
ವಾಷಿಂಗ್ಟನ್: ಕಂಪ್ಯೂಟರ್ ಚಿಪ್‌ಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ, ಇದರಿಂದ ಡಿಜಿಟಲ್ ಯುಗಕ್ಕೆ ಶಕ್ತಿ ತುಂಬುವ ಪ್ರೊಸೆಸರ್‌ಗಳನ್ನು ಅವಲಂಬಿಸಿರುವ ಎಲೆಕ್ಟ್ರಾನಿಕ್ಸ್, ಆಟೋಗಳು, ಗೃಹೋಪಯೋಗಿ ಉಪಕರಣಗಳು ಮತ್ತು ಇತರ ಅಗತ್ಯ ಉತ್ಪನ್ನಗಳಿಗೆ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.
ನಾವು ಚಿಪ್‌ಗಳು ಮತ್ತು ಸೆಮಿಕಂಡಕ್ಟರ್‌ಗಳ ಮೇಲೆ ಸರಿಸುಮಾರು ಶೇ.100 ರಷ್ಟು ಸುಂಕ ವಿಧಿಸುತ್ತೇವೆ ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ಆಪಲ್ ಸಿಇಒ ಟಿಮ್ ಕುಕ್ ಅವರನ್ನು ಭೇಟಿಯಾದಾಗ ಹೇಳಿದರು. ಆದರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ನಿರ್ಮಿಸುತ್ತಿದ್ದರೆ, ಯಾವುದೇ ಶುಲ್ಕ ಹೇರುವುದಿಲ್ಲ ಎಂದಿದ್ದಾರೆ.
ಅಮೆರಿಕದಲ್ಲಿ ಕಂಪ್ಯೂಟರ್ ಚಿಪ್‌ಗಳನ್ನು ತಯಾರಿಸುವ ಕಂಪನಿಗಳು ಆಮದು ತೆರಿಗೆಯಿಂದ ಮುಕ್ತವಾಗುತ್ತವೆ ಎಂದು ಅಧ್ಯಕ್ಷರು ಹೇಳಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಕಂಪ್ಯೂಟರ್ ಚಿಪ್‌ಗಳ ಕೊರತೆಯು ಆಟೋಗಳ ಬೆಲೆಯನ್ನು ಹೆಚ್ಚಿಸಿತು. ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಯಿತು.
ಕಳೆದ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಶ್ವೇತಭವನಕ್ಕೆ ಅಧ್ಯಕ್ಷರಾಗಿ ಮರಳಿದ ನಂತರ, ಬಿಗ್ ಟೆಕ್ ಕಂಪನಿಯು ಅಮೆರಿಕದಲ್ಲಿ ಸುಮಾರು 1.5 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡಲು ಸಾಮೂಹಿಕ ಬದ್ಧತೆ ತೋರಿಸಿದೆ. ಐಫೋನ್ ತಯಾರಕ ಕಂಪನಿಯು ಫೆಬ್ರವರಿಯಲ್ಲಿ ಮಾಡಿದ ಹಿಂದಿನ ಬದ್ಧತೆಗೆ ಮತ್ತೊಂದು 100 ಬಿಲಿಯನ್ ಡಾಲರ್ ನೀಡುವ ಮೂಲಕ ತನ್ನ ಬದ್ಧತೆಯನ್ನು ಹೆಚ್ಚಿಸಿದ ನಂತರ ಆಪಲ್ ನೀಡಿದ 600 ಬಿಲಿಯನ್ ಡಾಲರ್ ಭರವಸೆಯೂ ಇದರಲ್ಲಿ ಸೇರಿದೆ.
ಕಂಪ್ಯೂಟರ್ ಚಿಪ್‌ಗಳಿಗೆ ಬೇಡಿಕೆ ವಿಶ್ವಾದ್ಯಂತ ಏರುತ್ತಿದೆ, ಜೂನ್‌ನಲ್ಲಿ ಕೊನೆಗೊಂಡ ವರ್ಷಾಂತ್ಯದಲ್ಲಿ ಮಾರಾಟವು 19.6% ರಷ್ಟು ಹೆಚ್ಚಾಗಿದೆ ಎಂದು ವರ್ಲ್ಡ್ ಸೆಮಿಕಂಡಕ್ಟರ್ ಟ್ರೇಡ್ ಸ್ಟ್ಯಾಟಿಸ್ಟಿಕ್ಸ್ ಸಂಸ್ಥೆ ತಿಳಿಸಿದೆ.
Advertisement