ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ Donald Trump ಹತ್ಯೆಗೆ ಯತ್ನ; ಅಪಾಯದಿಂದ ಪಾರು: FBI

ಒಂಬತ್ತು ವಾರಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಮೇಲೆ ದಾಳಿ ನಡೆದಿತ್ತು. ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿ ಅವರು ಬಚಾವಾಗಿದ್ದು, ಸುರಕ್ಷಿತವಾಗಿ ಆರೋಗ್ಯವಾಗಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
Published on

ಫ್ಲೋರಿಡಾ: ಅಮೆರಿಕ ಮಾಜಿ ಅಧ್ಯಕ್ಷ, ಈ ಬಾರಿಯ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಅವರ ಗಾಲ್ಫ್ ಕ್ಲಬ್‌ನಲ್ಲಿ ನಿನ್ನೆ ಭಾನುವಾರ ಮತ್ತೆ ಹತ್ಯೆ ದಾಳಿಗೆ ಒಳಗಾಗಿದ್ದಾರೆ ಎಂದು ಎಫ್‌ಬಿಐ ತಿಳಿಸಿದೆ.

ಒಂಬತ್ತು ವಾರಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಮೇಲೆ ದಾಳಿ ನಡೆದಿತ್ತು. ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿ ಅವರು ಬಚಾವಾಗಿದ್ದು, ಸುರಕ್ಷಿತವಾಗಿ ಆರೋಗ್ಯವಾಗಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಗಾಲ್ಫ್ ನಲ್ಲಿ ಆಡುತ್ತಿದ್ದ ಸ್ಥಳದಿಂದ ಸರಿಸುಮಾರು 400 ಗಜಗಳಷ್ಟು ದೂರದಲ್ಲಿ ಪೊದೆಯಲ್ಲಿ ಎಕೆ ಶೈಲಿಯ ರೈಫಲ್ ಇರುವುದನ್ನು ಅಮೆರಿಕದ ಸೀಕ್ರೇಟ್ ಸರ್ವಿಸ್ ಪತ್ತೆಹಚ್ಚಿದೆ. ಏಜೆಂಟ್ ಗುಂಡು ಹಾರಿಸಿದಾಗ ಬಂದೂಕುಧಾರಿ ರೈಫಲ್ ಅನ್ನು ಕೆಳಗಿಟ್ಟು ಎಸ್‌ಯುವಿಯಲ್ಲಿ ಪರಾರಿಯಾಗಿದ್ದಾನೆ, ಎರಡು ಬ್ಯಾಕ್‌ಪ್ಯಾಕ್‌ಗಳು, ಗುರಿಗಾಗಿ ಬಳಸಲಾದ ಸ್ಕೋಪ್ ಮತ್ತು ಗೋಪ್ರೊ ಕ್ಯಾಮೆರಾದೊಂದಿಗೆ ಬಂದೂಕನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.

ಕಳೆದ ಜುಲೈ 13 ರಂದು, ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಚುನಾವಣಾ ರ್ಯಾಲಿ ವೇಳೆ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಲಾಗಿತ್ತು, ಅವರ ಅವರ ಕಿವಿ ಪಕ್ಕದಲ್ಲಿ ಹಾದುಹೋಗಿ ರಕ್ತ ಸುರಿಯಿತು.

ಈ ಘಟನೆ ನಡೆದ ಸ್ವಲ್ಪ ದಿನಕ್ಕೆ ಡೆಮಾಕ್ರಟಿಕ್ ಪಕ್ಷದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದು ಕಮಲಾ ಹ್ಯಾರಿಸ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com