ಟೆಲ್ ಅವಿವ್: ಬೈರುತ್‌ನಲ್ಲಿ ನಿನ್ನೆ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ನಾಯಕ ಹಸನ್ ನಸ್ರಲ್ಲಾನನ್ನು ಕೊಂದಿರುವುದಾಗಿ ಇಸ್ರೇಲಿ ಮಿಲಿಟರಿ ಇಂದು ಶನಿವಾರ ಘೋಷಿಸಿಕೊಂಡಿದೆ. ಇದಕ್ಕೆ ಹಿಜ್ಬುಲ್ಲಾ ಸಂಘಟನೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಮೂರು ದಶಕಗಳಿಗೂ ಹೆಚ್ಚು ಕಾಲ ಹಿಜ್ಬುಲ್ಲಾವನ್ನು ಮುನ್ನಡೆಸಿರುವ ನಸ್ರಲ್ಲಾಹ್, ಬೈರುತ್‌ನ ದಕ್ಷಿಣದ ದಹೀಹ್‌ನಲ್ಲಿ ಆರು ವಸತಿ ಕಟ್ಟಡಗಳನ್ನು ನೆಲಸಮಗೊಳಿಸಿದ ಬೃಹತ್ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ನಿನ್ನೆಯ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ ಆರು ಜನರು ಮೃತಪಟ್ಟಿದ್ದರು. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷದಲ್ಲಿ ಲೆಬನಾನಿನ ರಾಜಧಾನಿಯಲ್ಲಿ ಸಂಭವಿಸಿದ ಅತಿ ದೊಡ್ಡ ಸ್ಫೋಟ ಇದಾಗಿದೆ.
ಇಸ್ರೇಲಿ ಸೇನೆಯು ಇದು ಹಿಜ್ಬುಲ್ಲಾ ಪ್ರಧಾನ ಕಛೇರಿಯ ಮೇಲೆ ನಿಖರವಾದ ವೈಮಾನಿಕ ದಾಳಿ ಎಂದು ಹೇಳಿಕೊಂಡಿದೆ. ಆರಂಭಿಕ ಸ್ಫೋಟದ ನಂತರ ಇಸ್ರೇಲ್ ದಕ್ಷಿಣದ ಉಪನಗರಗಳ ಇತರ ಪ್ರದೇಶಗಳ ಮೇಲೆ ಸರಣಿ ದಾಳಿಗಳನ್ನು ಪ್ರಾರಂಭಿಸಿತು.
ಹಿಜ್ಬುಲ್ಲಾದ ಸದರ್ನ್ ಫ್ರಂಟ್‌ನ ಕಮಾಂಡರ್ ಅಲಿ ಕರ್ಕಿ ಮತ್ತು ಹೆಚ್ಚುವರಿ ಹಿಜ್ಬುಲ್ಲಾ ಕಮಾಂಡರ್‌ಗಳು ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು ಇಸ್ರಾಟೆಲಿ ಮಿಲಿಟರಿ ತಿಳಿಸಿದೆ.
ಸೋಮವಾರದಿಂದ ಲೆಬನಾನ್‌ನಲ್ಲಿ ಇಸ್ರೇಲ್ ತನ್ನ ಬಾಂಬ್ ದಾಳಿಯನ್ನು ತೀವ್ರಗೊಳಿಸಿದ್ದರಿಂದ ಮಕ್ಕಳು ಸೇರಿದಂತೆ ಕನಿಷ್ಠ 720 ಜನರು ಮೃತಪಟ್ಟಿದ್ದಾರೆ.
ಲೆಬನಾನ್‌ನ ಸರ್ಕಾರಿ ರಾಷ್ಟ್ರೀಯ ಸುದ್ದಿ ಸಂಸ್ಥೆಯ ಪ್ರಕಾರ, ಲೆಬನಾನ್‌ನ ನಾಗರಿಕ ರಕ್ಷಣಾ ಕೇಂದ್ರಗಳು ಮತ್ತು ವೈದ್ಯಕೀಯ ಚಿಕಿತ್ಸಾಲಯದ ಮೇಲೆ ಇಸ್ರೇಲಿ ಸೇನೆಯ ದಾಳಿಯಲ್ಲಿ 11 ವೈದ್ಯರು, ದಾದಿಯರು ಮತ್ತು ಅರೆವೈದ್ಯರು ಕೊಲ್ಲಲ್ಪಟ್ಟು 10 ಮಂದಿ ಗಾಯಗೊಂಡಿದ್ದಾರೆ.
ಲೆಬನಾನ್‌ನೊಂದಿಗೆ ಉದ್ವಿಗ್ನತೆ ಹೆಚ್ಚಾದಂತೆ ಹೆಚ್ಚುವರಿ ಮೀಸಲು ಸೈನಿಕರನ್ನು ಸಜ್ಜುಗೊಳಿಸುತ್ತಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಸೇನಾಪಡೆಯು ಶನಿವಾರ ಬೆಳಿಗ್ಗೆ ಮೂರು ಬೆಟಾಲಿಯನ್ ಮೀಸಲು ಸೈನಿಕರನ್ನು ಸಕ್ರಿಯಗೊಳಿಸುತ್ತಿದೆ ಎಂದು ಹೇಳಿದೆ, ವಾರದ ಆರಂಭದಲ್ಲಿ ಎರಡು ಬ್ರಿಗೇಡ್‌ಗಳನ್ನು ಉತ್ತರ ಇಸ್ರೇಲ್‌ಗೆ ಸಂಭವನೀಯ ನೆಲದ ಆಕ್ರಮಣಕ್ಕಾಗಿ ತರಬೇತಿ ನೀಡಲು ಕಳುಹಿಸಲಾಗಿತ್ತು.
Advertisement