ಝೆಲೆನ್‌ಸ್ಕಿ ತವರೂರು ಕ್ರಿವಿ ರಿಹ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 9 ಮಕ್ಕಳು ಸೇರಿದಂತೆ 18 ಮಂದಿ ಸಾವು, 60 ಕ್ಕೂ ಹೆಚ್ಚು ಜನರಿಗೆ ಗಾಯ

ಕ್ಷಿಪಣಿ ವಸತಿ ಪ್ರದೇಶಕ್ಕೆ ಅಪ್ಪಳಿಸಿತು. ಸಮೀಪದಲ್ಲಿ ಆಟದ ಮೈದಾನವೂ ಇತ್ತು. ಮೃತರಲ್ಲಿ 9 ಮಕ್ಕಳೂ ಸೇರಿದ್ದಾರೆ ಎಂದು ಕ್ರಿವಿ ರಿಹ್‌ನ ರಕ್ಷಣಾ ಮಂಡಳಿಯ ಮುಖ್ಯಸ್ಥ ಓಲೆಕ್ಸಾಂಡರ್ ವಿಲ್ಕುಲ್ ಹೇಳಿದ್ದಾರೆ.
Burning car next to damaged buildings in Kryvyi Rig
ಕ್ರಿವಿ ರಿಹ್ ಮೇಲೆ ರಷ್ಯಾ ಕ್ಷಿಪಣಿ ದಾಳಿ
Updated on

ಕ್ವಿವ್: ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರ ಹುಟ್ಟೂರು ಮಧ್ಯ ಉಕ್ರೇನ್‌ನ ಕ್ರಿವಿ ರಿಹ್ ನಗರದ ಮೇಲೆ ಶುಕ್ರವಾರ ರಷ್ಯಾದ ಕ್ಷಿಪಣಿ ದಾಳಿ ನಡೆಸಿದೆ. ಘಟನೆಯಲ್ಲಿ 9 ಮಕ್ಕಳು ಸೇರಿ 18 ಮಂದಿ ಸಾವಿಗೀಡಾಗಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಿಪಣಿ ವಸತಿ ಪ್ರದೇಶಕ್ಕೆ ಅಪ್ಪಳಿಸಿತು. ಸಮೀಪದಲ್ಲಿ ಆಟದ ಮೈದಾನವೂ ಇತ್ತು. ಮೃತರಲ್ಲಿ 9 ಮಕ್ಕಳೂ ಸೇರಿದ್ದಾರೆ ಎಂದು ಕ್ರಿವಿ ರಿಹ್‌ನ ರಕ್ಷಣಾ ಮಂಡಳಿಯ ಮುಖ್ಯಸ್ಥ ಓಲೆಕ್ಸಾಂಡರ್ ವಿಲ್ಕುಲ್ ಹೇಳಿದ್ದಾರೆ.

ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ರಷ್ಯಾಕ್ಕೆ ಕದನ ವಿರಾಮ ಬೇಕಿಲ್ಲ. ನಾವು ಅದನ್ನು ನೋಡುತ್ತಿದ್ದೇವೆ' ಎಂದು ಝೆಲೆನ್‌ಸ್ಕಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಪಾಶ್ಚಿಮಾತ್ಯ ಬೋಧಕರು ಸಭೆ ಸೇರುತ್ತಿದ್ದ ನಗರದ ರೆಸ್ಟೋರೆಂಟ್ ಮೇಲೆ ಹೆಚ್ಚಿನ ಸ್ಫೋಟಕವಿರುವ ಕ್ಷಿಪಣಿಯೊಂದಿಗೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ.

Burning car next to damaged buildings in Kryvyi Rig
ರಷ್ಯಾ ಅಧ್ಯಕ್ಷರ ಕಾರು ಸ್ಫೋಟ: ವ್ಲಾಡಿಮಿರ್ ಪುಟಿನ್ ಹತ್ಯೆಗೆ ಸ್ಕೆಚ್? Video

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com