
ಅಲೆನ್ಬಿ ಕ್ರಾಸಿಂಗ್ (ವೆಸ್ಟ್ ಬ್ಯಾಂಕ್): ವೆಸ್ಟ್ ಬ್ಯಾಂಕ್ ಮತ್ತು ಜೋರ್ಡಾನ್ ನಡುವಿನ ಗಡಿ ಕ್ರಾಸಿಂಗ್‌ನಲ್ಲಿ ಇಂದು ಮೂವರು ಇಸ್ರೇಲಿ ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಗುಂಡಿನ ದಾಳಿಯು ಗಾಜಾದಲ್ಲಿ 11 ತಿಂಗಳ ಸುದೀರ್ಘ ಯುದ್ಧಕ್ಕೆ ಸಂಬಂಧಿಸಿದೆ ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂದೂಕುಧಾರಿಯೊಬ್ಬ ಜೋರ್ಡಾನ್ ಕಡೆಯಿಂದ ಟ್ರಕ್‌ನಲ್ಲಿ ಅಲೆನ್‌ಬಿ ಸೇತುವೆ ಬಳಿ ಸಮೀಪಿಸುತ್ತಿದ್ದಂತೆ ಇಸ್ರೇಲಿ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಮೂವರು ಇಸ್ರೇಲಿ ನಾಗರೀಕರು ಮೃತಪಟ್ಟಿದ್ದಾರೆ. ಇನ್ನು ಇಸ್ರೇಲಿ ಪಡೆ ದಾಳಿಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಸೇನೆ ಹೇಳಿದೆ. ಮೃತರೆಲ್ಲರೂ 50ರ ಹರೆಯದ ಪುರುಷರು ಎಂದು ಇಸ್ರೇಲ್‌ನ ಮ್ಯಾಗೆನ್ ಡೇವಿಡ್ ಆಡಮ್ ರಕ್ಷಣಾ ಸೇವೆ ತಿಳಿಸಿದೆ.
ಜೋರ್ಡಾನ್‌ನ ಸರ್ಕಾರಿ ಸ್ವಾಮ್ಯದ ಪೆಟ್ರಾ ಸುದ್ದಿ ಸಂಸ್ಥೆ ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ಪಾಶ್ಚಿಮಾತ್ಯ ಮಿತ್ರರಾಷ್ಟ್ರವಾದ ಅರಬ್ ದೇಶವು 1994ರಲ್ಲಿ ಇಸ್ರೇಲ್ನೊಂದಿಗೆ ಶಾಂತಿಯನ್ನು ಮಾಡಿಕೊಂಡಿತು. ಆದರೆ ಪ್ಯಾಲೆಸ್ಟೀನಿಯನ್ನರು ಇದನ್ನು ಬಲವಾಗಿ ಟೀಕಿಸುತ್ತಾರೆ. ಜೋರ್ಡಾನ್ ನಲ್ಲಿ ಹೆಚ್ಚಿನ ಸಂಖ್ಯೆಯ ಪ್ಯಾಲೇಸ್ಟಿನಿಯರಿದ್ದಾರೆ. ಗಾಜಾ ಯುದ್ಧದ ಬಗ್ಗೆ ಇಸ್ರೇಲ್ ವಿರುದ್ಧ ಸಾಮೂಹಿಕ ಪ್ರತಿಭಟನೆಗಳು ನಡೆದಿವೆ.
ಜೋರ್ಡಾನ್ ನದಿಯ ಮೇಲಿರುವ ಅಲೆನ್ಬಿ ಕ್ರಾಸಿಂಗ್ ಅನ್ನು ಕಿಂಗ್ ಹುಸೇನ್ ಸೇತುವೆ ಎಂದೂ ಕರೆಯುತ್ತಾರೆ. ಇದನ್ನು ಹೆಚ್ಚಾಗಿ ಇಸ್ರೇಲಿಗಳು, ಪ್ಯಾಲೆಸ್ಟೀನಿಯಾರು ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು ಬಳಸುತ್ತಾರೆ. ಮುಂದಿನ ಸೂಚನೆ ಬರುವವರೆಗೂ ಕ್ರಾಸಿಂಗ್ ಅನ್ನು ಮುಚ್ಚಲಾಗಿದೆ ಎಂದು ಇಸ್ರೇಲಿ ಮತ್ತು ಜೋರ್ಡಾನ್ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 7ರಂದು ಗಾಜಾದಿಂದ ಹಮಾಸ್ ದಾಳಿಯನ್ನು ಪ್ರಾರಂಭಿಸಿದ ನಂತರ ಇಸ್ರೇಲಿ ಆಕ್ರಮಿತ ವೆಸ್ಟ್ ಬ್ಯಾಂಕ್ ಮೇಲೆ ದಾಳಿ ನಡೆಸಿದೆ.
ಏತನ್ಮಧ್ಯೆ, ಭಾನುವಾರ ಬೆಳಿಗ್ಗೆ ಗಾಜಾದಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಮತ್ತು ಹಿರಿಯ ನಾಗರಿಕ ರಕ್ಷಣಾ ಅಧಿಕಾರಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ನಗರ ಜಬಲಿಯಾ ನಿರಾಶ್ರಿತರ ಶಿಬಿರದಲ್ಲಿರುವ ಉತ್ತರ ಗಾಜಾದ ಉಪ ನಿರ್ದೇಶಕ ಮೊಹಮ್ಮದ್ ಮೊರ್ಸಿ ಅವರ ಮನೆಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿದೆ ಎಂದು ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.
Advertisement