ಯುದ್ಧ ಪೀಡಿತ ಗಾಜಾ ಚಿತ್ರ
ವಿದೇಶ
ಗಾಜಾದಲ್ಲಿ ಸಾವಿನ ಸಂಖ್ಯೆ 25,105 ಕ್ಕೆ ಏರಿಕೆ: ಹಮಾಸ್ ನೇತೃತ್ವದ ಗಾಜಾ ಆರೋಗ್ಯ ಸಚಿವಾಲಯ
ಇಸ್ರೇಲ್- ಹಮಾಸ್ ನಡುವಿನ ಯುದ್ಧದಲ್ಲಿ ಈ ವರೆಗೂ 25,105 ಮಂದಿ ಸಾವನ್ನಪ್ಪಿದ್ದಾರೆ.
ಗಾಜಾ: ಇಸ್ರೇಲ್- ಹಮಾಸ್ ನಡುವಿನ ಯುದ್ಧದಲ್ಲಿ ಈ ವರೆಗೂ 25,105 ಮಂದಿ ಸಾವನ್ನಪ್ಪಿದ್ದಾರೆ.
ಹಮಾಸ್ ನೇತೃತ್ವದ ಗಾಜಾ ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಅ.07 ರಿಂದ ಇಸ್ರೇಲ್ ಯುದ್ಧ ಘೋಷಿಸಿದಾಗಿನಿಂದ ಈ ವರೆಗೂ 25,105 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ಯುದ್ಧದ ಪರಿಣಾಮ ಇಸ್ರೇಲಿ ಪಡೆ ಹಾಗೂ ಪ್ಯಾಲೆಸ್ತೇನ್ ಸೇನೆಯ ನಡುವೆ ಉಂಟಾದ ಸಂಘರ್ಷದಲ್ಲಿ 62,681 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 178 ಮಂದಿ ಗಾಜಾದಾದ್ಯಂತ ಸಾವನ್ನಪ್ಪಿದ್ದಾರೆ.
"ಹತ್ತಾರು ಜನರು ಇನ್ನೂ ಅವಶೇಷಗಳಡಿಯಲ್ಲಿದ್ದಾರೆ" ಎಂದು ಹಮಾಸ್ ಸರ್ಕಾರದ ಮಾಧ್ಯಮ ಕಚೇರಿ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