ಕ್ರಿಶ್ಚಿಯನ್‌ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ವಿಧಿವಶ: ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಇನ್ನಿಲ್ಲ

ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರವಾಗಿರುವ ಇಂದು ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
Pope Francis
ಪೋಪ್‌ ಫ್ರಾನ್ಸಿಸ್‌
Updated on

ವ್ಯಾಟಿಕನ್ ಸಿಟಿ: ಕ್ರಿಶ್ಚಿಯನ್‌ ಜಾಗತಿಕ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಇಂದು (ಏ.21-ಸೋಮವಾರ) ಕೊನೆಯುಸಿರೆಳೆದಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಪೋಪ್‌ ಫ್ರಾನ್ಸಿಸ್‌ ನಿಧನರಾಗಿದ್ದಾರೆ ಎಂದು ವ್ಯಾಟಿಕನ್‌ ಸಿಟಿ ಮೂಲಗಳು ಖಚಿತಪಡಿಸಿವೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 7:35 ಕ್ಕೆ ಫ್ರಾನ್ಸಿಸ್ ಇಹಲೋಕ ತ್ಯಜಿಸಿದರು ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ, ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರವಾಗಿರುವ ಇಂದು ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಪೋಪ್ ಫ್ರಾನ್ಸಿಸ್ ಸೋಮವಾರ ಬೆಳಿಗ್ಗೆ ನಿಧನರಾದರು ಎಂದು ವ್ಯಾಟಿಕನ್ ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫೆರೆಲ್ ಘೋಷಿಸಿದ್ದಾರೆ. ಅವರ ಇಡೀ ಜೀವನವು ಭಗವಂತನ ಮತ್ತು ಅವರ ಚರ್ಚ್‌ ಸೇವೆಗೆ ಸಮರ್ಪಿತವಾಗಿತ್ತು ಎಂದು ಫಾರೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ತನಾದ ಯೇಸುವಿನ ನಿಜವಾದ ಶಿಷ್ಯನಾಗಿ ಅವರ ಮಾದರಿಗೆ ಅಪಾರ ಕೃತಜ್ಞತೆಯೊಂದಿಗೆ, ಪೋಪ್ ಫ್ರಾನ್ಸಿಸ್ ಅವರ ಆತ್ಮವನ್ನು ದೇವರ ಅನಂತ, ಕರುಣಾಮಯಿ ಪ್ರೀತಿಗೆ, ಏಕ ಮತ್ತು ನ್ಯಾಯಮಂಡಳಿಗೆ ಅರ್ಪಿಸುತ್ತೇವೆ.

ವ್ಯಾಟಿಕನ್ ನ್ಯೂಸ್ ಟ್ವಿಟ್ಟರ್‌ ಪೇಜ್ ಈ ವಿಚಾರವನ್ನು ಖಚಿತಪಡಿಸಿದೆ. ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರ, ಏಪ್ರಿಲ್ 21, 2025 ರಂದು ತಮ್ಮ 88 ನೇ ವಯಸ್ಸಿನಲ್ಲಿ ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅದು ತಿಳಿಸಿದೆ. ವ್ಯಾಟಿಕನ್‌ನ ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ಅವರು ಪೋಪ್ ನಿಧಾನದ ಸುದ್ದಿಯನ್ನು ಘೋಷಣೆ ಮಾಡಿದ್ದಾರೆ. ಪೋಪ್ ಅವರ ನಿಧನದಿಂದ ಜಗತ್ತಿನೆಲ್ಲೆಡೆ ಇರುವ ಕ್ರೈಸ್ತ ಸಮುದಾಯದಲ್ಲಿ ಶೋಕ ಮಡುಗಟ್ಟಿದೆ.

Pope Francis
ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗಂಭೀರ: ಉಸಿರಾಟದ ತೊಂದರೆ, ವೆಂಟಿಲೇಟರ್ ನೆರವು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com