Pahalgam Attack: ಭಾರತದ ಆರೋಪ ನಿರಾಕರಿಸಿ ಪಾಕಿಸ್ತಾನ ಸೆನೆಟ್ ನಿರ್ಣಯ ಅಂಗೀಕಾರ!

ಜಲ ಭಯೋತ್ಪಾದನೆ, ಮಿಲಿಟರಿ ಪ್ರಚೋದನೆ ಸೇರಿದಂತೆ ಯಾವುದೇ ಆಕ್ರಮಣದ ವಿರುದ್ಧ ಪಾಕಿಸ್ತಾನದ ಸಾರ್ವ ಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸಂಪೂರ್ಣ ಸಾಮರ್ಥ್ಯ ಹೊಂದಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
Pahalgam Attack
ಉಗ್ರರು ಗುಂಡಿನ ದಾಳಿ ನಡೆಸಿದ ಸ್ಥಳ
Updated on

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಅಮಾನುಷ ಉಗ್ರರ ದಾಳಿ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬ ಭಾರತದ ಆರೋಪವನ್ನು ನಿರಾಕರಿಸುವ ನಿರ್ಣಯವೊಂದನ್ನು ಪಾಕಿಸ್ತಾನ ಸೆನೆಟ್ ಶುಕ್ರವಾರ ಅಂಗೀಕರಿಸಿದೆ.

ಜಲ ಭಯೋತ್ಪಾದನೆ, ಮಿಲಿಟರಿ ಪ್ರಚೋದನೆ ಸೇರಿದಂತೆ ಯಾವುದೇ ಆಕ್ರಮಣದ ವಿರುದ್ಧ ಪಾಕಿಸ್ತಾನದ ಸಾರ್ವ ಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸಂಪೂರ್ಣ ಸಾಮರ್ಥ್ಯ ಹೊಂದಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಇಶಾಕ್ ದಾರ್ ಮಂಡಿಸಿದರು. ಇದಕ್ಕೆ ಸಂಸತ್ತಿನ ಮೇಲ್ಮನೆಯಲ್ಲಿ ಎಲ್ಲ ಪಕ್ಷಗಳಿಂದ ಬೆಂಬಲ ದೊರೆಯಿತು.

Pahalgam Attack
Pahalgam terror attack: ನೌಕಪಡೆ ಅಧಿಕಾರಿ ವಿನಯ್ ದಂಪತಿಯದ್ದು ಎನ್ನಲಾದ ವಿಡಿಯೋ ನಕಲಿ! ಮಾಧ್ಯಮಗಳ ವಿರುದ್ಧ ಕಿಡಿ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದ ನಡೆದ ದಾಳಿಯೊದಿಗೆ ಪಾಕಿಸ್ತಾನವನ್ನು ಭಾಗಿಯಾಗಿಸುವ ಎಲ್ಲ ವಿವೇಚನಾ ಹಾಗೂ ಆಧಾರ ರಹಿತ ಆರೋಪಗಳನ್ನು ತಿರಸ್ಕರಿಸಲಾಗುವುದು. ಅಮಾಯಕ ನಾಗರಿಕರ ಹತ್ಯೆ ಪಾಕ್ ಎತ್ತಿ ಹಿಡಿಯುವ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com