ಸುದರ್ಶನ್ ಪಟ್ನಾಯಕ್ ಗೆ ಬ್ರಿಟಿಷ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ; ಈ ಗೌರವ ಪಡೆದ ಮೊದಲ ಭಾರತೀಯ

ಮರಳು ಶಿಲ್ಪ ಕಲೆಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಪಟ್ನಾಯಕ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಲಾಗಿದೆ.
ಸುದರ್ಶನ್ ಪಟ್ನಾಯಕ್
ಸುದರ್ಶನ್ ಪಟ್ನಾಯಕ್
Updated on

ಲಂಡನ್: ವಿಶ್ವವಿಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಬ್ರಿಟನ್ ನಲ್ಲಿ ದಿ ಫ್ರೆಡ್ ಡ್ಯಾರಿಂಗ್ಟನ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದಿದ್ದು, ಇದರೊಂದಿಗೆ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕಲಾವಿದ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ದಕ್ಷಿಣ ಇಂಗ್ಲೆಂಡ್‌ನ ಡಾರ್ಸೆಟ್ ಕೌಂಟಿಯ ವೇಮೌತ್‌ನಲ್ಲಿ ಶನಿವಾರ ಪ್ರಾರಂಭವಾದ ಸ್ಯಾಂಡ್‌ವರ್ಲ್ಡ್ 2025 ಅಂತರರಾಷ್ಟ್ರೀಯ ಮರಳು ಕಲಾ ಉತ್ಸವದಲ್ಲಿ, ಮರಳು ಶಿಲ್ಪ ಕಲೆಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಪಟ್ನಾಯಕ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಲಾಗಿದೆ.

ಉತ್ಸವದಲ್ಲಿ ವೇಮೌತ್‌ನ ಮೇಯರ್ ಜಾನ್ ಒರೆಲ್ ಅವರು ಪಟ್ನಾಯಕ್ ಅವರಿಗೆ ಪ್ರಶಸ್ತಿ ಮತ್ತು ಪದಕವನ್ನು ಪ್ರದಾನ ಮಾಡಿದರು.

ಸುದರ್ಶನ್ ಪಟ್ನಾಯಕ್
ಡಾ. ವಿಷ್ಣುವರ್ಧನ್ 71ನೇ ಜನ್ಮಜಯಂತಿ: ಗಣ್ಯರು, ಸಿನಿತಾರೆಯರು, ಅಭಿಮಾನಿಗಳಿಂದ ಗೌರವ; ಒಡಿಶಾ ತೀರದಲ್ಲಿ ಮರಳು ಶಿಲ್ಪ 

ಸುದರ್ಶನ್ ಪಟ್ನಾಯಕ್ ಅವರು ಇದೇ ಉತ್ಸವದಲ್ಲಿ "ವಿಶ್ವ ಶಾಂತಿ" ಸಂದೇಶದೊಂದಿಗೆ 10 ಅಡಿ ಎತ್ತರದ ಗಣೇಶನ ಮರಳು ಶಿಲ್ಪವನ್ನು ರಚಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದರು.

"ವೇಮೌತ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ಮರಳು ಕಲಾ ಉತ್ಸವ ಸ್ಯಾಂಡ್‌ವರ್ಲ್ಡ್ 2025 ರಲ್ಲಿ ಫ್ರೆಡ್ ಡ್ಯಾರಿಂಗ್ಟನ್ ಅವರ ಬ್ರಿಟಿಷ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕಲಾವಿದ ಎಂಬ ಗೌರವಕ್ಕೆ ಪಾತ್ರನಾಗಿರುವುದು ಸಂತಸ ತಂದಿದೆ" ಎಂದು ಪಟ್ನಾಯಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com