ಯಮೆನ್ ಹೌತಿಗಳಿಂದ ಕೆಂಪು ಸಮುದ್ರದಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ

ಇದು ಇರಾನ್ ಬೆಂಬಲಿತ ಬಂಡುಕೋರರ ಕಾರ್ಯಾಚರಣೆಯಲ್ಲಿ ಇತ್ತೀಚಿನ ದಾಳಿ ಎನ್ನಲಾಗಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿದಂತೆ ಕೆಂಪು ಸಮುದ್ರದ ಮೂಲಕ ಹಾದುಹೋಗುವ $1 ಟ್ರಿಲಿಯನ್ ಸರಕುಗಳನ್ನು ಪ್ರತಿ ವರ್ಷ ಅಡ್ಡಿಪಡಿಸಿದೆ
This photo released by the European Union's Operation Aspides naval force shows the Greek-flagged oil tanker Sounion burning in the Red Sea following a series of attacks by Yemen's Houthi rebels on Monday
ಹೌತಿ ಬಂಡುಕೋರರ ದಾಳಿ online desk
Updated on

ದುಬೈ: ಕೆಂಪು ಸಮುದ್ರದಲ್ಲಿ ಯೆಮೆನ್ ನ ಹೌತಿ ಬಂಡುಕೋರರು ಪನಾಮಾದ ತೈಲ ಟ್ಯಾಂಕರ್ ನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಇದೇ ವೇಳೆ ಸೌದಿಯ ಟ್ಯಾಂಕರ್ ಶಿಪ್ ನ್ನೂ ಸಹ ಈ ಬಂಡುಕೋರರ ಗುಂಪು ಟಾರ್ಗೆಟ್ ಮಾಡಿತ್ತು.

ಇದು ಇರಾನ್ ಬೆಂಬಲಿತ ಬಂಡುಕೋರರ ಕಾರ್ಯಾಚರಣೆಯಲ್ಲಿ ಇತ್ತೀಚಿನ ದಾಳಿ ಎನ್ನಲಾಗಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿದಂತೆ ಕೆಂಪು ಸಮುದ್ರದ ಮೂಲಕ ಹಾದುಹೋಗುವ $1 ಟ್ರಿಲಿಯನ್ ಸರಕುಗಳನ್ನು ಪ್ರತಿ ವರ್ಷ ಅಡ್ಡಿಪಡಿಸಿದೆ ಮತ್ತು ಸಂಘರ್ಷ ಪೀಡಿತ ಸುಡಾನ್ ಮತ್ತು ಯೆಮೆನ್ ಗೆ ಕೆಲವು ಸಹಾಯ ಸಾಗಣೆಯನ್ನು ನಿಲ್ಲಿಸಿದೆ.

ತೈಲ ಟ್ಯಾಂಕರ್‌ಗಳ ಮೇಲಿನ ಹೊಸ ದಾಳಿಗಳು ಹೌತಿಗಳಿಂದ ಈ ಹಿಂದೆ ಹೊಡೆದ ಇನ್ನೂ ಉರಿಯುತ್ತಿರುವ ಸೌನಿಯನ್ ತೈಲ ಟ್ಯಾಂಕರ್ ನ್ನು ರಕ್ಷಿಸುವ ಪ್ರಯತ್ನಗಳ ನಡುವೆ ವರದಿಯಾಗಿದೆ. ಈ ಹಿಂದೆ ನಡೆದಿದ್ದ ದಾಳಿಯಿಂದ 1 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲದ ಸರಕುಗಳಿಂದ ಉಂಟಾಗುವ ಸಂಭಾವ್ಯ ಪರಿಸರ ವಿಪತ್ತನ್ನು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ.

ಸೋಮವಾರದ ಮೊದಲ ದಾಳಿಯಲ್ಲಿ, ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ತೈಲ ಟ್ಯಾಂಕರ್ ಬ್ಲೂ ಲಗೂನ್ I ಅನ್ನು ಹೊಡೆಯಲಾಗಿದ್ದು, ಮೂರನೆಯದು ಹಡಗಿನ ಬಳಿ ಸ್ಫೋಟಿಸಿತು ಎಂದು ಯುಎಸ್ ನೌಕಾಪಡೆಯ ಬಹುರಾಷ್ಟ್ರೀಯ ಜಂಟಿ ಸಾಗರ ಮಾಹಿತಿ ಕೇಂದ್ರ ತಿಳಿಸಿದೆ.

This photo released by the European Union's Operation Aspides naval force shows the Greek-flagged oil tanker Sounion burning in the Red Sea following a series of attacks by Yemen's Houthi rebels on Monday
ಹೌತಿ ಬಂಡುಕೋರರ ದಾಳಿ?: 22 ಭಾರತೀಯರಿದ್ದ ವ್ಯಾಪಾರಿ ಹಡಗಿಗೆ ಬಡಿದ ಕ್ಷಿಪಣಿ, ನೌಕಾಪಡೆ ದೌಡು

"ಹಡಗಿನಲ್ಲಿರುವ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ (ಯಾವುದೇ ಗಾಯದ ವರದಿಯಿಲ್ಲ)" ಎಂದು ಕೇಂದ್ರ ಹೇಳಿದೆ. "ಹಡಗಿಗೆ ಕನಿಷ್ಠ ಹಾನಿಯಾಗಿದೆ ಆದರೆ ಸಹಾಯದ ಅಗತ್ಯವಿಲ್ಲ" ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com