ಬೈರುತ್‌ ಮೇಲೆ ಇಸ್ರೇಲ್ ವೈಮಾನಿಕ ದಾಳಿ; ಹೆಜ್ಬುಲ್ಲಾ ಕಮಾಂಡರ್ ಸೇರಿ ಕನಿಷ್ಠ 31 ಮಂದಿ ಸಾವು

ಬೈರುತ್‌ನಲ್ಲಿರುವ ಹೆಜ್ಬುಲ್ಲಾದ ಭದ್ರಕೋಟೆಯ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ಉಗ್ರ ಸಂಘಟನೆಯ ಕಮಾಂಡರ್ ಸೇರಿದಂತೆ 31 ಜನ ಸಾವನ್ನಪ್ಪಿದ್ದಾರೆ.
ಬೈರುತ್‌ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಬೈರುತ್‌ ಮೇಲೆ ಇಸ್ರೇಲ್ ವೈಮಾನಿಕ ದಾಳಿ
Updated on

ಬೈರುತ್: ಲೆಬನಾನ್‌ನ ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂರು ಮಕ್ಕಳು ಮತ್ತು ಏಳು ಮಹಿಳೆಯರು ಸೇರಿದಂತೆ ಕನಿಷ್ಠ 31 ಜನ ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ

ಬೈರುತ್‌ನಲ್ಲಿರುವ ಹೆಜ್ಬುಲ್ಲಾದ ಭದ್ರಕೋಟೆಯ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ಉಗ್ರ ಸಂಘಟನೆಯ ಕಮಾಂಡರ್ ಸೇರಿದಂತೆ 31 ಜನ ಸಾವನ್ನಪ್ಪಿದ್ದಾರೆ ಮತ್ತು ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಇಸ್ರೇಲ್ ಮಕ್ಕಳ ವಿರುದ್ಧ "ನಾಚಿಕೆಯಿಲ್ಲದೇ ಅಪರಾಧಗಳನ್ನು" ಮಾಡುತ್ತಿದೆ. ಅವರು ಹೋರಾಟಗಾರರಲ್ಲ ಎಂದು ಕಿಡಿ ಕಾರಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ದಕ್ಷಿಣ ಬೈರುತ್‌ನಲ್ಲಿ ಉಗ್ರಗಾಮಿ ಸಂಘಟನೆಯ ಭದ್ರಕೋಟೆಯ ಮೇಲೆ ನಡೆದ ದಾಳಿಯಲ್ಲಿ ಹೆಜ್ಬುಲ್ಲಾದ ರಾಡ್ವಾನ್ ಘಟಕದ ಮುಖ್ಯಸ್ಥ ಇಬ್ರಾಹಿಂ ಅಖಿಲ್‌ ಮೃತಪಟ್ಟಿದ್ದಾರೆ ಎಂದು ಹೆಜ್ಬುಲ್ಲಾದ ನಿಕಟ ಮೂಲಗಳು ತಿಳಿಸಿವೆ.

ಬೈರುತ್‌ನ ದಕ್ಷಿಣ ದಹಿಯಾ ಜಿಲ್ಲೆಯ ಮೇಲೆ ನಡೆದ ದಾಳಿಯಲ್ಲಿ ಹೆಜ್ಬುಲ್ಲಾದ ರಾಡ್ವಾನ್ ಘಟಕದ ಕಮಾಂಡರ್ ಇಬ್ರಾಹಿಂ ಅಕಿಲ್ ಮತ್ತು ಇತರ 10 ಹೆಜ್ಬುಲ್ಲಾ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲಿ ಮಿಲಿಟರಿಯ ಮುಖ್ಯ ವಕ್ತಾರ, ರಿಯರ್ ಅಡ್ಮ್. ಡೇನಿಯಲ್ ಹಗರಿ ಅವರು ಹೇಳಿದ್ದಾರೆ.

"ನಮ್ಮ ನಾಗರಿಕರನ್ನು ರಕ್ಷಿಸಲು ನಾವು ನಮ್ಮ ಶತ್ರುಗಳ ಮೇಲಿನ ದಾಳಿಯನ್ನು ಮುಂದುವರಿಸುತ್ತೇವೆ. ದಹಿಯಾದಲ್ಲಿ ಮತ್ತು ಬೈರುತ್‌ನಲ್ಲಿಯೂ ದಾಳಿ ನಡೆಯಲಿದೆ" ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ತಿಳಿಸಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭದ ನಂತರ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ನಡೆದ ಮೂರನೇ ವೈಮಾನಿಕ ದಾಳಿ ಇದಾಗಿದೆ. ಲೆಬನಾನ್‌ನ ಹೆಜ್ಬುಲ್ಲಾ ಉಗ್ರ ಸಂಘಟನೆ ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ಬೆದರಿಕೆ ಹಾಕಿದ ಬೆನ್ನಲ್ಲೇ ಇಸ್ರೇಲ್ ಸೇನೆ ತನ್ನ ವಾಯು ದಾಳಿ ಆರಂಭ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com