ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಹಿಂಸಾಚಾರಕ್ಕೆ ಆದೇಶ ನೀಡಿದ್ದು ಭಾರತದ ಗೃಹ ಸಚಿವ ಅಮಿತ್ ಶಾ: ಕೆನಡಾ ಅಧಿಕಾರಿ

ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್ ಮಾರಿಸನ್ ಅವರು ರಾಷ್ಟ್ರೀಯ ಭದ್ರತಾ ಸಮಿತಿಯ ಸಂಸತ್ ಸದಸ್ಯರಿಗೆ, ತಾವು ಭಾರತದ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ವಾಷಿಂಗ್ಟನ್ ಪೋಸ್ಟ್‌ಗೆ ಖಚಿತಪಡಿಸಿರುವುದಾಗಿ ಹೇಳಿದ್ದಾರೆ.
Amit Shah
ಅಮಿತ್ ಶಾ
Updated on

ಒಟ್ಟಾವಾ: ಕೆನಡಾದೊಳಗಿನ ಸಿಖ್ ಪ್ರತ್ಯೇಕತಾವಾದಿ ಗುಂಪುಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರ, ಬೆದರಿಕೆ ಮತ್ತು ಗುಪ್ತಚರ ಸಂಗ್ರಹಣೆಯ ಅಭಿಯಾನ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈವಾಡವಿದೆ ಎಂದು ಆರೋಪಿಸಿ ಕೆನಡಾದ ಹಿರಿಯ ಅಧಿಕಾರಿಯೊಬ್ಬರು ಯುಎಸ್ ಮಾಧ್ಯಮಗಳೊಂದಿಗೆ ಸೂಕ್ಷ್ಮ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಹೊಸ ವಿಚಾರವು ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ಆರೋಪಕ್ಕೆ ಮತ್ತಷ್ಟು ಕಿಚ್ಚು ಹಚ್ಚುವ ಸಾಧ್ಯತೆಯಿದ್ದು, ಈಗಾಗಲೇ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ.

ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್ ಮಾರಿಸನ್ ಅವರು ರಾಷ್ಟ್ರೀಯ ಭದ್ರತಾ ಸಮಿತಿಯ ಸಂಸತ್ ಸದಸ್ಯರಿಗೆ, ತಾವು ಭಾರತದ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ವಾಷಿಂಗ್ಟನ್ ಪೋಸ್ಟ್‌ಗೆ ಖಚಿತಪಡಿಸಿರುವುದಾಗಿ ಹೇಳಿದ್ದಾರೆ. ವಾಷಿಂಗ್ಟನ್ ಪೋಸ್ಟ್ ಮೊದಲ ಬಾರಿಗೆ ಈ ಆರೋಪವನ್ನು ವರದಿ ಮಾಡಿತ್ತು.

ಪತ್ರಕರ್ತ ನನಗೆ ಕರೆ ಮಾಡಿ ಅದೇ ವ್ಯಕ್ತಿಯೇ ಎಂದು ಕೇಳಿದಾಗ ನಾನು ಹೌದು ಎಂದು ದೃಢಪಡಿಸಿದೆ ಎಂದು ಮಾರಿಸನ್ ಸಮಿತಿಗೆ ತಿಳಿಸಿದರು. ಪ್ರಕರಣದಲ್ಲಿ ಅಮಿತ್ ಶಾ ಅವರ ಒಳಗೊಳ್ಳುವಿಕೆಯ ಬಗ್ಗೆ ಕೆನಡಾಕ್ಕೆ ಹೇಗೆ ತಿಳಿದಿತ್ತು ಎಂದು ಮಾರಿಸನ್ ಹೇಳಿರಲಿಲ್ಲ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಭಾರತ ಮೂಲದ ಕೆನಡಾದ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ಪುರಾವೆ ಇದೆ ಎಂದು ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು.

ಕೆನಡಾ ಪುರಾವೆಗಳನ್ನು ಒದಗಿಸಿರುವುದನ್ನು ಭಾರತೀಯ ಸರ್ಕಾರಿ ಅಧಿಕಾರಿಗಳು ಪದೇ ಪದೇ ನಿರಾಕರಿಸಿದ್ದಾರೆ ಮತ್ತು ಆರೋಪಗಳನ್ನು ಅಸಂಬದ್ಧವೆಂದು ಕರೆದಿದ್ದಾರೆ. ಒಟ್ಟಾವಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಶಾ ವಿರುದ್ಧದ ಆರೋಪದ ಕುರಿತು ತಕ್ಷಣ ಪ್ರತಿಕ್ರಿಯಿಸಿಲ್ಲ.

Amit Shah
ಅಮಿತ್ ಶಾ ವಿದೇಶ ಪ್ರವಾಸದ ಮಾಹಿತಿ ನೀಡಿದ್ರೆ 10 ಲಕ್ಷ ಡಾಲರ್ ಬಹುಮಾನ: ಖಲಿಸ್ತಾನಿ ಉಗ್ರ Pannun ಘೋಷಣೆ

ಅಕ್ಟೋಬರ್ 14 ರಂದು, ಕೆನಡಾವು ಭಾರತೀಯ ಹೈಕಮಿಷನರ್ ಮತ್ತು ಇತರ ಐವರು ರಾಜತಾಂತ್ರಿಕರನ್ನು ಹೊರಹಾಕಿತು, ಅವರು ಖಲಿಸ್ತಾನ್ ಎಂದು ಕರೆಯಲ್ಪಡುವ ಸ್ವತಂತ್ರ ಸಿಖ್ ರಾಜ್ಯಕ್ಕಾಗಿ ಪ್ರಚಾರವನ್ನು ಸ್ತಬ್ಧಗೊಳಿಸುವ ಉದ್ದೇಶದಿಂದ ಬಲಾತ್ಕಾರ, ಬೆದರಿಕೆ ಮತ್ತು ಹಿಂಸಾಚಾರದ ಅನೇಕ ಪ್ರಕರಣಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು ಎಂದು ಆರೋಪಿಸಿದರು.

ಭಾರತೀಯ ಅಧಿಕಾರಿಗಳು ವಿದೇಶಿ ನೆಲದಲ್ಲಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಕೆನಡಾ ಮಾತ್ರ ಆರೋಪಿಸಿಲ್ಲ. ನ್ಯೂಯಾರ್ಕ್ ನಗರದಲ್ಲಿ ನೆಲೆಸಿರುವ ಸಿಖ್ ಪ್ರತ್ಯೇಕತಾವಾದಿ ನಾಯಕನನ್ನು ಕೊಲ್ಲಲು ವಿಫಲವಾದ ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ನ್ಯಾಯಾಂಗ ಇಲಾಖೆಯು ಅಕ್ಟೋಬರ್ ಮಧ್ಯದಲ್ಲಿ ಭಾರತೀಯ ಸರ್ಕಾರಿ ನೌಕರನ ವಿರುದ್ಧ ಕ್ರಿಮಿನಲ್ ಆರೋಪ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com