ಐತಿಹಾಸಿಕ ಎರಡನೇ ಸುತ್ತಿನ ಮತ ಎಣಿಕೆ: ಶ್ರೀಲಂಕಾದ ನೂತನ ಅಧ್ಯಕ್ಷರಾಗುವತ್ತ ಅನುರಾ ಡಿಸಾನಾಯಕೆ

ತಜ್ಞರ ಪ್ರಕಾರ, ಮಾರ್ಕ್ಸ್‌ವಾದಿ ಜೆವಿಪಿಯ ನಾಯಕ ದಿಸ್ಸಾನಾಯಕೆ, ರಾಷ್ಟ್ರೀಯ ಜನತಾ ಶಕ್ತಿ (NPP) 7 ಮಿಲಿಯನ್‌ಗಿಂತಲೂ ಹೆಚ್ಚು ಮತಗಳನ್ನು ಗಳಿಸುವ ಸಾಧ್ಯತೆಯಿದ್ದು, ಶೇಕಡಾ 50ಕ್ಕಿಂತ ಹೆಚ್ಚು ಮತಗಳನ್ನು ದಾಟುತ್ತಾರೆ.
ಅನುರಾ ಡಿಸಾನಾಯಕೆ
ಅನುರಾ ಡಿಸಾನಾಯಕೆ
Updated on

ಕೊಲಂಬೊ: ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳು ಅಗತ್ಯವಿರುವ ಶೇಕಡಾ 50ರಷ್ಟು ಬಹುಮತವನ್ನು ಪಡೆಯಲು ಸಾಧ್ಯವಾಗದ ಕಾರಣ ಎರಡನೇ ಸುತ್ತಿನ ಮತ ಎಣಿಕೆ ನಡೆದು ಶ್ರೀಲಂಕಾ ತನ್ನ ಹೊಸ ಅಧ್ಯಕ್ಷರನ್ನು ಪಡೆಯುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

ಮತ ಎಣಿಕೆ ಮುಂದುವರೆದಂತೆ, ಅನುರ ಕುಮಾರ ಡಿಸ್ಸಾನಾಯಕ ಅವರು 5.6 ಮಿಲಿಯನ್ ಮತಗಳನ್ನು ಪಡೆದು ಶೇಕಡಾ 43.93 ಮತಗಳನ್ನು ಗಳಿಸಿ ಮುನ್ನಡೆಯಲ್ಲಿದ್ದಾರೆ. ಸಜಿತ್ ಪ್ರೇಮದಾಸ ಅವರು 4.3 ಮಿಲಿಯನ್ ಮತಗಳನ್ನು ಪಡೆದು ಶೇಕಡಾ 33. 98 ಮತಗಳನ್ನು ಗಳಿಸಿದ್ದಾರೆ.

ತಜ್ಞರ ಪ್ರಕಾರ, ಮಾರ್ಕ್ಸ್‌ವಾದಿ ಜೆವಿಪಿಯ ನಾಯಕ ದಿಸ್ಸಾನಾಯಕೆ, ರಾಷ್ಟ್ರೀಯ ಜನತಾ ಶಕ್ತಿ (NPP) 7 ಮಿಲಿಯನ್‌ಗಿಂತಲೂ ಹೆಚ್ಚು ಮತಗಳನ್ನು ಗಳಿಸುವ ಸಾಧ್ಯತೆಯಿದ್ದು, ಶೇಕಡಾ 50ಕ್ಕಿಂತ ಹೆಚ್ಚು ಮತಗಳನ್ನು ದಾಟುತ್ತಾರೆ.

ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆಗೆ ಮತ ಹಾಕಿದವರು ಎರಡನೇ ಆಯ್ಕೆಯಾಗಿ ಪ್ರೇಮದಾಸ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇರುವುದರಿಂದ ಎರಡನೇ ಎಣಿಕೆ ಪ್ರೇಮದಾಸ ಅವರ ಪರವಾಗಿರಬಹುದು ಎಂದು ತಜ್ಞರು ಈ ಹಿಂದೆ ಸೂಚಿಸಿದ್ದರು.

ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ನಂತರ 2022 ರಲ್ಲಿ ಮಾಜಿ ನಾಯಕ ಗೋಟಾಬಯ ರಾಜಪಕ್ಸೆ ಅವರನ್ನು ಹೊರಹಾಕಲು ಸಾಮೂಹಿಕ ಪ್ರತಿಭಟನೆಗಳು ನಡೆದ ನಂತರ ನಿನ್ನೆ ನಡೆದ ಚುನಾವಣೆ ಶ್ರೀಲಂಕಾಕ್ಕೆ ಮಹತ್ವದ್ದಾಗಿದೆ.

ಮೊದಲ ಸುತ್ತಿನ ಮತ ಎಣಿಕೆಯ ನಂತರ ಚುನಾವಣಾ ಆಯೋಗದ ಅಧ್ಯಕ್ಷ ಆರ್‌ಎಂಎಎಲ್ ರಥನಾಯಕ, ರಾಷ್ಟ್ರಪತಿ ಚುನಾವಣೆಯಲ್ಲಿ ಮಾರ್ಕ್ಸ್‌ವಾದಿ ಒಲವಿರುವ ಅನುರ ಕುಮಾರ ಡಿಸ್ಸಾನಾಯಕ ಮತ್ತು ವಿಪಕ್ಷ ನಾಯಕ ಸಜಿತ್ ಪ್ರೇಮದಾಸ ಗರಿಷ್ಠ ಮತ ಗಳಿಸಿದ್ದಾರೆ, ಆದರೆ, ಇವರಿಬ್ಬರೂ ಶೇ.50ಕ್ಕಿಂತ ಹೆಚ್ಚು ಮತ ಪಡೆದಿಲ್ಲ ಎಂದರು.

