
ದೀರ್ ಅಲ್-ಬಲಾಹ್: ಗಾಜಾ ಪಟ್ಟಿಯ ಫೀಲ್ಡ್ ಆಸ್ಪತ್ರೆಯ ಉತ್ತರ ದ್ವಾರದ ಮೇಲೆ ಇಸ್ರೇಲ್ ಮಂಗಳವಾರ ನಡೆಸಿದ ವಾಯುದಾಳಿಯಲ್ಲಿ ಒಬ್ಬ ವೈದ್ಯರು ಸಾವನ್ನಪ್ಪಿದ್ದು, ಒಂಬತ್ತು ಜನ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.
ಮುವಾಸಿ ಪ್ರದೇಶದ ಕುವೈತ್ ಫೀಲ್ಡ್ ಆಸ್ಪತ್ರೆಯ ಮೇಲೆ ಈ ದಾಳಿ ನಡೆದಿದ್ದು, ಲಕ್ಷಾಂತರ ಜನರು ವಿಶಾಲವಾದ ಟೆಂಟ್ ನಲ್ಲಿ ಆಶ್ರಯ ಪಡೆದಿದ್ದಾರೆ.
ಗಾಯಾಳುಗಳೆಲ್ಲರೂ ರೋಗಿಗಳು ಮತ್ತು ವೈದ್ಯರಾಗಿದ್ದು, ಇಬ್ಬರು ರೋಗಿಗಳ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವಕ್ತಾರ ಸಬರ್ ಮೊಹಮ್ಮದ್ ಹೇಳಿದ್ದಾರೆ.
ಈ ಬಗ್ಗೆ ಇಸ್ರೇಲ್ ಮಿಲಿಟರಿಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
18 ತಿಂಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ಮಿಲಿಟರಿ ಹಲವಾರು ಬಾರಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದು, ಹಮಾಸ್ ಉಗ್ರಗಾಮಿಗಳು ಅವುಗಳಲ್ಲಿ ಅಡಗಿಕೊಂಡಿದ್ದಾರೆ ಅಥವಾ ಮಿಲಿಟರಿ ಉದ್ದೇಶಗಳಿಗಾಗಿ ಅವುಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದೆ.
ಇಸ್ರೇಲ್ ಆರೋಪವನ್ನು ಆಸ್ಪತ್ರೆ ಸಿಬ್ಬಂದಿ ತಳ್ಳಿಹಾಕಿದ್ದು, ಇಸ್ರೇಲ್ ಅಜಾಗರೂಕತೆಯಿಂದ ನಾಗರಿಕರನ್ನು ಅಪಾಯಕ್ಕೆ ತಳ್ಳಿದೆ ಮತ್ತು ಈ ಪ್ರದೇಶದ ಆರೋಗ್ಯ ವ್ಯವಸ್ಥೆಯನ್ನು ನಾಶ ಮಾಡಿದೆ ಎಂದು ಹೇಳಿದ್ದಾರೆ.
ಆಸ್ಪತ್ರೆಯನ್ನು ನಡೆಸುತ್ತಿರುವ ಜೆರುಸಲೆಮ್‌ನ ಎಪಿಸ್ಕೋಪಲ್ ಡಯೋಸಿಸ್ ಇಸ್ರೇಲ್ ನ ಈ ದಾಳಿಯನ್ನು ಖಂಡಿಸಿದೆ.
Advertisement