ಬೈರುತ್ : ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನ್ ಬೆಂಬಲಿತ ಲೆಬನಾನ್ ನ ಹಿಜ್ಬೊಲ್ಲಾ ಸಂಘಟನೆಯ ಉನ್ನತ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಹತ್ಯೆಯಾದ ಒಂದು ದಿನದ ನಂತರ ಇದೀಗ ಮತ್ತೋರ್ವ ಹಿಜ್ಬೊಲ್ಲಾ ನಾಯಕನ ಹತ್ಯೆಯಾಗಿದೆ.
ಇಸ್ರೇಲ್ ಮಿಲಿಟರಿ ಭಾನುವಾರ ನಿಖರವಾದ ವೈಮಾನಿಕ ದಾಳಿಯಲ್ಲಿ ಹಿರಿಯ ಹಿಜ್ಬೊಲ್ಲಾ ಅಧಿಕಾರಿ ನಬಿಲ್ ಕ್ವಾಕ್ ಅವರನ್ನು ಹತ್ಯೆ ಮಾಡಿರುವುದಾಗಿ ಹೇಳಿದೆ. ಕ್ವಾಕ್ ಹಿಜ್ಬೊಲ್ಲಾದ ಪ್ರಿವೆಂಟಿಟಿವ್ ಸೆಕ್ಯುರಿಟಿ ಯೂನಿಟ್‌ನ ಕಮಾಂಡರ್ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ IDF ಭಾನುವಾರ ಕಾಕ್ವ್ ಹತ್ಯೆ ಮಾಹಿತಿಯನ್ನು ಘೋಷಿಸಿದೆ. 1980ರಲ್ಲಿ ಹಿಜ್ಬುಲ್ಲಾ ಸಂಘಟನೆ ಸೇರಿದ್ದ ಕ್ವಾಕ್, ಅವರ ಕ್ಷೇತ್ರದಲ್ಲಿ ಪರಿಣತಿಯ ಪ್ರಮುಖ ಮೂಲವೆಂದು ಪರಿಗಣಿಸಲ್ಪಟ್ಟಿದ್ದರು. ಅವರು ಹಿಜ್ಬೊಲ್ಲಾದ ಹಿರಿಯ ಕಮಾಂಡರ್‌ಗಳಿಗೆ ಹತ್ತಿರವಾಗಿದ್ದರು. ಇಸ್ರೇಲ್ ಮತ್ತು ಅದರ ನಾಗರಿಕರ ವಿರುದ್ಧ ನೇರವಾಗಿ ಭಯೋತ್ಪಾದಕ ದಾಳಿಯಲ್ಲಿ ತೊಡಗಿದ್ದರು ಎಂದು IDF ಹೇಳಿದೆ.
ಹಿಜ್ಬುಲ್ಲಾ ಸಂಘಟನೆಯ ಕಮಾಂಡರ್‌ಗಳ ಹತ್ಯೆ ಮುಂದುವರೆಯುತ್ತದೆ ಮತ್ತು "ಇಸ್ರೇಲ್ ರಾಜ್ಯದ ನಾಗರಿಕರಿಗೆ ಬೆದರಿಕೆ ಹಾಕುವವರ ವಿರುದ್ಧ ಕಾರ್ಯ ನಿರ್ವಹಿಸುತ್ತದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
Advertisement