ಇದು ಎರಡನೇ ಪ್ರಾಶಸ್ತ್ಯದ ಮತಗಳ ಮತ್ತೊಂದು ಸುತ್ತಿನ ಎಣಿಕೆಗೆ ಕಾರಣವಾಯಿತು, ಇದು ಇಬ್ಬರು ಅಭ್ಯರ್ಥಿಗಳು ಗಳಿಸಿದ ಆರಂಭಿಕ ಮತಗಳಿಗೆ ಸೇರಿಸಲಾಗುವುದು. ಸಂಚಿತ ಮತಗಳು ಮತ್ತು ಪ್ರಾಶಸ್ತ್ಯದ ಮತಗಳ ಎಣಿಕೆಯ ನಂತರ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಶ್ರೀಲಂಕಾದಲ್ಲಿ, ಮತದಾರರು ಆದ್ಯತೆಯ ಕ್ರಮದಲ್ಲಿ ಮೂರು ಅಭ್ಯರ್ಥಿಗಳಿಗೆ ಶ್ರೇಯಾಂಕ ನೀಡುವ ಮೂಲಕ ಒಬ್ಬ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಅಭ್ಯರ್ಥಿಯು ಸಂಪೂರ್ಣ ಬಹುಮತವನ್ನು ಪಡೆದರೆ, ಅವರನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಇಲ್ಲದಿದ್ದರೆ, ಎರಡನೇ ಮತ್ತು ಮೂರನೇ ಆಯ್ಕೆಯ ಮತಗಳನ್ನು ಗಣನೆಗೆ ತೆಗೆದುಕೊಂಡು ಎರಡನೇ ಸುತ್ತಿನ ಎಣಿಕೆ ಪ್ರಾರಂಭವಾಗುತ್ತದೆ.

1982 ರಿಂದ ಶ್ರೀಲಂಕಾದಲ್ಲಿ ನಡೆದ ಎಲ್ಲಾ ಎಂಟು ಅಧ್ಯಕ್ಷೀಯ ಚುನಾವಣೆಗಳಲ್ಲಿ ವಿಜೇತರು ಮೊದಲ ಸುತ್ತಿನ ಎಣಿಕೆಯಲ್ಲಿ ಆಯ್ಕೆಯಾಗಿದ್ದರು.

ಎಲ್ಲಾ 160 ಮತಗಟ್ಟೆಗಳಲ್ಲಿ ನಡೆದ ಮೊದಲ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ 22 ಜಿಲ್ಲೆಗಳ ಪೈಕಿ 15ರಲ್ಲಿ ದಿಸ್ಸಾನಾಯಕ ಗೆಲುವು ಸಾಧಿಸಿದ್ದಾರೆ. ಡಿಸಾನಾಯಕೆ ಶೇಕಡಾ 42.31 ಮತಗಳನ್ನು ಪಡೆದರು ಮತ್ತು 1.3 ಮಿಲಿಯನ್ ಮತಗಳಿಂದ ಮುನ್ನಡೆ ಸಾಧಿಸಿದರು, ಆದರೆ ಪ್ರೇಮದಾಸ ಅವರು ಮೊದಲ ಸುತ್ತಿನ ಮತ ಎಣಿಕೆಯ ನಂತರ ಶೇಕಡಾ 32.76 ಪಡೆದರು. 2022 ರ ಆರ್ಥಿಕ ಕುಸಿತದ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡ ಮತ್ತು IMF ಭಾಗವಾಗಿ ಕಠಿಣ ಕಠಿಣ ಕ್ರಮಗಳನ್ನು ವಿಧಿಸಿದ ವಿಕ್ರಮಸಿಂಘೆ, ಶೇಕಡಾ 17.27 ಮತ ಹಂಚಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಅನುರಾಧಪುರ, ಪೊಲೊನ್ನರುವಾ, ಕುರುಣೇಗಾಲ, ಪುತ್ತಲಂ, ಗಂಪಹಾ, ಕೆಗಲ್ಲೆ, ಕ್ಯಾಂಡಿ, ಮಾತಲೆ, ಕೊಲಂಬೊ, ರತ್ನಪುರ, ಕಲುತಾರ, ಗಾಲೆ, ಮಾತಾರಾ, ಹಂಬತೋಟ ಮತ್ತು ಮೊನರಾಗಲಾ ಜಿಲ್ಲೆಗಳಲ್ಲಿ ಡಿಸಾನಾಯಕೆ ಅಗ್ರಸ್ಥಾನ ಪಡೆದರು.

ನವೆಂಬರ್ 2019 ರಲ್ಲಿ ನಡೆದ ಹಿಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ದಾಖಲಾದ ಶೇಕಡಾ 83ಕ್ಕಿಂತ ಕಡಿಮೆ ಮತದಾನದ ಪ್ರಮಾಣ ಶೇಕಡಾ 75 ಆಗಿತ್ತು.

ಶ್ರೀಲಂಕಾದ ನಡೆಯುತ್ತಿರುವ ಬಿಕ್ಕಟ್ಟು ದ್ವೀಪದ "ಭ್ರಷ್ಟ" ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸುವ ತನ್ನ ಪ್ರತಿಜ್ಞೆಯ ಆಧಾರದ ಮೇಲೆ 55 ವರ್ಷದ ಡಿಸ್ಸಾನಾಯಕೆಗೆ ಒಂದು ಅವಕಾಶವನ್ನು ಒದಗಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com