
ಬಲೂಚಿಸ್ತಾನ: ಕಳೆದ ಎರಡು ದಿನಗಳಲ್ಲಿ ಅಫ್ಘಾನಿಸ್ತಾನ ಗಡಿ ಬಳಿಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳು ಕನಿಷ್ಠ 47 ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಪಾಕ್ ಸೇನೆ ಮಾಧ್ಯಮ ವಿಭಾಗ ಶನಿವಾರ ತಿಳಿಸಿದೆ.
ಆಗಸ್ಟ್ 7-8 ರ ಮಧ್ಯರಾತ್ರಿ ಝೋಬ್ ಜಿಲ್ಲೆಯ ಸಂಬಾಜಾದಲ್ಲಿ ಭದ್ರತಾ ಪಡೆಗಳು ಉಗ್ರ ವಿರೋಧಿ ಕಾರ್ಯಾಚರಣೆ ನಡೆಸಿ 33 ಭಯೋತ್ಪಾದಕರನ್ನು ಕೊಂದಿವೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಆಗಸ್ಟ್ 8-9 ರ ಮಧ್ಯರಾತ್ರಿ ಅಫ್ಘಾನಿಸ್ತಾನ ಗಡಿಯಲ್ಲಿರುವ ಸಂಬಾಜಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಇನ್ನೂ 14 ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ ಎಂದು ಐಎಸ್‌ಪಿಆರ್ ತಿಳಿಸಿದೆ.
ಹತ್ಯೆಗೀಡಾದ ಭಯೋತ್ಪಾದಕರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಐಎಸ್‌ಪಿಆರ್ ಹೇಳಿದೆ.
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ(ಟಿಟಿಪಿ) 2022 ರ ನವೆಂಬರ್‌ನಲ್ಲಿ ಸರ್ಕಾರದೊಂದಿಗೆ ತನ್ನ ಕದನ ವಿರಾಮ ರದ್ದುಗೊಳಿಸಿದಾಗಿನಿಂದ, ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು, ವಿಶೇಷವಾಗಿ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ತೀವ್ರ ಏರಿಕೆ ಕಂಡಿದೆ.
Advertisement