
ದೇರ್ ಅಲ್-ಬಾಲಾ: ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯು ಉತ್ತರ ಗಾಜಾದ ಬೀಟ್ ಲಾಹಿಯಾದಲ್ಲಿನ ವಸತಿ ಕಟ್ಟಡದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಮಕ್ಕಳು, ಮಹಿಳೆಯರೂ ಸೇರಿದಂತೆ 93 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾದ ಸಿವಿಲ್ ಡಿಫೆನ್ಸ್ ಏಜೆನ್ಸಿ ಹೇಳಿದೆ.
ಬೀಟ್ ಲಾಹಿಯಾದಲ್ಲಿನ ಅಬು ನಸ್ರ್ ಕುಟುಂಬದ ಮನೆಯ ಮೇಲಿನ ವಾಯುದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 93ಕ್ಕೆ ಏರಿದೆ. ಇನ್ನೂ ಸುಮಾರು 40 ಜನರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಏಜೆನ್ಸಿಯ ವಕ್ತಾರ ಮಹ್ಮದ್ ಬಾಸ್ಸಲ್ ತಿಳಿಸಿದ್ದಾರೆ.
ಕಳೆದ ರಾತ್ರಿ ಸ್ಫೋಟ ನಡೆದಿದೆ. ನಾನು ಮೊದಲು ಶೆಲ್ ದಾಳಿ ಎಂದು ಭಾವಿಸಿದೆ. ಆದರೆ ಬೆಳಗ್ಗೆ ಎದ್ದು ಹೊರಬಂದಾಗ ಜನರ ದೇಹಗಳು, ಕೈಕಾಲುಗಳು ಚೆಲ್ಲಾಪಿಲ್ಲಿಯಾಗಿದ್ದವು. ಗಾಯಾಳುಗಳನ್ನು ಅವಶೇಷಗಳಡಿಯಿಂದ ಎಳೆಯುವುದನ್ನು ನಾನು ನೋಡಿದೆ ಎಂದು ನಿರಾಶ್ರಿತ 30 ವರ್ಷದ ರಾಬಿ ಅಲ್-ಶಾಂಡಗ್ಲಿ ಹೇಳಿದರು.
ವಾಯುದಾಳಿಯಲ್ಲಿ ಸಾವನ್ನಪ್ಪಿದ 15 ಜನರ ಶವಗಳನ್ನು ಕಮಲ್ ಅಡ್ವಾನ್ ಆಸ್ಪತ್ರೆಗೆ ತರಲಾಗಿದೆ ಎಂದು ಅದರ ನಿರ್ದೇಶಕ ಹುಸ್ಸಾಮ್ ಅಬು ಸಫಿಯಾ ಎಎಫ್‌ಪಿಗೆ ತಿಳಿಸಿದ್ದಾರೆ.
Advertisement