US-India ಮಧ್ಯೆ ಸುಂಕ ಸಮರ: ವ್ಯಾಪಾರ ಮಾತುಕತೆ ತಳ್ಳಿಹಾಕಿದ Donald Trump

ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ 25 ಶೇಕಡಾ ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶವನ್ನು ಹೊರಡಿಸಿದ್ದು, ಒಟ್ಟು ಸುಂಕವನ್ನು ಶೇಕಡಾ 50ಕ್ಕೆ ಹೆಚ್ಚಿಸಲಾಗಿದೆ.
Prime Minister Narendra Modi and US President Donald Trump
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಭಾರತೀಯ ಆಮದು ವಸ್ತುಗಳ ಮೇಲಿನ ಸುಂಕವನ್ನು ದ್ವಿಗುಣಗೊಳಿಸುವ ನಿರ್ಧಾರವನ್ನು ಅನುಸರಿಸಿ, ಸುಂಕದ ಕುರಿತಾದ ವಿವಾದ ಬಗೆಹರಿಯುವವರೆಗೆ ಭಾರತದೊಂದಿಗೆ ಯಾವುದೇ ವ್ಯಾಪಾರ ಮಾತುಕತೆಗಳಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನಿನ್ನೆ ಓವಲ್ ಕಚೇರಿಯಲ್ಲಿ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಭಾರತದ ಆಮದು ವಸ್ತುಗಳ ಮೇಲೆ ಶೇಕಡಾ 50ರವರೆಗೆ ಸುಂಕ ಹೇರಿಕೆ ಹಿನ್ನೆಲೆಯಲ್ಲಿ ಎರಡೂ ದೇಶಗಳ ಮಧ್ಯೆ ಸುಂಕ ಸಮರ ಏರ್ಪಟ್ಟಿದ್ದು ಮಾತುಕತೆಗಳು ಪುನರಾರಂಭಗೊಳ್ಳುತ್ತವೆಯೇ ಎಂದು ಕೇಳಿದಾಗ. "ಇಲ್ಲ, ನಾವು ಅದನ್ನು ಪರಿಹರಿಸುವವರೆಗೆ ಇಲ್ಲ ಎಂದು ಉತ್ತರಿಸಿದರು.

ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ 25 ಶೇಕಡಾ ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶವನ್ನು ಹೊರಡಿಸಿದ್ದು, ಒಟ್ಟು ಸುಂಕವನ್ನು ಶೇಕಡಾ 50ಕ್ಕೆ ಹೆಚ್ಚಿಸಲಾಗಿದೆ. ಅಮೆರಿಕ ಸರ್ಕಾರವು ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಕಾಳಜಿಗಳನ್ನು ಉಲ್ಲೇಖಿಸಿ, ನಿರ್ದಿಷ್ಟವಾಗಿ ಭಾರತದ ನಿರಂತರ ರಷ್ಯಾದ ತೈಲ ಆಮದುಗಳನ್ನು ಸೂಚಿಸುತ್ತದೆ.

ಈ ಆಮದುಗಳು, ನೇರ ಅಥವಾ ಮಧ್ಯವರ್ತಿಗಳ ಮೂಲಕ, ಅಮೆರಿಕಕ್ಕೆ ಅಸಾಮಾನ್ಯ ಮತ್ತು ಅಸಾಧಾರಣ ಬೆದರಿಕೆಯನ್ನು ಒಡ್ಡುತ್ತವೆ ಮತ್ತು ತುರ್ತು ಆರ್ಥಿಕ ಕ್ರಮಗಳನ್ನು ಸಮರ್ಥಿಸುತ್ತವೆ ಎಂದು ಆದೇಶವು ಹೇಳುತ್ತದೆ.

ಯುಎಸ್ ಅಧಿಕಾರಿಗಳ ಪ್ರಕಾರ, ಆರಂಭಿಕ ಶೇಕಡಾ 25 ಸುಂಕವು ನಿನ್ನೆ ಆಗಸ್ಟ್ 7 ರಂದು ಜಾರಿಗೆ ಬಂದಿತು. ಹೆಚ್ಚುವರಿ ಸುಂಕ ಇನ್ನು 21 ದಿನಗಳಲ್ಲಿ ಜಾರಿಗೆ ಬರಲಿದೆ. ಯುಎಸ್ ಬಂದರುಗಳನ್ನು ಪ್ರವೇಶಿಸುವ ಎಲ್ಲಾ ಭಾರತೀಯ ಸರಕುಗಳಿಗೆ ಅನ್ವಯಿಸುತ್ತದೆ.

ಎರಡೂ ದೇಶಗಳ ನಡುವಿನ ವ್ಯಾಪಾರ ಉದ್ವಿಗ್ನತೆಯಲ್ಲಿ ಈ ಬಿಕ್ಕಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಏಕೆಂದರೆ ಎರಡೂ ರಾಷ್ಟ್ರಗಳು ತಮ್ಮ ಆರ್ಥಿಕ ನೀತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಕಡೆ ಗಮನ ಹರಿಸಬೇಕಿದೆ.

Prime Minister Narendra Modi and US President Donald Trump
Watch | ಅಮೆರಿಕಾ ದುಪ್ಪಟ್ಟು ತೆರಿಗೆ: ರೈತರ ಹಿತಾಸಕ್ತಿ ಕಾಪಾಡಲು ಭಾರತ ಸಿದ್ಧ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com