ನ್ಯೂಯಾರ್ಕ್: ಕಾರ್ಯಕ್ರಮವೊಂದರಲ್ಲಿ ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಎಲಾನ್ ಮಸ್ಕ್ ಒಟ್ಟಿಗೆ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಾದ್ಯಂತ ಊಹಾಪೋಹಗಳನ್ನು ಉಂಟುಮಾಡಿದೆ.
ಎಲಾನ್ ಮಸ್ಕ್- ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಡೇಟಿಂಗ್ ನಲ್ಲಿ ತೊಡಗಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ನ್ಯೂ ಯಾರ್ಕ್ ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಈ ಮಸ್ಕ್ ಹಾಗೂ ಮೆಲೋನಿ ಒಟ್ಟಿಗೆ ಇದ್ದದ್ದು ಕ್ಯಾಮರಾಗಳ ಕಣ್ಣಿಗೆ ಬಿದ್ದಿದೆ.
ಸಾಮಾಜಿಕ ಜಾಲಾತಾಣಗಳಲ್ಲಿ ಈ ಇಬ್ಬರು ಜೊತೆಗಿರುವ ಫೋಟೊಗಳಿಗೆ ತರಹೆವಾರಿ ಕಾಮೆಂಟ್ ಗಳು ಬರುತ್ತಿದ್ದು, ತಮ್ಮ ಪ್ರತಿಕ್ರಿಯೆ ಮೂಲಕ ಎಲಾನ್ ಮಸ್ಕ್ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ. ಒಂದೇ ಶಬ್ದದಲ್ಲಿ ಡೇಟಿಂಗ್ ಊಹಾಪೋಹಗಳಿಗೆ ಮಸ್ಕ್ ಸ್ಪಷ್ಟನೆ ನೀಡಿದ್ದು, ನಾವು ಡೇಟಿಂಗ್ ನಲ್ಲಿ ತೊಡಗಿಲ್ಲ ಎಂದು ಹೇಳಿದ್ದಾರೆ.
ಜಾರ್ಜಿಯಾ ಮೆಲೋನಿಗೆ ಅಟ್ಲಾಂಟಿಕ್ ಕೌನ್ಸಿಲ್ ಗ್ಲೋಬಲ್ ಸಿಟಿಜನ್ ಪ್ರಶಸ್ತಿಯನ್ನು ನೀಡುತ್ತಾ, ಎಲೋನ್ ಮಸ್ಕ್ "ಬಾಹ್ಯ ಸೌಂದರ್ಯಕ್ಕಿಂತ, ಆಂತರ್ಯದಲ್ಲಿ ಹೆಚ್ಚು ಸುಂದರವಾಗಿರುವ" ಯಾರಿಗಾದರೂ ಪ್ರಶಸ್ತಿಯನ್ನು ನೀಡುವುದು ಗೌರವವಾಗಿದೆ ಎಂದು ಹೇಳಿದರು.
"ಆಕೆ ಅಧಿಕೃತ, ಪ್ರಾಮಾಣಿಕ ವ್ಯಕ್ತಿಯಾಗಿದ್ದು ರಾಜಕಾರಣಿಗಳ ವಿಷಯದಲ್ಲಿ ಇವು ಅಪರೂಪವಾಗಿದೆ" ಎಂದು ಅವರು ಹೇಳಿದರು. ಮೆಲೋನಿ ಅವರು ಮಸ್ಕ್ ತಮ್ಮ ಕುರಿತು ವ್ಯಕ್ತಪಡಿಸಿದ ಮೆಚ್ಚುಗೆಗೆ ಟ್ವಿಟರ್ ಖಾತೆ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮೆಲೋನಿ ಅವರು "ಯುರೋಪಿಯನ್ ಯೂನಿಯನ್ ನ ಬಲವಾದ ಬೆಂಬಲಕ್ಕಾಗಿ ಮತ್ತು ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಗಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ.
Advertisement