ಹಮಾಸ್ ಉಗ್ರ ನನ್ನನ್ನು ರೇಪ್ ಮಾಡದಿರಲು ಅದೊಂದೇ ಕಾರಣ: ಇಸ್ರೇಲಿ ಒತ್ತೆಯಾಳು ಮಿಯಾ ಸ್ಕೆಮ್

ಹಮಾಸ್ ಒತ್ತೆಯಾಳಾಗಿದ್ದ 21 ವರ್ಷದ ಫ್ರೆಂಚ್ ಹಚ್ಚೆ ಕಲಾವಿದೆ ಮಿಯಾ ಸ್ಕೆಮ್ 54 ದಿನಗಳ ಕಾಲ ಭಯೋತ್ಪಾದಕರ ಹಿಡಿತದಲ್ಲಿದ್ದರೂ ತನ್ನ ಮೇಲೆ ಯಾಕೆ ಅತ್ಯಾಚಾರ ಮಾಡಿಲ್ಲ ಎಂಬ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಮಿಯಾ ಸ್ಕೆಮ್ಇದನ್ನೂ ಓದಿ: ಇಸ್ರೇಲ್- ಹಮಾಸ್ ಯುದ್ಧ: ಗಾಜಾದಲ್ಲಿ 20,000 ಪ್ಯಾಲೆಸ್ಟೀನಿಗಳ ಸಾವು, ಶೇ.80 ರಷ್ಟು ಜನರ ಸ್ಥಳಾಂತರ
ಮಿಯಾ ಸ್ಕೆಮ್ಇದನ್ನೂ ಓದಿ: ಇಸ್ರೇಲ್- ಹಮಾಸ್ ಯುದ್ಧ: ಗಾಜಾದಲ್ಲಿ 20,000 ಪ್ಯಾಲೆಸ್ಟೀನಿಗಳ ಸಾವು, ಶೇ.80 ರಷ್ಟು ಜನರ ಸ್ಥಳಾಂತರ

ಹಮಾಸ್ ಒತ್ತೆಯಾಳಾಗಿದ್ದ 21 ವರ್ಷದ ಫ್ರೆಂಚ್ ಹಚ್ಚೆ ಕಲಾವಿದೆ ಮಿಯಾ ಸ್ಕೆಮ್ 54 ದಿನಗಳ ಕಾಲ ಭಯೋತ್ಪಾದಕರ ಹಿಡಿತದಲ್ಲಿದ್ದರೂ ತನ್ನ ಮೇಲೆ ಯಾಕೆ ಅತ್ಯಾಚಾರ ಮಾಡಿಲ್ಲ ಎಂಬ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪು ಹಮಾಸ್ ದಾಳಿಯ ಸಮಯದಲ್ಲಿ ಒತ್ತೆಯಾಳಾಗಿದ್ದ ಮಿಯಾ ಸ್ಕೆಮ್ 54 ದಿನಗಳ ನಂತರ ಬಿಡುಗಡೆಯಾಗಿದ್ದರು. ಹಮಾಸ್ ಭಯೋತ್ಪಾದಕ ತನ್ನ ಹೆಂಡತಿ ಮಕ್ಕಳೊಂದಿಗೆ ಬೇರೆ ಕೋಣೆಯಲ್ಲಿ ನೆಲೆಸಿದ್ದರು. ನನ್ನನ್ನು ಕತ್ತಲೆ ಕೋಣೆಯಲ್ಲಿ ಇರಿಸಿದ್ದರು ಹೀಗಾಗಿ ಆತ ನನ್ನ ಮೇಲೆ ಅತ್ಯಾಚಾರ ಮಾಡದಿರಲು ಅದೊಂದೇ ಕಾರಣ ಎಂದು ಹೇಳಿದ್ದಾರೆ.

ನನ್ನನ್ನು ಕತ್ತಲೆಯ ಕೋಣೆಯಲ್ಲಿ ಲಾಕ್ ಮಾಡಿದ್ದರು. ನನಗೆ ಸರಿಯಾಗಿ ಊಟ ಕೊಡುತ್ತಿರಲಿಲ್ಲ. ನಾನು ಮಾತನಾಡಲು, ಯಾರನ್ನು ನೋಡಲು ಬಿಡುತ್ತಿರಲಿಲ್ಲ ಎಂದು ಇಸ್ರೇಲ್‌ನ ಚಾನೆಲ್ 13 ಗೆ ಸ್ಕೀಮ್ ಹೇಳಿದರು. ಉಗ್ರ ದಿನದ 24 ಗಂಟೆಯೂ ನಿನ್ನನ್ನು ನೋಡುತ್ತಿದ್ದನು. ಅವನು ಕಣ್ಣುಗಳಿಂದಲೇ ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾನೆ ಎಂದು ನನಗೆ ಅನಿಸುತ್ತಿತ್ತು. ನನಗೆ ಅತ್ಯಾಚಾರಕ್ಕೊಳಗಾಗುವ ಭಯವಿತ್ತು. ಸಾಯುತ್ತೇನೆ ಎಂಬ ಆತಂಕವಿತ್ತು ಎಂದು ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ನೋವಾ ಸಂಗೀತ ಉತ್ಸವದಿಂದ ಸ್ಕೆಮ್‌ಳನ್ನು ಅಪಹರಿಸಲಾಗಿತ್ತು. ತಾವು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ಭಯೋತ್ಪಾದಕರು ತಮ್ಮ ಕಾರಿಗೆ ಬೆಂಕಿ ಹಚ್ಚಿದರು ಎಂದು ಸ್ಕೆಮ್ ನೆನಪಿಸಿಕೊಂಡರು. ನನ್ನನ್ನು ಅಲ್ಲಿಯೇ ಸುಟ್ಟು ಸಾಯಿಸಬೇಕೆ ಅಥವಾ ಅವನೊಂದಿಗೆ ಹೋಗಬೇಕೆ ಎಂಬುದು ಕ್ಷಣದ ನಿರ್ಧಾರವಾಗಿತ್ತು ಎಂದು ಅವರು ಹೇಳಿದರು.

ಗಾಜಾದಲ್ಲಿ ನಾಗರಿಕ ಕುಟುಂಬವೊಂದು ತನ್ನನ್ನು ಒತ್ತೆಯಾಳಾಗಿ ಮಾಡಿಕೊಂಡಿತ್ತು ಎಂದು ಸ್ಕೀಮ್ ಹೇಳಿದ್ದಾರೆ. ಕುಟುಂಬವು ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಲಾಗಿದೆ. "ನಾನು ಯಾವುದೋ ಕುಟುಂಬದೊಂದಿಗೆ ಇದ್ದೇನೆ ಎಂದು ನಾನು ಇದ್ದಕ್ಕಿದ್ದಂತೆ ಅರಿತುಕೊಂಡೆ" ಎಂದು ಅವರು ನೆನಪಿಸಿಕೊಂಡರು.

"ಗಾಜಾದಲ್ಲಿ ವಾಸಿಸುವ ಜನರ ಸ್ವಭಾವ, ಅವರು ನಿಜವಾಗಿಯೂ ಯಾರು ಮತ್ತು ನಾನು ಅಲ್ಲಿ ಅನುಭವಿಸಿದ್ದ ಕುರಿತು ಸತ್ಯವನ್ನು ಹೇಳುವುದು ಅವರಿಗೆ ಮುಖ್ಯವಾಗಿದೆ ಎಂದು ಸ್ಕೆಮ್ ಸಂದರ್ಶನದಲ್ಲಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com