ಕೀವ್: ರಷ್ಯಾ ದಾಳಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಯುಕ್ರೇನ್ 2025 ನೇ ಸಾಲಿನಲ್ಲಿ ತನ್ನ ಬಜೆಟ್ ನ ಶೇ.60 ರಷ್ಟನ್ನು ರಕ್ಷಣಾ ಹಾಗೂ ಭದ್ರತಾ ವಲಯಕ್ಕೆ ಮೀಸಲಿಡಲು ನಿರ್ಧರಿಸಿದೆ.
ಬಜೆಟ್ ನ ಕರಡಿನ ಆಧಾರದಲ್ಲಿ ಈ ಮಾಹಿತಿ ಲಭ್ಯವಾಗಿದೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವುದರ ಪರಿಣಾಮ ಕಳೆದ ಎರಡುವರೆ ವರ್ಷಗಳಿಂದ ಯುಕ್ರೇನ್ ನ ಆರ್ಥಿಕತೆ ನೆಲಕಚ್ಚಿದೆ. ರಷ್ಯಾ-ಯುಕ್ರೇನ್ ಯುದ್ಧ ಹತ್ತಾರು ಶತಕೋಟಿ ಡಾಲರ್‌ಗಳ ವಿನಾಶಕ್ಕೆ ಕಾರಣವಾಗಿದೆ. ರಾಜ್ಯದ ಹಣಕಾಸು ಪರಿಸ್ಥಿತಿ ನೆಲಕಚ್ಚಿದ್ದು, ಯುಕ್ರೇನ್ ಗೆ ಪಾಶ್ಚಿಮಾತ್ಯ ಬೆಂಬಲ ಪಡೆಯುವುದು ಅನಿವಾರ್ಯವಾಗುವಂತೆ ಮಾಡಿದೆ.
ಅಲ್ಲಿನ ಹಣಕಾಸು ಸಚಿವಾಲಯ ಪ್ರಸ್ತುತಪಡಿಸಿದ ಕರಡು ಯೋಜನೆಯಲ್ಲಿ, ಉಕ್ರೇನ್ 2025 ರಲ್ಲಿ "ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆ" ಗಾಗಿ 2.22 ಟ್ರಿಲಿಯನ್ ಹ್ರಿವ್ನಿಯಾವನ್ನು ($54 ಶತಕೋಟಿ) ಖರ್ಚು ಮಾಡುವುದಾಗಿ ಹೇಳಿದೆ.
ಇದು ಉಕ್ರೇನ್‌ನ GDPಯ ಸುಮಾರು 26 ಪ್ರತಿಶತವನ್ನು ಪ್ರತಿನಿಧಿಸುತ್ತದೆ ಮತ್ತು 3.64 ಟ್ರಿಲಿಯನ್ ಹ್ರಿವ್ನಿಯಾದಲ್ಲಿ ಯೋಜಿಸಲಾದ ಸರ್ಕಾರದ ಒಟ್ಟಾರೆ ವೆಚ್ಚಗಳ 61 ಪ್ರತಿಶತವನ್ನು ಪ್ರತಿನಿಧಿಸುತ್ತದೆ.
ರಷ್ಯಾ 10.8 ಟ್ರಿಲಿಯನ್ ರೂಬಲ್ಸ್ಗಳನ್ನು ($ 115 ಶತಕೋಟಿ) ರಕ್ಷಣೆಗಾಗಿ ಮೀಸಲಿಟ್ಟಿದ್ದು, ಇದು ಆ ರಾಷ್ಟ್ರದ ಬಜೆಟ್ ನ ಶೇ.30 ರಷ್ಟು ಪ್ರತಿಶತ ವೆಚ್ಚವಾಗಿದೆ.
Advertisement