ಇರಾಕ್‌ನಲ್ಲಿ ವೈಮಾನಿಕ ದಾಳಿ: ಐವರು ಐಎಸ್ ಉಗ್ರರ ಹತ್ಯೆ

ಇರಾಕಿ ಪಡೆಗಳು ಶುಕ್ರವಾರ ಕಿರ್ಕುಕ್ ಪ್ರಾಂತ್ಯದ ಆಗ್ನೇಯ ಭಾಗದಲ್ಲಿರುವ ಹ್ಯಾಮ್ರಿನ್ ಪರ್ವತ ಶ್ರೇಣಿಯಲ್ಲಿನ ಉಗ್ರರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ
Casual Images
ಸಾಂದರ್ಭಿಕ ಚಿತ್ರ
Updated on

ಬಾಗ್ದಾದ್: ಉತ್ತರ ಇರಾಕಿನ ಕಿರ್ಕುಕ್ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಐವರು ಇಸ್ಲಾಮಿಕ್ ಸ್ಟೇಟ್ (IS) ಉಗ್ರರು ಹತ್ಯೆಯಾಗಿದ್ದಾರೆ ಎಂದು ಇರಾಕ್ ಮಿಲಿಟರಿ ಶನಿವಾರ ತಿಳಿಸಿದೆ.

ಗುಪ್ತಚರ ವರದಿಗಳ ಪ್ರಕಾರ, ಇರಾಕಿ ಪಡೆಗಳು ಶುಕ್ರವಾರ ಕಿರ್ಕುಕ್ ಪ್ರಾಂತ್ಯದ ಆಗ್ನೇಯ ಭಾಗದಲ್ಲಿರುವ ಹ್ಯಾಮ್ರಿನ್ ಪರ್ವತ ಶ್ರೇಣಿಯಲ್ಲಿನ ಉಗ್ರರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ ಎಂದು ಇರಾಕಿನ ಜಂಟಿ ಕಾರ್ಯಾಚರಣೆ ಕಮಾಂಡ್ ನ ಮಾಧ್ಯಮ ಘಟಕ ಹೇಳಿರುವುದಾಗಿ Xinhua ಸುದ್ದಿಸಂಸ್ಥೆ ವರದಿ ಮಾಡಿದೆ.

ಶನಿವಾರ ಬೆಳಗ್ಗೆ ಇರಾಕ್ ಸೇನೆ ಮತ್ತು ಗುಪ್ತಚರ ದಳದ ಜಂಟಿ ಪಡೆ ಎರಡು ಅಡಗುತಾಣಗಳನ್ನು ಶೋಧಿಸಿದ್ದು, ಐವರು ಉಗ್ರರ ಶವಗಳನ್ನು ಪತ್ತೆ ಮಾಡಿದೆ. ಅಡಗುತಾಣಗಳಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳು, ಲಾಜಿಸ್ಟಿಕಲ್ ವಸ್ತುಗಳು ಮತ್ತು ಸಂವಹನ ಸಾಧನಗಳನ್ನು ಸಹ ಪತ್ತೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

2017 ರಲ್ಲಿ IS ಸೋಲಿನ ನಂತರ ಇರಾಕ್‌ನಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದೆ. ಆದಾಗ್ಯೂ, IS ಉಗ್ರರು ನಗರ ಕೇಂದ್ರಗಳು, ಮರುಭೂಮಿಗಳು ಮತ್ತು ಒರಟಾದ ಪ್ರದೇಶಗಳಿಗೆ ನುಸುಳುತ್ತಲೇ ಇದ್ದು, ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಆಗಾಗ್ಗೆ ಗೆರಿಲ್ಲಾ ದಾಳಿಗಳನ್ನು ನಡೆಸುತ್ತಿರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com