜೈಲಿಗೆ ಕಳುಹಿಸಿದೆ. ಭದ್ರತಾ ಸಿಬ್ಬಂದಿ ಮತ್ತು ಹಿಂದೂ ಮುಖಂಡನ ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ವಕೀಲರೊಬ್ಬರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com