Apple ವಿರುದ್ಧ ಕೇಸ್ ದಾಖಲಿಸಲು ಎಲಾನ್ ಮಾಸ್ಕ್ ಮುಂದು! ಕಾರಣ ಇಷ್ಟೇ...

App Store ನ ಟಾಪ್ ಆ್ಯಪ್ ಗಳಲ್ಲಿ x featuring ಮತ್ತು Grok ಚಾಟ್ ಬಾಟ್ ಆ್ಯಪ್ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
Elon Musk
ಎಲಾನ್ ಮಾಸ್ಕ್
Updated on

ವಾಷಿಂಗ್ಟನ್: ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಹಾಗೂ ಸ್ಪೆಸ್ ಎಕ್ಸ್, ಟೆಸ್ಲಾ, x ಮಾಲೀಕ ಎಲಾನ್ ಮಾಸ್ಕ್ ಇದೀಗ ಆ್ಯಪಲ್ ಕಂಪನಿ ವಿರುದ್ಧ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ. App Store ನ ಟಾಪ್ ಆ್ಯಪ್ ಗಳಲ್ಲಿ x featuring ಮತ್ತು Grok ಚಾಟ್ ಬಾಟ್ ಆ್ಯಪ್ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಈ ಕುರಿತು ಸೋಮವಾರ ರಾತ್ರಿ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಮಾಸ್ಕ್, ಹೇ @Apple ಆ್ಯಪ್ ಸ್ಟೋರ್, ಜಗತ್ತಿನಲ್ಲಿ x ನಂಬರ್ 1 ನ್ಯೂಸ್ ಆ್ಯಪ್ ಆಗಿರುವಾಗ ಮತ್ತು ಎಲ್ಲಾ ಆ್ಯಪ್ ಗಳಲ್ಲಿ 5 ಆಗಿರುವ Grokನ್ನು ನಿಮ್ಮ ‘Must Have’ಸೆಕ್ಷನ್ ನಿಂದ ತಿರಸ್ಕರಿಸಲು ಕಾರಣವೇನು?ನೀವು ರಾಜಕೀಯ ಮಾಡ್ತಿದ್ದೀರಾ? ಕಾರಣ ಏನು ಎಂಬುದನ್ನು ನೀಡಿ? ಇದಕ್ಕೆ ಅನೇಕ ಜನರು ಉತ್ತರ ತಿಳಿದುಕೊಳ್ಳಲು ಬಯಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. Grok ಮಾಸ್ಕ್ ಒಡೆತನದ AI ಸ್ಟಾರ್ಟ್ ಅಫ್ ಆಗಿದೆ.

"OpenAI ಹೊರತುಪಡಿಸಿ ಬೇರೆ ಯಾವುದೇ AI ಕಂಪನಿಯು ಆಪ್ ಸ್ಟೋರ್‌ನಲ್ಲಿ ನಂಬರ್ 1 ತಲುಪಲು ಅಸಾಧ್ಯವಾಗುವಂತೆ ಆ್ಯಪಲ್ ವರ್ತಿಸುತ್ತಿದೆ. ಇದು ನಂಬಿಕೆ ಉಲ್ಲಂಘನೆಗೆ ಸಮನವಾಗಿದ್ದು, xAI ತಕ್ಷಣವೇ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಮುಂದಿನ ವಿವಾರ ನೀಡಿಲ್ಲ.

ಇದಕ್ಕೆ ಆ್ಯಪಲ್ ಕಂಪನಿಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಇತ್ತೀಚಿನ ದಿನಗಳಲ್ಲಿ ಇದು ಅನೇಕ ಆರೋಪಗಳನ್ನು ಎದುರಿಸುತ್ತಿದೆ.

ಮಂಗಳವಾರದ ಆರಂಭದಲ್ಲಿ, Apple ಆಪ್ ಸ್ಟೋರ್‌ನಲ್ಲಿ ಟಿಕ್‌ಟಾಕ್, ತದನಂತರ ಟಿಂಡರ್, ಡ್ಯುಯೊಲಿಂಗೋ, ಯೂಟ್ಯೂಬ್ ಮತ್ತು ಬಂಬಲ್ ಟಾಪ್ ಆ್ಯಪ್ ಗಳಾಗಿದ್ದು Open AI'ChatGPT 7ನೇ ಸ್ಥಾನದಲ್ಲಿದೆ.

Elon Musk
ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಪ್ರಾರಂಭಿಸಲು ಎಲೋನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್ GMPCS ಸಿಕ್ತು ಲೈಸನ್ಸ್!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com