
ಲೆಬನಾನ್: ಲೆಬನಾನ್ ನ ಹೆಜ್ಬೊಲ್ಲಾ ಸಂಘಟನೆ ತನ್ನ ಹೊಸ ಮುಖ್ಯಸ್ಥನ ನೇಮಕವನ್ನು ಘೋಷಿಸಿದೆ.
ಉಪನಾಯಕನಾಗಿದ್ದ ನಯಿಮ್ ಕಾಸ್ಸೆಮ್ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇಸ್ರೇಲ್ ದಾಳಿಯಲ್ಲಿ ಕಳೆದ ತಿಂಗಳು ನಸ್ರಲ್ಲಾ ಸಾವನ್ನಪ್ಪಿದ್ದರು.
ಕಾಸ್ಸೆಮ್ ನಸ್ರಲಾ ನಂತರದ ನಾಯಕನಾಗಿ ಗುರುತಿಸಿಕೊಂಡಿದ್ದರು ಅಷ್ಟೇ ಅಲ್ಲದೇ ನಸ್ರಲ್ಲಾ ಸಾವಿನ ನಂತರ ಉಗ್ರಗಾಮಿ ಗುಂಪಿನ ಕಾರ್ಯನಿರ್ವಾಹಕ ನಾಯಕನಾಗಿ ಸೇವೆ ಸಲ್ಲಿಸಿದ್ದರು.
"ಹೆಜ್ಬೊಲ್ಲಾಹ್‌ನ (ಆಡಳಿತ) ಶೂರಾ ಶೇಖ್ ನಯಿಮ್ ಕಾಸ್ಸೆಮ್‌ನನ್ನು ಹೆಜ್ಬೊಲ್ಲಾಹ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕೌನ್ಸಿಲ್ ಆಯ್ಕೆ ಮಾಡಲು ಒಪ್ಪಿಕೊಂಡಿದೆ ಎಂದು ಇರಾನ್ ಬೆಂಬಲಿತ ಗುಂಪು ನಸ್ರಲ್ಲಾ ಹತ್ಯೆಯ ಒಂದು ತಿಂಗಳ ನಂತರ ಹೇಳಿಕೆಯಲ್ಲಿ ತಿಳಿಸಿದೆ.
ಹೆಜ್ಬೊಲ್ಲಾ ನಸ್ರಲ್ಲಾ ಅವರ ನೀತಿಗಳನ್ನು 'ಜಯ ಸಾಧಿಸುವವರೆಗೆ' ಮುಂದುವರಿಸುವುದಾಗಿ ಹಿಜ್ಬುಲ್ಲಾ ಪ್ರತಿಜ್ಞೆ ಮಾಡಿದೆ.
Advertisement