ಬೈರುತ್: ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ನಿನ್ನೆ ಶುಕ್ರವಾರ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಲೆಬನಾನಿನ ಉಗ್ರಗಾಮಿ ಗುಂಪಿನ ಉನ್ನತ ಮಿಲಿಟರಿ ಅಧಿಕಾರಿಗಳಲ್ಲಿ ಒಬ್ಬನಾಗಿದ್ದ, ಅನೇಕ ವರ್ಷಗಳಿಂದ ಅಮೆರಿಕದ ಮೋಸ್ಟ್ ವಾಂಟೆಂಡ್ ಉಗ್ರಗಾಮಿ ಪಟ್ಟಿಯಲ್ಲಿದ್ದ.
61 ವರ್ಷದ ಇಬ್ರಾಹಿಂ ಅಕಿಲ್, ಹಿಜ್ಬುಲ್ಲಾದ ಎರಡನೇ ಉನ್ನತ ಕಮಾಂಡರ್ ಆಗಿದ್ದು, ದಕ್ಷಿಣ ಉಪನಗರ ಬೈರುತ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾಗಿರುವುದು ಗುಂಪಿನ ಕಮಾಂಡ್ ರಚನೆಗೆ ತೀವ್ರ ಹೊಡೆತ ಬಿದ್ದಿದೆ.
ಈ ವಾರದ ಆರಂಭದಲ್ಲಿ ಸಾವಿರಾರು ಪೇಜರ್‌ಗಳು ಏಕಕಾಲದಲ್ಲಿ ಸ್ಫೋಟಗೊಂಡಾಗ ಹಿಜ್ಬುಲ್ಲಾ ಸಂವಹನಗಳನ್ನು ಗುರಿಯಾಗಿಸಿಕೊಂಡು ಮಾಡಿದ್ದ ಇಸ್ರೇಲಿ ದಾಳಿಯಿಂದ ಕನಿಷ್ಠ 12 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಅಖಿಲ್ 2008 ರಿಂದ ಹಿಜ್ಬುಲ್ಲಾದ ಅತ್ಯುನ್ನತ ಸೇನಾ ಸಂಸ್ಥೆಯಾದ ಜಿಹಾದ್ ಕೌನ್ಸಿಲ್‌ನ ಸದಸ್ಯನಾಗಿದ್ದನು. ಗಣ್ಯ ರಾದ್ವಾನ್ ಪಡೆಗಳ ಮುಖ್ಯಸ್ಥನು ಕೂಡ ಆಗಿದ್ದನು. ಬೈರುತ್‌ನ ದಕ್ಷಿಣ ದಹಿಯಾ ಜಿಲ್ಲೆಯ ಮೇಲೆ ನಿನ್ನೆ ನಡೆದ ದಾಳಿಯಲ್ಲಿ ಅಕಿಲ್ ಮತ್ತು ಇತರ 10 ಹಿಜ್ಬುಲ್ಲಾ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿದೆ.
ಲೆಬನಾನ್‌ನ ಪೂರ್ವದಲ್ಲಿರುವ ಬಾಲ್ಬೆಕ್‌ನಲ್ಲಿ ಜನಿಸಿದ್ದ ಈತ 1980 ರ ದಶಕದಲ್ಲಿ ಅದರ ಆರಂಭಿಕ ದಿನಗಳಲ್ಲಿ ಹಿಜ್ಬುಲ್ಲಾ ಸೇರಿದ್ದನು.
Advertisement